ಈ ಪುಟವನ್ನು ಪ್ರಕಟಿಸಲಾಗಿದೆ

೧೬
ಕನ್ನಡಿಗರ ಕರ್ಮಕಥೆ

ಹೀಗಿರಲು, ವಿವಾಹ ವಿಷಯದಲ್ಲಿ ಅತ್ಯಂತ ಅವಶ್ಯವಾಗಿರುವ ಸಾವಧಾನವನ್ನು ತಾಳದೆ, ಮೆಹರ್ಜಾನಳಿಗಿಂತಲೂ ನೀವು ಚಂಚಲರಾಗಿರುವಿರಲ್ಲ ! ನೀವು ಹಿಂದುಗಳು: ಮೆಹರ್ಜಾಣಳು ಮುಸಲ್ಮಾನಳು. ನಿಮ್ಮಿಬ್ಬರ ವಿವಾಹವಾಗಬೇಕಾದಲ್ಲಿ ನಿಮ್ಮ ಧರ್ಮದಂತೆ ನೀವು ಮೆಹರ್ಜಾನಳನ್ನು ಹಿಂದುವಾಗಿ ಮಾಡಿಕೊಳ್ಳಬೇಕಾಯಿತಲ್ಲವೆ ? ಇದು ತೀರ ಆವಶ್ಯಕವಾಗಿರುವುದಿಲ್ಲ? ಅದೂ ಇರಲಿ, ಧರ್ಮಾಧರ್ಮದ ಮಾತು ಒತ್ತಟ್ಟಿಗಿಟ್ಟು ಸ್ವಾಭಾವಿಕ ಪ್ರೇಮದಿಂದ ಮೆಹರ್ಜಾನಳ ಕೈ ಹಿಡಿಯುತ್ತೇನೆಂದು ನೀವು ಅನ್ನುತ್ತಿದ್ದರೆ : ನಿಮ್ಮ ವಿಷಯವಾಗಿ ಮೆಹರ್ಜಾನಳಲ್ಲಿ ಸ್ವಭಾವಿಕವಾದ ಪ್ರೇಮವು ಎಲ್ಲಿರುತ್ತದೆ ? ಸ್ವಾಭಾವಿಕ ಪ್ರೇಮವೆಂದರೆ, ರೂಪ, ಯೌವನ, ಐಶ್ವರ್ಯ, ಅಧಿಕಾರ, ಕೃತಜ್ಞತೆ ಮುಂತಾದ ಬಾಹ್ಯ ಕಾರಣಗಳೇನೂ ಇಲ್ಲದೆ ತಾನಾಗಿ ಉಂಟಾಗುವ ಪ್ರೇಮವು! ಇಂಥ ಹೊರಗಿನ ಕಾರಣಗಳಿಂದುಂಟಾಗುವ ಸಹೇತುಕ ಪ್ರೇಮಕ್ಕಿಂತ ಸ್ವಾಭಾವಿಕ ಪ್ರೇಮದ, ಅಂದರೆ ನಿರ್ಹೇತುಕ ಪ್ರೇಮದ ಯೋಗ್ಯತೆಯು ಹೆಚ್ಚಿನದು; ಯಾಕೆಂದರೆ, ಸೌಂದರ್ಯಾದಿ ಕಾರಣಗಳಿಂದುಂಟಾದ ಪ್ರೇಮವು, ಕಾರಣಗಳು ನಷ್ಟವಾದ ಕೂಡಲೆ ನಷ್ಟವಾಗುತ್ತದೆ; ಆದರೆ ಸ್ವಾಭಾವಿಕ ಪ್ರೇಮವು ಹಾಗೆ ನಷ್ಟವಾಗುವುದಿಲ್ಲ. ಈ ಸ್ವಾಭಾವಿಕ ಪ್ರೇಮಕ್ಕೆ ಉದಾಹರಣವನ್ನು ಕೊಡುವದು ನನಗಂತು ಶಕ್ಯವಿಲ್ಲ. ಸತ್ಪುರುಷರು ಮಾತ್ರ ಜಗತ್ತಿನ ಮೇಲೆ ಇಂಥ ಪ್ರೇಮ ಮಾಡುವರೆಂದು ತಿಳಿದಿರುವೆನು.

ಮಹಾರಾಜ ಈ ಜಗತ್ತಿನಲ್ಲಿರುವ ದಂಪತಿಗಳು ವಿವಾಹವೆಂಬ ಕಾರಣದಿಂದ ಪ್ರೇಮವನ್ನು ಸಂಪಾದಿಸಿ, ಆ ಕಾರಣವು, ಅಂದರೆ ವೈವಾಹಿಕ ಬಂಧನವು ಸ್ಥಿರವಾಗಿರುವವರೆಗೆ ಒತ್ತಾಯದಿಂದಾದರೂ ಪರಸ್ಪರ ಪ್ರೇಮವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಿಮ್ಮ ಹಿಂದುಗಳಲ್ಲಿ ಬ್ರಾಹ್ಮಣರೊಳಗೆ ವೈವಾಹಿಕ ಬಂಧನವು ಮರಣಪರ್ಯಂತರ ದೃಢವಾಗಿರುವುದರಿಂದ ಬ್ರಾಹ್ಮಣ ದಂಪತಿಗಳು ಪರಸ್ಪರ ಪ್ರೇಮವನ್ನು ಮರಣಪರ್ಯಂತರ ಕಾಯ್ದುಕೊಳ್ಳುವುದು ಹೆಚ್ಚು. ಆದರೆ ವೈವಾಹಿಕ ಬಂಧನವು ಶಿಥಿಲವಾಗಿರುವ ಜನರಲ್ಲಿ ಹೀಗೆ ಆ ದಂಪತಿಗಳ ಪ್ರೇಮವು ಸ್ಥಿರವಾದದ್ದು ಕಂಡುಬರುವದು ಕಡಿಮೆ. ಆದ್ದರಿಂದ ಪ್ರೇಮದ ಉತ್ಪತ್ತಿಗೆ ಸೌಂದರ್‍ಯಾದಿ ಬೇರೆ ಕಾರಣಗಳಿಗಿಂತ ವಿವಾಹವೆಂಬ ಕಾರಣವು, ಅತ್ಯಂತ ಪವಿತ್ರವಾದ ಕಾರಣದಿಂದಲೇ ವಿವಾಹಪದ್ಧತಿಯು ಸುಧಾರಿಸಿದ ಜನಾಂಗಗಳಿಗೆಲ್ಲ ಮಾನ್ಯವಾಗಿರುತ್ತದೆ. ಅಂಥ ಪವಿತ್ರ ವೈವಾಹಿಕ ಬಂಧನಕ್ಕೆ ವಿಧರ್ಮಿಗಳಾದ ನೀವಿಬ್ಬರು ಅಯೋಗ್ಯರಾಗಿರುವದರಿಂದ, ನೀವಿಬ್ಬರೂ ಈ ಹಾದಿಯನ್ನು ಬಿಡಬೇಕೆಂದು ನಾನು ಸ್ಪಷ್ಟವಾಗಿ ಹೇಳುವೆನು. ಮೆಹರ್ಜಾನಳು ನಿಮ್ಮ ವಿಷಯದ