ಈ ಪುಟವನ್ನು ಪ್ರಕಟಿಸಲಾಗಿದೆ
೧೭೬
ಕನ್ನಡಿಗರ ಕರ್ಮಕಥೆ

ಮನಸ್ಸಿನವನೂ, ಕುದ್ರನೂ ಅಲ್ಲೆಂಬುದು ಮಾಸಾಹೇಬರಿಗೆ ಗೊತ್ತಿತ್ತು. ಆದ್ದರಿಂದ ಮಗನು ಮಧ್ಯರಾತ್ರಿಯಲ್ಲಿ ವಿಜಯನಗರದ ಕಡೆಗೆ ಹೋಗಲಿಕ್ಕೆ ಗುಪ್ತ ಒಳಸಂಚೇ ಕಾರಣವೆಂದು ಅವರು ತರ್ಕಿಸಿದರು. ರಾಮರಾಜನು ಒಳ್ಳೆ ಸವಿಮಾತಿನವನೆಂದು ಮಾಸಾಹೇಬರು ಜನರಿಂದ ಕೇಳಿದ್ದರಲ್ಲದೆ, ಅವರಿಗೂ ಆ ಮಾತಿನ ಅನುಭವವು ಚೆನ್ನಾಗಿ ಬಂದಿತ್ತು; ಆದ್ದರಿಂದ ರಾಮರಾಜನು ಕಡೆಗೆ ತನ್ನ ಮಗನನ್ನು ಗೊತ್ತಿಗೆ ಹಚ್ಚದೆ ಬಿಡನೆಂದು ತಿಳಿದು, ಬೇಗನೆ ಮಗನನ್ನು ಎಚ್ಚರಗೊಳಿಸಬೇಕೆಂದು ಅವರು ನಿಶ್ಚಯಿಸಿ, ತಾವೇ ಈ ಕೆಲಸವನ್ನು ಮಾಡಬೇಕೆಂದು ಗೊತ್ತು ಮಾಡಿದರು. ಮಗನನ್ನು ಯಾವ ಉಪಾಯದಿಂದ ಎಚ್ಚರಗೊಳಿಸಬೇಕೆಂದು ಮಾಸಾಹೇಬರು ಆಲೋಚಿಸುತ್ತಲೇ ಇದ್ದರು. ಅವರ ಪರಮೇಶ್ವರನ ಪ್ರಾರ್ಥನೆಯೂ, ಜಪವೂ ಎತ್ತೋಹೋದವು. ಒಂದು ದಿನ ಅವರು ನಸುಕಿನಲ್ಲಿ ರಣಮಸ್ತಖಾನನು ಎದ್ದಿರುವನೋ ಇಲ್ಲವೋ ನೋಡಿಬರಲಿಕ್ಕೆ ಲೈಲಿಯನ್ನು ಕಳಿಸಿದರು. ಆದರೆ ಖಾನನು ಇನ್ನೂ ಎದ್ದಿದ್ದಿಲ್ಲ. ನಿನ್ನೆ ಮಧ್ಯರಾತ್ರಿಯಲ್ಲಿ ಹೋದವರು ಬೆಳಗು ಮುಂಜಾನೆ ಬಂದದ್ದರಿಂದ ಇನ್ನೂ ಎದ್ದಿರುವದಿಲ್ಲೆಂದು ಸೇವಕರು ಹೇಳಿದರು. ಲೈಲಿಯು ಖಾನನನ್ನು ಎಬ್ಬಿಸಲಾರದೆ- “ಎದ್ದ ಕೂಡಲೇ ಮಾಸಾಹೇಬರು ಕರೆದಿರುವರೆಂದು ಹೇಳಿ ಕಳಿಸಿಕೊಡಿರಿ” ಸೇವಕರಿಗೆ ಹೇಳಿ, ತಿರುಗಿಬಂದು ಮಾಸಾಹೇಬರ ಮುಂದೆ ಎಲ್ಲ ಸಂಗತಿಯನ್ನು ಹೇಳಿದಳು.

ಇತ್ತ ರಣಮಸ್ತಖಾನನು ತಾಯಿಯ ಸಂಗಡ ನೆಟ್ಟಗೆ ಮಾತಾಡದೆ ತಾನು ತಟ್ಟನೆ ಹೊರಟುಬಂದದ್ದಕ್ಕಾಗಿ ಪಶ್ಚಾತ್ತಾಪಪಡಹತ್ತಿದನು. ಆ ಪಶ್ಚಾತ್ತಾಪದಲ್ಲಿ ಆ ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಆತನು ಹೀಗೆ ಪಶ್ಚಾತ್ತಾಪಪಡುವಾಗ ತಾಯಿಯ ಒಂದು ತಪ್ಪು ಆತನ ಮನಸ್ಸಿಗೆ ಹೊಳೆಯಲು, ಆತನ ಪಶ್ಚಾತ್ತಾಪವು ಕಡೆಮೆಯಾಗಹತ್ತಿತು. ತನ್ನ ತಾಯಿಯ ಪ್ರೇಮವು ತನ್ನ ಮೇಲೆ ವಿಶೇಷವಿರುತ್ತದೇನೋ ನಿಜ; ಆದರೆ ಆಕೆಯು ತನ್ನ ಮನಸ್ಸಿನೊಳಗಿನ ಮಾತುಗಳನ್ನೆಲ್ಲ ನನ್ನ ಮುಂದೆ ಇಲ್ಲಿಯವರೆಗೆ ಎಲ್ಲಿ ಹೇಳಿದ್ದಾಳೆ ? ಆಕೆಯು ನನ್ನ ತಂದೆಯ ಹೆಸರನ್ನು ನನ್ನ ಮುಂದೆ ಯಾಕೆ ಹೇಳಬಾರದು ? ಹೀಗೆ ಗುಪ್ತಪಾಗಿ ಇಡುವದು ಯೋಗ್ಯವೋ ? ಈಗ ಕೆಲವು ವರ್ಷಗಳ ಹಿಂದೆ ನಾನು ಸತ್ಯಾಗ್ರಹ ಮಾಡಿದಾಗ ನನ್ನ ಕುಲವೃತ್ತಾಂತವನ್ನು ಲೈಲಿಯ ಕೈಯಿಂದ ಹೇಳಿಸಿದ ಹಾಗೆ ಮಾಡಿದಳು. ಅದರಂತೆ ಈಗ ನಾನಾದರೂ ನನ್ನ ಒಳಸಂಚಿನ ಸುದ್ದಿಯನ್ನು ಮಾಸಾಹೇಬರ ಮುಂದೆ ಹೇಳದಿದ್ದರೆ ತಪ್ಪೇನು ? ಎಂದು ಆತನು ತನ್ನ ಸಮಾಧಾನ ಮಾಡಿಕೊಳ್ಳುವಾಗ ಸರಿರಾತ್ರಿಯಾಯಿತು; ಆದರೂ