ವಿಜಾಪುರಕ್ಕೆ ಹೋದ ಸಂಗತಿಯನ್ನು ಹೇಳಲವಶ್ಯವಾದದ್ದರಿಂದ, ಕೂಡಲೇ ಬಂದು ಹೇಳಿದನು. ಇನ್ನೊಂದು ವಿಶೇಷ ಸಂಗತಿಯನ್ನು ಹೇಳುವೆನು. ಆ ಮುನುಷ್ಯನು ಯಾರೆಂಬುದು ನನಗೆ ಗೊತ್ತಾಗದೆಯಿದ್ದರೂ, ಆ ಮನುಷ್ಯನಿಗೂ ಮಾಸಾಹೇಬರಿಗೂ ಭೆಟ್ಟಿಯಾದದನ್ನು ನಾನು ನೋಡಿದೆನು. ಅವರಿಬ್ಬರ ಭೆಟ್ಟಿಯಾಯಿತೆನ್ನುವದಕ್ಕಿಂತ, ಆ ಕರಿಯ ಮನುಷ್ಯನೇ ಮಾಸಾಹೇಬರ ಭೆಟ್ಟಿಯನ್ನು ಬುದ್ಧಿಪೂರ್ವಕವಾಗಿ ತೆಗೆದುಕೊಂಡನೆಂದು ಹೇಳಬಹುದು; ಯಾಕೆಂದರೆ ಮಾಸಾಹೇಬರು ತಮ್ಮ ಮನೆಯ ಪಾವಟಿಗೆಗಳನ್ನು ಹತ್ತಿಹೋಗುತ್ತಿರುವನದನ್ನು ನೋಡಿ, ಆ ಬಲಭೀಮನು ತನ್ನನ್ನು ಸುತ್ತುಹಾಕಿದ ಜನರೊಳಗಿಂದ ನುಸಿದು ನೆಟ್ಟಗೆ ಬಾಣಹೊಡೆದ ಹಾಗೆ ಮಾಸಾಹೇಬರ ಬಳಿಗೆ ಓಡಿ ಹೋದನು. ಅತ್ತ ವಾಸಾಹೇಬರ ವೃದ್ದ ದಾಸಿಯೂ, ಮಾಸಾಹೇಬರೂ ಏನೋ ಗುಜುಗುಟುತ್ತಿರುವಷ್ಟರಲ್ಲಿ, ಬಲಭೀಮನು ವಾಸಾಹೇಬರ ತೀರ ಹತ್ತಿರಕ್ಕೆ ಹೋದನು. ಆಗ ಅವರ ಕಾವಲುಗಾರರು ಓಡಿಹೋಗಿ ಅವನನ್ನು ಹಿಂದಕ್ಕೆ ಜಗಿಕೊಂಡರು. ಅದನ್ನು ನೋಡಿ ಮಾಸಾಹೇಬರು ತಮ್ಮ ಜನರಿಗೆ-ಅವನನ್ನು ಬಿಡಿರಿ. ಪಾಪ ! ನನ್ನಮುಂದೆ ಏನೋ ಹೇಳಲಿಕ್ಕೆ ಬಂದಿದ್ದಾನೆ, ಕೇಳಿಕೊಳ್ಳವನು, ಎಂದು ಹೇಳಿದ್ದರಿಂದ, ಅವನನ್ನು ಕಾವಲುಗಾರರು ಬಿಟ್ಟರು. ಆಮೇಲೆ ಮಾಸಾಹೇಬರ ವೃದ್ದದಾಸಿಯು ಆತನನ್ನು ಕರಕೊಂಡು ಮನೆಯೊಳಗೆ ಹೋದಳು. ಆಗಿನಿಂದ ಇಲ್ಲಿಗೆ ನಾನು ಬರುವದಕ್ಕಾಗಿ ಹೊರಡುವವರೆಗೆ ಯಾವ ಸುದ್ದಿಯೂ ನನಗೆ ಗೊತ್ತಾಗಲಿಲ್ಲ. ಮಾಸಾಹೇಬರ ಜನರು ತಮ್ಮೊಳಗೆ ಗುಜುಗುಟುತಿದ್ದರು, ಮಾಸಾಹೇಬರಿಗೂ, ಆ ಮನುಷ್ಯನಿಗೂ ಮೊದಲಿನ ಪರಿಚಯವಿರಬಹುದೆಂಬುದು ಅವರ ಗುಜುಗುಟ್ಟುತ್ತಿರುವದರ ತಾತ್ಪರ್ಯವಾಗಿರುವದು.
ಗುಪ್ತಚಾರನ ಈ ಮಾತುಗಳನ್ನು ರಾಮರಾಜನು ಲಕ್ಷ್ಯಪೂರ್ವಕವಾಗಿ ಕೇಳುತ್ತಿದ್ದನು. ಕೇಳಕೇಳುತ್ತ ಆತನು ನಡುವೆ ಚಾರನನ್ನು ನಿಲ್ಲಿಸಿ ರಣಮಸ್ತಖಾನನು ವಿಜಾಪುರಕ್ಕೆ ಯಾಕೆ ಹೋದನೆಂಬ ಸುದ್ದಿಯೇನಾದರೂ ನಿನಗೆ ಗೊತ್ತಿದೆಯೋ ? ನೂರಜಹಾನಳನ್ನು ಕಳಸಲಿಕ್ಕಷ್ಟೇ ಆತನು ಹೋಗಿರಲಿಕ್ಕಿಲ್ಲ ಎಂದು ನಿನ್ನನ್ನು ಕೇಳುತ್ತೇನೆ, ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಚಾರನು ಸರಕಾರ, ನನಗೆ ಬಹಳ ಲಾಂಛನದ ಮಾತು, ನನಗೆ ನಿಜವಾದ ಕಾರಣವು ನಂಬಿಗೆಯಾಗುವಂತೆ ತಿಳಿದಿರುವದಿಲ್ಲೆಂದು ಅಸಮಾಧಾನದಿಂದ ಹೇಳಿಕೊಳ್ಳುವನು. ಆ ಸಂಬಂಧದಿಂದ ಅಲ್ಲಿಯ ಜನರ ತರ್ಕವೇನಾಗಿರುತ್ತದೆಂಬದನ್ನು ಹೇಳುತ್ತೇನೆ.