ಈ ಪುಟವನ್ನು ಪ್ರಕಟಿಸಲಾಗಿದೆ

೮೦
ಕನ್ನಡಿಗರ ಕರ್ಮಕಥೆ


೯ನೆಯ ಪ್ರಕರಣ

ಒಳಸಂಚುಗಳು

ತನ್ನನ್ನು ಸೆರೆಮನೆಯಲ್ಲಿಟ್ಟದ್ದಕ್ಕಾಗಿ ಕೃಷ್ಣದೇವರಾಯನ ಮೇಲೆ ಅಚ್ಯುತರಾಯನ ಸಿಟ್ಟು ವಿಶೇಷವಾಗಿದ್ದದರಿಂದ, ಅಚ್ಯುತರಾಯನು ತಾನು ಸಿಂಹಾಸನವೇರಿದ ಕೂಡಲೆ ಕೃಷ್ಣದೇವರಾಯನ ಪಕ್ಷದ ರಾಮರಾಜನೇ ಮೊದಲಾದವರನ್ನು ಅಧಿಕಾರದಿಂದ ದೂರ ಮಾಡಿದನು. ಅಚ್ಯುತರಾಯನು ಪುಕ್ಕ ಸ್ವಭಾವದವನು, ರಾಜ್ಯಕಾರಭಾರಕ್ಕೆ ಎಷ್ಟುಮಾತ್ರವೂ ಯೋಗ್ಯನಾದವನಲ್ಲ. ಆತನು ಎರಡನೆಯವರ ಬೊಗಸೆಯಿಂದ ನೀರು ಕುಡಿಯುವ ಯೋಗ್ಯತೆಯ ಮನುಷ್ಯನಾದದ್ದರಿಂದ, ಯಾವತ್ತು ರಾಜ್ಯಕಾರಭಾರವು ಆತನ ಹೊಸ ಮಂತ್ರಿಯಾದ ಹೋಜೆ ತಿರುಮಲರಾಯನ ಕೈಸೇರಲು, ಅವನೇ ನಿಜವಾದ ರಾಜನಾದನು. ತಿರುಮಲನಲ್ಲಿ ಕರ್ತೃತ್ವ ಶಕ್ತಿಯು ಲೇಶವಾದರೂ ಇದ್ದಿಲ್ಲ ; ಆದರೆ ಡೌಲು ಬಹಳ. ಬಾಯಿಂದ ದೊಡ್ಡ ದೊಡ್ಡ ಮಾತುಗಳಾಡುವುದು ಹೆಚ್ಚು. ಬರುಬರುತ್ತ ಆತನ ಸೊಕ್ಕಿನ ನಡತೆಗೆ ಅವನ ಪಕ್ಷದ ಜನರುಸಹ ಬೇಸತ್ತರು. ಯಾವಾಗ ಯಾರ ಅಪಮಾನವಾದೀತೆಂಬುದರ ನಿಯಮ ಉಳಿಯಲಿಲ್ಲ. ತಿರುಮಲನ ಪ್ರೀತಿಯ ಸೇವಕನಾದ ಮಣಿಮಲ್ಲನೆಂಬವನ ಪ್ರಸ್ಥವು ಹೆಚ್ಚಾಯಿತು ; ಮಣಿಮಲ್ಲನ ಒಪ್ಪಿಗೆಯ ಹೊರತು ರಾಜ್ಯಕಾರಭಾರದ ಒಂದು ಕಡ್ಡಿ ಕೂಡ ಕದಲದಾಯಿತು. ರಾಜದರ್ಬಾರದೊಳಗಿನ ದೊಡ್ಡ ದೊಡ್ಡ ಜನರು ಕೂಡ ಮಣಿಮಲ್ಲನ ಮರ್ಜಿಯನ್ನು ಹಿಡಿಯಬೇಕಾಯಿತು. ಇದು ಬಹು ಜನರಿಗೆ ಸಹನವಾಗಲಿಲ್ಲ. ಕೆಲವರು ಈ ಸ್ಥಿತಿಯು ಹಿತಕರವಾದದ್ದಲ್ಲವೆಂದು ತಿರುಮಲನಿಗೆ ಹೇಳಲು, ಅದರಿಂದ ಪ್ರಯೋಜನವಾಗುವದೊತ್ತಟ್ಟಿಗೆ ಉಳಿದು, ತಿರುಮಲನು ಆ ಎಲ್ಲ ಸಂಗತಿಯನ್ನು ಮಣಿಮಲ್ಲನಿಗೆ ತಿಳಿಸಿದ್ದರಿಂದ, ಆ ಜನರ ಮೇಲೆ ಮಣಿಮಲ್ಲನ ಡಂಕು ಮಾತ್ರ ಕುಳಿತಿತು ! ದರ್ಬಾರದ ಈ ಸ್ಥಿತಿಯು, ಹೊಂಚುಹಾಕಿಕೊಂಡು ಕುಳಿತಿದ್ದ ರಾಮರಾಜನ ಕಾರ್ಯಸಾಧನಕ್ಕೆ ಬಹಳ ಅನುಕೂಲವಾಯಿತು. ಆತನು ಮೊದಲು ಅಚ್ಯುತರಾಯನ ಪಕ್ಷಕಟ್ಟಿದ ಹಾಗೆ ತೋರಿಸಿ, ತಿರುಮಲನ ನಿಂದೆಯನ್ನು