ಯೋಚಿಸಿದ್ದನಷ್ಟೇ; ಆದರೆ ಬಾದಶಹನು ಶತ್ರುವನ್ನು ಬೈಲಿಗೆಳೆಯಬೇಕೆಂದು ಯೋಚಿಸುತ್ತಿದ್ದನು.
ಬಾದಶಹನ ಈ ವಿಚಾರಕ್ಕನುಸರಿಸಿ ರಣಮಸ್ತನು ಕಪಟನಾಟಕವನ್ನು ರಚಿಸಬೇಕಾಗಿತ್ತು. ಹೀಗಿರುವಾಗ, ಒಂದು ದಿನ ರಣಮಸ್ತಖಾನನು ರಾಮರಾಜನ ಬಳಿಗೆ ತನ್ನ ಇಬ್ಬರು ಗುಪ್ತಚಾರರನ್ನು ಕರಕೊಂಡು ಬಂದನು. ಅವರಲ್ಲಿ ಒಬ್ಬನು ಅರಬನಿದ್ದನು; ಮತೊಬ್ಬನು ಪಠಾಣನಿದ್ದನು. ರಾಮರಾಜನ ಬಳಿಗೆ ಬೇಕಾದಾಗಹೋಗಲಿಕ್ಕೆ ರಣಮಸ್ತನಿಗೆ ಪ್ರತಿಬಂಧವಿದ್ದಿಲ್ಲ. ರಣಮಸ್ತನು ರಾತ್ರಿ ಆ ಗುಪಚಾರರೊಡನೆ ರಾಮರಾಜನ ಬಳಿಗೆ ಹೋಗಿ- “ಸರಕಾರ್, ಇವರಿಬ್ಬರೂ ಇದೇ ಈಗ ಬೇರೆಬೇರೆ ಸ್ಥಾನಗಳಿಂದ ಶತ್ರುಗಳ ಕಡೆಯ ಸುದ್ದಿಗಳನ್ನು ತಂದಿದ್ದಾರೆ. ಸುದ್ದಿಗಳು ಬಹು ಮಹತ್ವದ್ದಿರುತ್ತವೆ. ತಾವು ಅವನ್ನಷ್ಟು ಕೇಳಿಕೊಂಡು ಅವರನ್ನು ಕಳಿಸಿಕೊಡಬೇಕು; ಆಮೇಲೆ ಏನು ಮಾಡಬೇಕೆಂಬದನ್ನು ಕುರಿತು ಆಲೋಚಿಸೋಣ” ಎಂದು ಹೇಳಿದನು. ಅದನ್ನು ಕೇಳಿ ರಾಮರಾಜನು ಸ್ವಾಭಾವಿಕವಾಗಿಯೇ ಅತ್ಯುತ್ಕಂಠಯಿಂದ ಆ ಯವನದೂತರಿಗೆ, ಸುದ್ದಿಯೇನೆಂದು ಕೇಳಿದನು. ಅದಕ್ಕೆ ಅವರು-ಸರಕಾರ್, ಅಲ್ಲಾದಿಲಶಹನು ಈವರೆಗೆ ತುಂಗಭದ್ರೆಯ ಕಾಳಹೊಳೆಯ ಮಾರ್ಗವಾಗಿ ನಮ್ಮ ಮೇಲೆ ಸಾಗಿಬರಬೇಕೆಂದು ಮಾಡಿದ್ದನಷ್ಟೆ ಆದರೆ ಅದು ಕೇವಲ ತೋರಿಕೆಗೆ ಮಾಡಿದ್ದು, ಆತನು ಉತ್ತರದಿಕ್ಕಿನಲ್ಲಿ ಬೇರೊಂದು ಕಡೆಯಲ್ಲಿ ತುಂಗಭದ್ರೆಯನ್ನು ದಾಟಿ, ನಮ್ಮ ರಾಜ್ಯದಲ್ಲಿ ಬರಬೇಕೆಂದು ಮಾಡಿದ್ದಾನೆ. ಈಗ ಆತನು ನಿಲ್ಲಿಸಿರುವ ಸ್ಥಳದಲ್ಲಿಯೇ ತನ್ನ ಸೈನ್ಯವನ್ನು ತೋರಿಕೆಗಾಗಿ ನಿಲ್ಲಿಸಿ, ಆರಿಸಿದ ಬೇರೆ ಕೆಲವು ದಂಡಾಳುಗಳನ್ನೂ, ತನ್ನ ಖಾಸ ಸೈನ್ಯವನ್ನೂ ತಕ್ಕೊಂಡು ಉತ್ತರಕಡೆಯ ಸ್ಥಳದಲ್ಲಿ ಹೊಳೆಯನ್ನು ದಾಟಿ, ನಮ್ಮ ರಾಜ್ಯವನ್ನು ಸೇರುವವನಿದ್ದಾನೆ. ಆತನು ಪ್ರವೇಶಿಸಬೇಕೆಂದು ಮಾಡಿರುವ ಸ್ಥಳದಲ್ಲಿ ನಮ್ಮ ಸೈನ್ಯವು ಇರುವದಿಲ್ಲ. ಆ ಸ್ಥಳವನ್ನು ನಾವು ತೋರಿಸುವೆವು. ಮುಂದೆ ಏನುಮಾಡಬೇಕೆಂಬದನ್ನು ತಾವು ಯೋಚಿಸಬೇಕು. ನಿಮ್ಮ ಶೂರ ಬಂಧುಗಳ ಸೈನ್ಯದೊಡನೆ ಈಗ ನಿಂತಿರುವ ಸ್ಥಳದಲ್ಲಿ ಶತ್ರುಗಳು ಹೊಳೆಯನ್ನು ದಾಟುವದಿಲ್ಲೆಂಬದು ನಿಶ್ಚಯವು, ನಿಮ್ಮ ಬಂಧುಗಳ ಭಯವು ಅವರಿಗೆ ವಿಶೇಷವಾಗಿರತ್ತದೆ.
ಗುಪ್ತಚಾರರ ಈ ಮಾತುಗಳನ್ನು ಕೇಳಿ ರಾಮರಾಜನು ಅವರನ್ನು ಕುರಿತು ಏನೋ ವಿಚಾರಿಸಬೇಕೆನ್ನುತ್ತಿರಲು, ಧೂರ್ತನಾದ ರಣಮಸ್ತಖಾನನು ಅದಕ್ಕೆ ಆಸ್ಪದಕೊಡದೆ, ಕಣ್ಣಸನ್ನೆಯಿಂದ ಚಾರರಿಗೆ ಹೊರಗೆ ಹೋಗಿ ನಿಲ್ಲಲು