ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

126 ಕೆಳದಿನೃಪವಿಜಯಂ ಸೀತಾರಾಮಪ್ಪಯ್ಯನಾಯಕಂಗಿತ್ತು ತದ್ರಾಮಂ ನೆಲೆಗೊಳಿಸಿ ನಿಲಿಸಿ ಹನುಮಪ್ಪನಾಯಕನಂ ವೇಣುಪುರದಿಸಿ ಪೊರೆದೀಪ್ರಕಾರದಿಂ ತರಿಕೆರೆಸಂಸ್ಥಾನವನುದ್ಧರಿಸಿ ಪರಮಪ್ರಖ್ಯಾತಿಯಂ ಪಡೆದು ವಿವಾಜಿಸು ತಿರ್ದನಂತುಮಲ್ಲದೆಯುಂ || ಉರುತರಗವೋದ್ರೇಕದ ಭರದಿಂ ಬೆರೆತಿರ್ಪ ತುಳುವಮನ್ನೆ ಯರದಟಂ | ಮುರಿದು ಪಣಗೊಂಡು ಮಾರ್ಮಲೆ ತರಿಗಳ ಸಿಗ್ರಹಿಸಿ ಬಾಹುಬಲಮಂ ಮೆರೆದಂ || ವರರಾಜನೀತಿಮಾರ್ಗದ ನಿರುಗೆಯನತಿಗಳೆಯದಿಂತು ತೇಜೋಬಲದಿಂ | ಧುರಧೀರಸೋಮಶೇಖರ ಧರಣೀಶಂ ಧರ್ಮದಿಂದಮಿಳಯಂ ಪೊರೆದಂ || ಇಂತಾ ಸೋಮಶೇಖರನಾಯಕಂ ಸದ್ಧರ್ಮದಿಂ ರಾಜಪ್ರತಿಸ್ ಎ ಲನಂಗೆಯ್ಯುತ್ತುಂ ಸುಖಮಿರ್ಶ ಕಾಲದೊಳೆ, ಬರಮೆ ಮಾವುತನೆಂ ಬೋರ್ವ ಹಲ್ಲಕಂ ನೀವಾನೆಯಮದಮಂ ಸೇವಿಸಲೆ ಶರೀರದೊಳಾವು ದರಲ್ಲಿಯುಂ ಬಲಕರವಾಗಿರ್ಪುದೆಂದೊಡವಡಿಸಲೆ, ದೈವವಶದಿಂದಾ ದುರ್ಬೋಧೆಗೆಡವಟ್ಟ ಸೋಮಶೇಖರನಾಯಕನಾನೆಯ ಮದಮಂ ಸೇವಿಸಿ ತನ್ಮೂಲದಿಂದೊಗೆದುದಾವಸ್ಥೆಯಿಂ ಭ್ರಮಿತನುಂ ನಿತ್ಯಮ ವ್ಯವಸ್ಥಿತಚಿತ್ತನುವಾಗಿ ಹೈದ್ರ ಜನರೊಡನೆ ಪೇಳಮೇಳದಿಂ ಸೈಜ್ಞಾ ವ್ಯಾಪಾರದಿಂ ಮನಂಬಂದಂತೆ ವರ್ತಿಸುತ್ತುಮಿರಲಾ ಪ್ರಸ್ತಾವದೊಳೆ ನಿಜಸಂಸ್ಥಾನದೊಳಿರ್ಪ ಕುಹಕಿನಿಯೋಗಿಗಳೊಡಚಿನ್ನದ ಪಿತೂರಿ ಯಿಂ 1 || ವಿಜಯಪುರವರ್ತಿಯೆನಿಸುವ ಮುಜಬರಖಾನಂ ತೆರಳ್ ಜನ್ನೋಪಂತಂ | 1 ತುಮೆಯಿಂ (ಒಕ)