ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

71 ಪಂಚಮಾಶ್ವಾಸ ಕುಮಾರಿ ಬಂಗಾರಮ್ಮನೆಂಬ ಪೆಣ್ಯ ಇಳೆಯುಂ ದಾನಿವಾಸದ ಸೀಮೆಯ ಮಳಲಹೊಳಯೆಂಬ ಸ್ಥಳದೊಳತ್ಯಂತ ಸಂಭ್ರಮದಿಂ ವಿವಾಹಮಂರಚಿಸಿ ಯವರ್ಬಳವಳಿಗಿತ ಜಾಗರದ ಸೀಮೆ ಕೊಂಬೆಯಂ ಪರಿಗ್ರಹಿಸಿ ತಂಟೆಯಂ ಬಲಿಸಿ ಬಳಕ್ಕಿಕ್ಕೇರಿಯ ಪುರವರಕ್ಕೆಂದು, ಕುಮಾರಭದ್ರಪನಾಯಕನುಮಂ ತನ್ನ ಗ್ರಜ ರಾಮರಾಜನಾಯಕನ ಕುಮಾರರಪ್ಪ ವೀರವೊಡೆಯರ ಬಸವಲಿಂಗನಾಯಕರುಮಂ ತಮ್ಮ ಕಿರಿ ಯಯ್ಯನಾದ ಚಿಕ್ಕಸಂಕಣನಾಯಕರ ಕುಮಾರನಾದ ಸಿದ್ದಪ್ಪನಾಯಕ ನುಮಂ ಪೋಷಿಸುತ್ತುಂ ಸುಖದಿಂ ರಾಜ್ಯಂಗೆಯ್ಯುತ್ತುಮಿರಲಾ ಪ್ರಸ್ತ ವದೊಳೆ || ಮೆರೆವ ವಿಜಾಪುರಧಿಪತಿಯಪ್ಪ ತುರುಪ್ಪಸ ಸಾತುಶಾಹನಂ ದಿರದೆ ವಜೀರರಂ ನೆರಹಿ ದಕ್ಷಿಣರಾಜ್ಞವನೆಯೆ ಸಾಧ್ವಮಂ || ವಿರಚಿಪುದೆಂದವರ್ಗುರೆ ನಿಯಾಮಿಸಿ ವೀಳಯವಿತ್ತು ಕೂಡನಂ ತರುಚಿರಮತ್ತ ಹಸ್ತಿಹಯಸೈನ್ಯವನೆಯೇ ತೆರಳ ಖಾತಿಯಿಂ || ೫ ಮಂಜಳಖಾನಂ ಕರಮಾ ರಂಜಿಪ ಮಹಮುದ್ದ ಖಾನ ಬಹಿಲಿಮಖಾನಂ | ಸಂಜರಖಾನಂ ಹಯಮದ ಕುಂಜರತತಿಪತ್ತಿವೆರಸು ಶಾಠಯಖಾನಂ || ಒಡನೆ ಸಲಾಬಿತಖಾನಂ ಕಡುಹಿಂ ನಿಜಸೈನಸಹಿತಮಂಬರಖಾನಂ | ಪಡವೆರಸಂಕುಶಖಾನಂ ಸಡಗರದಿಂ ಸೈನಗೂಡಿದಂಮದಖಾನಂ || ನೆರೆದಿನಿಬರ್ವಜೀರರುಗಳಳ್ತರೆ ಹೈದರಮಲ್ಲಿನಾಯಕಂ ಬರಿಗಿಯ ದೇವಿನಾಯಕನುಮೆಯೇ ಸಿಡಿಳ ಮೊತ್ತದಂತೆ ಭೀ | ಕರತರತಂತ್ರವಾರ್ಭಟಿಸುತೆರೆ ಸೈನೃಪಚ್ಛಧೂಳಿಯಂ ಬರವ ಮುಸುಂಕೆ ಬಂದುದು ಮಹೋಗ್ರತುರುಪರದಾಳಿ ತೀವದಿಂ |