ಈ ಪುಟವನ್ನು ಪ್ರಕಟಿಸಲಾಗಿದೆ

೨೩೮
ಕನ್ನಡಿಗರ ಕರ್ಮಕಥೆ

ಬಹಳ ಜನರಿದ್ದರಲ್ಲದೆ, ರಾಜ್ಯದ ಸಂರಕ್ಷಣಕ್ಕೆ ಹೆಣಗುವವರು ಬಹಳ ಜನರು ಇದ್ದಿಲ್ಲ. ಯಾವ ಮಾತಿನಲ್ಲಿಯೇ ಆಗಲಿ, ಅವಾಡವ್ಯ ವ್ಯವಹಾರದ ಲಕ್ಷಣವು ಹೀಗೆಯೇ ಸರಿಯೆಂದು ಸಾಧಾರಣವಾಗಿ ಹೇಳಬಹುದು. ತನ್ನ ಸೈನ್ಯದ ಜನರಲ್ಲಿ ಮೊದಲಿನ ಸಾಮರ್ಥ್ಯವು ಉಳಿದಿದ್ದಿಲ್ಲೆಂಬ ಮಾತು ರಾಮರಾಜನಿಗೆ ಗೊತ್ತಿದ್ದಂತೆ ತೋರಲಿಲ್ಲ. ಮೂರು ನಾಲ್ಕುಜನ ಬಾದಶಹರು ಒಟ್ಟುಗೂಡಿ ಬಂದರೆ ತನ್ನ ಸೈನ್ಯವು ತಡೆಯಲಿಕ್ಕಿಲ್ಲೆಂಬ ಮಾತಾದರೂ ಆತನಿಗೆ ಗೊತ್ತಿರಬೇಕಾಗಿತ್ತು; ಆದರೆ ಅದೂ ಗೊತ್ತಿದ್ದಂತೆ ತೋರಲಿಲ್ಲ. ಈ ಮಾತು ಆತನಿಗೆ ಗೊತ್ತುರುವದೊತ್ತಟ್ಟಿಗುಳಿದು, ತಾನು ದಿಗ್ವಿಜಯ ಮಾಡಬೇಕೆಂತಲೂ, ಆ ಸೇತು ಹಿಮಾಚಲ ತನ್ನ ರಾಜ್ಯವನ್ನು ಹಬ್ಬಿಸಬೇಕೆಂತಲೂ, ತನ್ನ ಅಶ್ವಮೇಧದ ಕುದುರೆಯನ್ನು ಇಡಿಯ ಭರತಖಂಡದಲ್ಲಿ ತಿರುಗಿಸಿ, ತಾನು ಸಾರ್ವಭೌಮನಾಗಬೇಕೆಂತಲೂ ಆತನು ಭಾವಿಸುತ್ತಿದ್ದನು. ತಾನು ಜಯಶಾಲಿಯಾಗುವನೆಂಬದೊಂದೇ ಗುಂಗು ಆತನ ತಲೆಯಲ್ಲಿ ಹೊಕ್ಕುಬಿಟ್ಟಿದ್ದರಿಂದ, ತನ್ನ ಗುಂಗಿಗೆ ಪ್ರತಿಕೂಲ ಸಂಕಟಗಳೇನಿರುವವೆಂಬ ವಿಚಾರದಕಡೆಗೆ ಆತನ ಮನಸ್ಸು ತಿರುಗಲೇ ಇಲ್ಲ. ಆತನ ಅಣ್ಣನಾದ ತಿರುಮಲನಾದರೂ ಯೋಗ್ಯ ವಿಚಾರಗಳನ್ನು ರಾಮರಾಜನಿಗೆ ಸಚಿಸ ಬಹುದಾಗಿತ್ತು. ತಿರುಮಲನು ಯಾವತ್ತು ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು ; ಆದರೆ ಸೈನ್ಯದ ಅಂತಃಸ್ಥಿತಿಯು ಆತನಿಗೂ ಗೊತ್ತಿತ್ತೆಂದು ಹೇಳಬಹುದಾಗಿತ್ತು, ಇಷ್ಟುದಿನ ಮುಸಲ್ಮಾನರಿಗೆ ಸೊಪ್ಪು ಹಾಕದೆಯಿದ್ದ ನಮ್ಮ ಸೈನ್ಯವು ಈಗ ಹ್ಯಾಗೆ ಅದಕ್ಕೆ ಬಗ್ಗುವದೆಂಬ ವಿಚಾರದಿಂದ ಆತನು ಸಂತುಷ್ಟನಾಗಿದ್ದನು, ಅದರಲ್ಲಿ ರಣಮಸ್ತಖಾನನು ತನ್ನ ಕಡೆಗಾದದ್ದರಿಂದ, ವಿಜಾಪುರದ ರಾಜ್ಯದೊಳಗಿನ ಬಹು ಮಹತ್ವದ ಒಬ್ಬ ಮನುಷ್ಯನನ್ನು ತಾವು ಒಳಗೊಂಡಿರುವದರಿಂದ, ತಮಗೆ ವಿಶೇಷತರದ ಅನುಕೂಲತೆಯಾದಂತಾಗಿದೆಯೆಂದು ಆತನು ಹುಗುತ್ತಲಿದ್ದನು; ಆದರೆ ಆ ರಣಮಸ್ತಖಾನನೇ ತಮಗೂ ತಮ್ಮ ರಾಜ್ಯಕ್ಕೂ ಮೃತ್ಯುಸ್ವರೂಪಿಯಾಗಿರುವನೆಂಬದು ಆತನಿಗೇನು ಗೊತ್ತು?

ಈ ಮೇರೆಗೆ ಮದ-ಮೋಹಗಳೆಂಬ ಎರಡು ವಿಕಾರಗಳಿಂದ ಪೀಡಿತನಾದ ರಾಮರಾಜನು ತಾನು ಅಶ್ವಮೇಧ ಮಾಡಬೇಕೆಂಬ ಗುಂಗಿನಲ್ಲಿರುವಾಗ ಆತನಿಗೆ ಶತ್ರುಗಳ ಕಡೆಯ ಒಳಸಂಚುಗಳ ಸುದ್ದಿಗಳು ಸಹ ಗೊತ್ತಾಗದಂತಾದವು. ಒಂದು ಪಕ್ಷದಲ್ಲಿ ಆ ಸುದ್ದಿಗಳು ಗೊತ್ತಾದರೆ ಆತನು- “ಮಾಡಲಿ, ಅವರು ಬೇಕಾದದ್ದು