ಈ ಪುಟವನ್ನು ಪ್ರಕಟಿಸಲಾಗಿದೆ

ಎಲ ! ಇದೇನು?

೧೩

ಬೀಳಲಿಕ್ಕಿಲ್ಲ, ಎಂದು ಹೇಳಲು, ಆ ವೃದ್ದ ಮಾರ್ಜೀನೆಯು ರಾಮರಾಜನ ತೇಜಸ್ಸನ್ನು ನೋಡಿ ಆತನ ಮಾತುಗಳನ್ನು ಕೇಳಿ ಮೊದಲು ಬೆದರಿದಳು. ಆಮೇಲೆ ಆಕೆಯು ಸ್ವಲ್ಪ ಧೈರ್‍ಯತಾಳಿ, ಮನಸ್ಸಿನಲ್ಲಿ,-ಈ ಗೌಡ ಬಂಗಾಲೀ ವಿದ್ಯೆಯು ಏನಿರುತ್ತದೆಂಬುದನ್ನು ಒಮ್ಮೆ ನೋಡಿಬಿಡೋಣ. ನನ್ನಂಥ ವೃದ್ದ ಸ್ತ್ರೀಗೆ ಯಾರಿಂದ ಏನಾಗಬೇಕಾಗಿದೆ ? ಒಮ್ಮೆ ಮೆಹರ್ಜಾನಳು ನನ್ನ ಕಣ್ಣಿಗಾದರೂ ಬೀಳಲಿ, ಆಮೇಲೆ ನೋಡೋಣವಂತೆ, ಎಂದು ಯೋಚಿಸಿ,- “ನಾನು ಈ ಕರಿಯ ಮನುಷ್ಯನ ಕೂಡ ಹೋಗುವೆನು” ಎಂದು ರಾಮರಾಜನಿಗೆ ಹೇಳಿದಳು. ಆಗ ರಾಮರಾಜನು-ಈ ಕರಿಯ ಮನುಷ್ಯನು ಮೂಕನಿರುತ್ತಾನೆ. ಈತನಿಗೆ ಮಾತಾಡಲಿಕ್ಕೆ ಬರುವುದಿಲ್ಲ: ಈತನ ಹೆಸರು ಧನಮಲ್ಲ ಎಂದು ಹೇಳಿ, ಕೂಡಲೆ ಎರಡು ಕುದುರೆಗಳನ್ನು ತಂದು ನಿಲ್ಲಿಸಲು, ಒಂದರ ಮೇಲೆ ಮಾರ್ಜೀನೆಯೂ, ಮತ್ತೊಂದರ ಮೇಲೆ ಧನಮಲ್ಲನೂ ಕುಳಿತುಕೊಂಡು ನಡೆದರು. ಧನಮಲ್ಲನು ಮೂರು ಸಂಜೆಗೆ ಮಾರ್ಜೀನೆಯನ್ನು ಕುಂಜವನಕ್ಕೆ ಮುಟ್ಟಿಸಿದನು. ಅಲ್ಲಿ ರಾಮರಾಜನು ಅವರಿಗೆ ಭೇಟ್ಟಿಯಾಗಲು, ಅವರು ಮೂವರು ಕೂಡಿ ಮೆಹರ್ಜಾನಳಿರುವ ಮಂದಿರವನ್ನು ಹೊಕ್ಕರು.

ಆಗ ಮೆಹರ್ಜಾನಳು, ಬಗೆಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡಿದ್ದಳು, ಅಷ್ಟರಲ್ಲಿ, ರಾಮರಾಜನು ತಾನು ಆಡಿದಂತೆ ಮಾರ್ಜೀನೆಯನ್ನು ಕರಕೊಂಡು ಬಂದದ್ದನ್ನು ನೋಡಿ ಆ ಸುಂದರಿಯು ಸಂತೋಷಪಟ್ಟಳು. ರಾಮರಾಜನ ಸೌಂದರ್ಯದ ವಿಷಯವಾಗಿ ಆಕೆಯಲ್ಲಿ ಆದರವು ಉತ್ಪನ್ನವಾಯಿತು. ಇದನ್ನು ಚಾಣಾಕ್ಷನಾದ ರಾಮರಾಜನು ಅರಿತು. ಆಕೆಯನ್ನು ಕುರಿತು ಫಾರ್ಸಿ ಭಾಷೆಯಿಂದ-ನನ್ನ ಕೆಲಸವಾಯಿತು. ಅಪ್ಪಣೆಯಂತೆ ನಡೆದುಕೊಂಡಿದ್ದೇನೆ. ಎಂದು ಹೇಳಿದನು. ಆಗ ರಾಮರಾಜನ ಮೇಲೆ ಮನಸ್ಸು ಕೂತಿದ್ದ ಮೆಹರ್ಜಾನಳ ಇಚ್ಛೆಯಿಲ್ಲದಿದ್ದರೂ, ಆಕೆಯ ಕಟಾಕ್ಷವು ರಾಮರಾಜನ ಮೇಲೆ ಧುಮುಕಿ ಆತನನ್ನು ಗಾಸಿಗೊಳಿಸಿತು. ಕೂಡಲೆ ಆಕೆಯ ಮುಗುಳು ನಗೆಯು ಪಳಕ್ಕನೆ ಮಿಂಚಿ, ಮೊದಲೇ ಗಾಸಿಯಾಗಿದ್ದ ರಾಮರಾಜನ ಹೃದಯವನ್ನು ಜುಮ್ಮೆಂದು ನಡುಗಿಸಿತು ! ಹೀಗೆ ಕಂಪಿತ ಹೃದಯದ ರಾಮರಾಜನು ಏನೋ ಒಂದು ಕೆಲಸದ ನೆವದಿಂದ ಹೊರಗೆ ಹೋಗುವವನಂತೆ ಅಲ್ಲಿಂದ ಹೊರಟುಹೋದನು. ಆಗ ವೃದ್ದ ಮಾರ್ಜೀನೆಯು ಆ ತರುಣ ತರುಣಿಯರ ಪ್ರೇಮಬಂಧನ ನಾಟಕದ ಈ ಪ್ರಥಮಾಂಕವನ್ನು ನೋಡಿ ಆಶ್ಚರ್‍ಯಪಟ್ಟಳು. ಒಂದೆಂದರೆ ಒಂದೇ ದಿವಸದಲ್ಲಿ ಆದ ಸಹವಾಸದಿಂದ ಆ ಇಬ್ಬರು ತರುಣಿವಾರ