________________
ಮಲ್ಲಿಕಾರ್ಜ್ ರಾಜಶೇಖರ, 1 ವಿರೂಪಾಕ್ಷ ಎಂದು ಅರ್ಥಮಾಡಿದರೆ ಸಂಗತವಾಗುವಂತೆ ತೋರುತ್ತದೆ. ವಿಜಯನಗರದ ಅರಸರಿಗೂ ಕೆಳದಿಯ ನಾಯಕರಿಗೂ ಬಹುಕಾಲ ಸಂಬಂಧವಿತ್ತು. ಕೃಷ್ಟರಾಯರು - ಪ್ರಬಲನಾಗುತ್ತಿದ್ದ ಚೌಡಪ್ಪ ನಾಯಕನನ್ನು ಕರೆಸಿ ಅವನಿಂದ ಆದ ಸಹಾಯಕ್ಕೆ ಪ್ರತಿಫಲವಾಗಿ ಕೆಳದಿ ಮುಂತಾದ ಗಣಿಗಳ ಮೇಲೆ ಅಧಿಕಾರವನ್ನು ಕೊಟ್ಟನೆಂದೂ ಆಮೇಲೆ ಚೌಡಪ್ಪನಾಯಕನಿಗೆ ಶಕ ೧೬೦೦ರಲ್ಲಿ ಎಂದರೆ ಕ್ರಿ. ಶ. ೧೫೦೦ ರಲ್ಲಿ ಪಟ್ಟವಾಯಿತೆಂದೂ ಗೊತ್ತಾಗುತ್ತದೆ. 3 ಶಿವಪ್ಪನಾಯಕನ ಕಾಲಕ್ಕೆ ವಿಜಯನಗರದ ರಾಜವು ಕ್ಷೀಣದೆಸೆಗೆ ಬಂದು ಶ್ರೀರಂಗರಾಯನು ಅಸ ಹಾಯನಾಗಿರಲು, ಶಿವಪ್ಪನಾಯಕನು ಬೇಲೂರಂ ತೆಗೆದುಕೊಂಡು ಶ್ರೀರಂಗರಾಯರ್ರಿತ್ತು ರಾಯಸಂಸ್ಥಾನಮುಂ ನೆಲೆಗೊಳಿ” ಸಿದನು. ಈ ಶಿವಪ್ಪನಾಯಕನೇ ಇಕ್ಕೇರಿಯ ಅರಸರಲ್ಲೆಲ್ಲ ಪ್ರಸಿದ್ದನು. ಈತನ ಸುಪ್ರಸಿದ್ದವಾದ ನಿಸ್ತಿನ ವಿಚಾರವಾಗಿ ಈ ಗ್ರಂಥದಿಂದ ಯಾವುದೂ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಆದರೆ ವ್ಯವಸಾಯವನ್ನು ಹೆಚ್ಚಿಸಿ ಒಂದು ಗೋಪಾದದಷ್ಟು ಭೂಮಿಯನ್ನು ಕೂಡ ಪಾಳು ಬೀಳಿಸದಂತೆ ರೈತರಿಗೆ ಬೇಕಾದಷ್ಟು ಸಹಾಯವನ್ನು ಕಲ್ಪಿಸಿಕೊಟ್ಟು “ ನೆರೆವರಿ ವರಾಡ?” ಮುಂತಾದ ದಂಡಗಳನ ಅನ್ಯಾಯವಾವ ತೆರಿಗೆಗಳನ್ನೂ 1" There are inscriptions which indicate unmistakably that Mallikarjuna's son Raja Sekhara succeeded followed probably by Virupakslia 11 ” — 1 Little knoun chapter of Vijayu Nagar II istory by Prof. S. Krishnaswami Iyengar p. 21. 2 ಈ ಗ್ರಂಥದಲ್ಲಿ ಮೊದಲು ಅಚ್ಯುತರಾಯನೆಂದ. ಆಮೇಲೆ ಕೃಷ್ಣರಾಯ ನೆಂದೂ ಹೇಳಿದೆ ಪುಟ ೧೯-೨೦ 3 ಕೃಷ್ಣರಾಯನು ೧೫೦೯ ರಲ್ಲಿ ಪಟ್ಟಕ್ಕೆ ಬಂದು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಆದುದರಿಂದ ಇದಕ್ಕೆ ಸಾಂಗತ್ಯವನ್ನು ಹೇಳುವುದು ಕಸ್ಮವಾಗಿದೆ. 9