________________
೧೫ 122 ಕೆಳದಿನೃಪವಿಜಯಂ ಅವನೀತ್ಮರಕುಲತಿಲಕಂ ಶಿವಭೂಪನ ಪುಣ್ಯಪುತ್ರಭದ್ರಪಭೂಪಂ | ತವೆ ದೇಶಕೋಶದರ್ಥಂ ಸವವನ್ನು ದಾನಧರ್ಮಮಂ ವಿರಚಿಸಿದಂ | ತರಣಿಜನಿಂ ಶಿಬಿ ಶಿಬಿಯಿಂ ದುರುಬಲಿ ಬಲಿಯಿಂ ದಧೀಚಿಮುನಿಯಾಮುನಿಯಿಂ ! ಕರಾವಳಂ ಭದ್ರಪ ಧರಣೀಶ್ವರನಧಿಕನೆನಿಸಿ ರಾರಾಜಿಸಿದಂ || ಮತ್ತಮದಲ್ಲದೆ || ಪರಮಶೋತ್ರಿಯರಹ ಭೂ ಸುರರ್ಗ೦ ಸುಕ್ಷೇತ್ರವೃತ್ತಿಗಳನಿತ್ತತಿಭಾ | ಸುರಭದ್ರರಾಜಪುರಮೆಂ ಬರುತರವಿತತಾಗ್ರಹಾರಮಂ ವಿರಚಿಸಿದಂ !! ೧v ಮತ್ಯಮದಲ್ಲದಾ ಭದ್ರಪ್ಪನಾಯಕಂ (ಪಿತೃಶಿವಪ್ಪನಾಯಕನ ಹೆಸರೊಳಿ ಶಿವರಾಜಪುರವೆಂಬಗ್ರಹಾರಮುಮಂ"ಕನಿಷ್ಠ ಪಿತೃವೆಂಕಟ ಪ್ರನಾಯಕನ ಹೆಸರೊಳಿ ವೆಂಕಟಪುರಮೆಂಬಗ್ರಹಾರಮುಮಂ ವಿರ ಚಿಸಿ ವೃತ್ತಿಕ್ಷೇತ್ರಂಗಳಂ ಕಲ್ಪಿಸಿ ಭೂಸುರರ್ಗೆ ಶಿವಾರ್ಪಿತವಾಗಿ ಧಾರೆ ಯನೆರೆದು ಸ್ಥಿರಶಾಸನಮಂ ಬರೆಸಿತ್ತು ಮತ್ತಂ ಮುಳುವಾಗಿಲ ಕೃಷ್ಣಾ ನಂದಸ್ವಾಮಿಗಳ ಮಠಕ್ಕಂ ಹೇರಳವಾದ ಭೂಸ್ವಾಸ್ಥೆಯಂ ಧಾರೆಯ ನೆರೆದು ಸ್ಥಿರಶಾಸನಮಂ ಬರೆಸಿತ್ತತಿಶಯಸುಕೃತವಿಶೇಷಂಗಳನುಪಾ ರ್ಜಿಸಿದನಂತುಮಲ್ಲದೆಯುಂ | ನಾಶಂ ಬೊಂದದವೊ ರ್ಪಾಶನಮಂ ಬ್ರಾಹ್ಮಣೋತ್ತಮರ್ಗಾಗಿಸಿ ಮೇ | ಹಾವನ್ನಪನ ತನೂಜಂ ಕಾಶೀಧರ್ಮವ ಸುಸಂಗವನೆ ವಿರಚಿಸಿದಂ | ೧