ಉತ್ಪನ್ನವಾಯಿತೆಂದು ಹೇಳಬಹುದು, ಕೃಷ್ಣರಾಯನು, ಅಥವಾ ವಿಜಯನಗರದ ಬೇರೊಬ್ಬ ರಾಯನು ಪ್ರಬಲನಾಗಿ ಮಹಾ ಸಾಹಸದಿಂದ ಮುಸಲ್ಮಾನರ ನಾಶವನ್ನು ಮಾಡಬಹುದಾದ್ದರಿಂದ, ವಿಜಯನಗರದ ರಾಯರ ಸಮಾಚಾರ ತೆಗೆದುಕೊಳ್ಳುವ ಬಾಬಿನಲ್ಲಿಯಾದರೂ ತಾವೆಲ್ಲರೂ ಒಕ್ಕಟ್ಟಿನಿಂದ ನಡೆಯಬೇಕೆಂದು ಅವರು ತಮ್ಮೊಳಗೆ ಗೊತ್ತುಮಾಡಿಕೊಂಡರು. ಹೀಗೆ ಅವರು ಒಂದಾದದ್ದು ವಿಜಯನಗರದ ರಾಜ್ಯಕ್ಕೆ ಘಾತಕವಾದದ್ದಲ್ಲದೆ, ವಿಜಯನಗರದ ರಾಯರ ಮಿತಿಮೀರಿದ ಸೊಲ್ಲೂ ವಿಜಯನಗರದ ರಾಜ್ಯದ ನಾಶಕ್ಕೆ ಕಾರಣವಾಯಿತು. ಇರಲಿ, ಇತ್ತ ಜಯಶಾಲಿಯಾದ ಕೃಷ್ಣದೇವರಾಯನು, ಬಹು ಸಂತೋಷದಿಂದ ರಾಯಚೂರನ್ನು ಪ್ರವೇಶಿಸಿದನು. ಆತನು ಪಟ್ಟಣದೊಳಗಿನ ಜನರಿಗೆ ಬಹು ಪ್ರೇಮದಿಂದ ಅಭಯವನ್ನು ಕೊಟ್ಟು, ಜನರ ಮನಸ್ಸಿನಲ್ಲಿ ತನ್ನ ವಿಷಯವಾಗಿ ವಿಶ್ವಾಸವನ್ನುಂಟು ಮಾಡಿಕೊಂಡನು ; ಆದರೆ ಆದಿಲಶಹನು ಕಳಿಸಿದ ವಕೀಲನ ಸಂಗಡ ಮಾತ್ರ ಆತನು ಬಹಳ ಸೊಕ್ಕಿನಿಂದ ನಡೆದುಕೊಂಡನು ಒಂದು ತಿಂಗಳವರೆಗೆ ಆ ವಕೀಲನಿಗೆ ರಾಯನು ದರ್ಶನವನ್ನೇ ಕೊಡಲಿಲ್ಲ. ಆ ಮೇಲೆ ದರ್ಶನ ಕೊಟ್ಟರೂ, ಆ ವಕೀಲನನ್ನು ಬಹಳವಾಗಿ ಅವಮಾನಗೊಳಿಸಿದನು. ಇದರಿಂದ ಉರಿಯಲ್ಲಿ ಎಣ್ಣೆ ಸುರಿವಿದ ಹಾಗಾಯಿತು. ಆದಲಶಹನಂತೆ ಬೇರೆ ಮುಸಲ್ಮಾನ ಬಾದಶಹರೂ ಕೃಷ್ಣದೇವರಾಯನ ಕಡೆಗೆ ತಮ್ಮ ವಕೀಲರನ್ನು ಕಳಿಸಿದರು : ಆದರೆ ಅರಸನಾಗಲಿ, ಆತನ ಕೈ ಕೆಳಗಿನ ಜನರಾಗಲಿ ಆ ವಕೀಲರಿಗಾದ ರೀತಿಯೇ ಮಾಡಿದರು. ಹಾಗಾಗಿ ಎಲ್ಲ ಮುಸಲ್ಮಾನ ಬಾದಶಹರ ಮನಸ್ಸು ನೋಯಲಿಕ್ಕೆ ಇದೊಂದು ಕಾರಣವಾಯಿತು ; ಕೃಷ್ಣದೇವರಾಯನು ಇಸ್ಮಾಯಿಲ್ ಆದಿಲ್‌ಶಹನ ವಕೀಲನ ಸಂಗಡ ಆತನ ಒಡಯನಿಗೆ, “ನೀನು ನನ್ನ ದರ್ಶನಕ್ಕೆ ಬಂದು ಮುಜುರೆ ಮಾಡಿ ನನ್ನ ಚರಣವನ್ನು ಚುಂಬಿಸಿದರೆ ನಾನು ಗೆದ್ದು ಕೊಂಡಿದ್ದ ನಿನ್ನ ರಾಜ್ಯವನ್ನೆಲ್ಲ ನಿನಗೆ ತಿರುಗಿ ಕೊಡುವೆನು” ಎಂದು ಹೇಳಿಕಳಿಸಿದನು. ಇದಕ್ಕೆ ಆದಿಲಶಹನು ಒಪ್ಪಿಕೊಳ್ಳಲಿಲ್ಲೆಂಬುದಂತು ಸರಿಯೇ, ಇದರಿಂದ ಯಾವತ್ತು ಮುಸಲ್ಮಾನ ಬಾದಶಹರು ಅವಮಾನಿತರಾಗಿ ವಿಜಯನಗರದ ರಾಜ್ಯದ ಮೇಲೆ ಬೆಂಕಿಯನ್ನು ಮಾತ್ರ ಕಾರಹತ್ತಿದರು. ಆದಿಲಶಹನು ತನ್ನ ಮಾತು ನಡೆಸಲಿಲ್ಲೆಂದು ಕೃಷ್ಣದೇವರಾಯನು ಆತನ ರಾಜ್ಯದ ಮೇಲೆ ದಂಡೆತ್ತಿಹೋಗಿ, ಆತನನ್ನು ಹಿಂದಕ್ಕೆ ಸರಿಸುತ್ತ ಸರಿಸುತ್ತಾ ವಿಜಾಪುರವನ್ನು ಮುತ್ತಿ ಅದನ್ನು ಕೈವಶ ಮಾಡಿಕೊಂಡನು. ಕೆಲವು ದಿನಗಳವರೆಗೆ ರಾಯನು ವಿಜಾಪುರದಲ್ಲಿ ಇದ್ದು, ಆದಿಲಶಹನ ಸೆರೆಯಲ್ಲಿದ್ದ ಮೊದಲಿನ ದಕ್ಷಿಣದ ಸುಭೇದಾರರ ಮೂವರು ಮಕ್ಕಳ ಬಂಧವಿಮೋಚನ
ಪುಟ:Kannadigara Karma Kathe.pdf/೯೩
ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಕನ್ನಡಿಗರ ಕರ್ಮಕಥೆ