ಈ ಪುಟವನ್ನು ಪ್ರಕಟಿಸಲಾಗಿದೆ
೩೦ ನೆಯ ಪ್ರಕರಣ
ನೂರಜಹಾನಳ ಸಾಹಸ

ಮಾರ್ಜೀನೆಯು ದೊಡ್ಡ ಮನಸ್ಸಿನವಳಿದ್ದಳು. ತಾವಿಬ್ಬರು ನೂರಜಹಾನಳ ಮನಸ್ಸನ್ನು ನೋಯಿಸಿದ ಬಗ್ಗೆ ಆಕೆಗೆ ಅಸಮಾಧಾನವಾಗಿತ್ತು; ಆದರೆ ತನ್ನ ಮೆಹೆರ್ಜಾನಳ ಮನಸ್ಸಿನ ವಿರುದ್ಧ ನಡೆಯಲಾರದೆ, ನೂರಜಹಾನಳ ಸಂಗಡ ಆಕೆಯ ನಿಷ್ಠುರತನದಿಂದ ನಡಕೊಂಡಿದ್ದಳು. ಆಕೆಯು ಅದನ್ನು ಮರೆತು ನೂರಜಹಾನಳ ಬಳಿಗೆ ಹೋದಳು. ಅತ್ತ ನೂರಜಹಾನಳಿಗೂ ತಾನು ದುರುತ್ತರ ಕೊಟ್ಟ ಬಗ್ಗೆ ಪಶ್ಚಾತ್ತಾಪವಾಗಿತ್ತು. ಮಾರ್ಜೀನೆಯು ತನ್ನ ಬಳಿಗೆ ಪುನಃ ಬಂದ ಕೂಡಲೆ ನೂರಜಹಾನಳು ಸೌಮ್ಯದಿಂದ ಆಕೆಯನ್ನು ಬರಮಾಡಿಕೊಂಡು, ಅಮ್ಮಾ, ಮಾರ್ಜೀನೆ, ನೀನು ಹಿರಿಯ ಮನುಷ್ಯಳು, ಮಾಸಾಹೇಬರು ನನಗೆ ತಾಯಿಯ ಸಮಾನವು, ಹೀಗಿದ್ದು ನಾನು ನಿಮಗೆ ದುರುತ್ತರ ಕೊಟ್ಟಿದ್ದು ತಪ್ಪಾಯಿತು. ರಾಮರಾಜನ ಕೈಯಲ್ಲಿ ನಾನು ಅಕಸ್ಮಾತ್ತಾಗಿ ಸಿಕ್ಕು ಸೆರೆಯಾದ್ದರಿಂದ ನನಗೆ ಬಹಳ ವ್ಯಸನವಾಗಿರಲು, ನಿಮ್ಮಬ್ಬರನ್ನು ನೋಡಿ ನನಗೆ ಒಂದು ಆಧಾರ ದೊರೆತಂತಾಯಿತೆಂದು ತಿಳಿದಿದ್ದೆನು; ಆದರೆ ನೀವು ನಿಷ್ಠುರತನದಿಂದ ನನ್ನನ್ನು ನಿಷ್ಕಾರಣವಾಗಿ ದೂಡಿಕೂಡಲು, ನಾನು ರೇಗಿಗೆದ್ದು ಹಾಗೆ ಮಾತಾಡಿದೆನು. ನನ್ನಿಂದ ದೊಡ್ಡ ತಪ್ಪಾಯಿತು. ನಾನು ದುರ್ದೈವಿಯು, ಸಂಕಟದಲ್ಲಿ ಸಿಕ್ಕಿದ್ದೇನೆ. ನಾನು ಒಂದು ಮಾಡಲಿಕ್ಕೆ ಹೋದರೆ ದೈವವು ಮತ್ತೊಂದು ಮಾಡಿತು. ನನ್ನ ದುರ್ದೈವವೇ ನನ್ನನ್ನು ಅತ್ತ ಕರಕೊಂಡು ಬಂದಿತು, ಎಂದು ನುಡಿಯುತ್ತಿರಲು, ನೂರಜಹಾನಳ ಕಣ್ಣಲ್ಲಿ ನೀರುಗಳು ಬಂದವು. ಅದನ್ನು ನೋಡಿ ಮಾರ್ಜೀನೆಯ ಹೃದಯವು ಕರಗಿತು. ಆಕೆಯು ನೂರಜಹಾನಳನ್ನು ಎದೆಗವಚಿಕೊಂಡು "ತಂಗೀ, ಹೆದರಬೇಡ, ನೀನು ಇಲ್ಲಿಗೆ ಹ್ಯಾಗೆ ಬಂದೆ ಎಂಬದನ್ನು ನನ್ನ ಮುಂದೆ ಹೇಳು; ಅಂದರೆ ನಾನು ಅದನ್ನೆಲ್ಲ ಮಾಸಾಹೇಬರ ಮುಂದೆ ಹೇಳಿ ಅವರ ಸಿಟ್ಟು ಇಳಿಸುವೆನು" ಎಂದು ಹೇಳಲು, ನೂರಜಹಾನಳು ತನ್ನ ಯಾವತ್ತು ವೃತ್ತಾಂತವನ್ನು ಹೇಳತೊಡಗಿದಳು ಮಾರ್ಜೀನೆ, ನೀನು ಹಿರಿಯ ಮನುಷ್ಯಳು. ಈಗಿನ ಹುಡುಗರ