________________
ಏಕಾದಶಾಶ್ವಾಸಂ 199 ಮೆದೆಕೆರೆನಾಯಕನುರವಣೆ ಗಿದಿರಾಂಪೊಡತಕ್ಕವಾಗಿ ಹರಪುರದರಸಂ | ಸದಯಬಸವುರ್ವಿಸಂಗೀ ಹದನಂ ಬಿಸಿ ಕಳುಸಿ ಮರೆವುಗಲಾಗಲೆ || ಇಂತು ಹರಪುರಾಧಿಪನೆನಿಪ ಬಸಂತರಾಯಂ ಮೆರೆಕೆರೆನಾಯಕ ನದಟನಾಂಪೊಡತಕ್ಕವಾಗಿ ನಿಮ್ಮ ಪುತ್ರವರ್ಗದ ಮನೆತನದವರೆನಿಸಿ ವರ್ತಿಸುತ್ತಿರ್ದೆಮ್ಮ ಸಂಸ್ಥಾನವನುದ್ಧರಿಸವೇಳ್ಳಂದು ಲಿಖಿತಮುಖದಿಂ ಬಿನ್ನವಿಸಿ ಕಳಪಟ್ಟು ಸಿಬ್ಬೊಜೆಯೊಡನನುಸಂಧಾನಮಂ ರಚಿಸಿ ತ ಮಂ ಬರಿಸಿ ಸುಬೇದಾರ ಲಿಂಗಪ್ಪನೊಡನೆ ಅಸಂಖ್ಯಾತಸೇನಾಸ ಮಹಮಂ ತೆರಳಿಸಿ ಕಳುಸಿ ತನ್ನೆದೆಕೆರೆನಾಯಕನ ರಾಜವಂ ನಿಪಾತ ನಂಗೆಯ್ದಿದನಂತುಮಲ್ಲದೆಯುಂ | ಹೊದಿಗೆರೆಯ ಸುಕೋಟೆಯನವ ನಾದಂ ಕೊಂಡೊಡನೆ ಮೆರೆವ ಮೊರವಂಜೆಯ ಬ | ೮ಾದ ಪರಿಸ್ಕರಣವನೆಸೆ ವಾ ದುಮ್ಮಿಯೆನಿಪ್ಪ ಕೊಂಬೆಯಂ ವಶಗೈದಂ || ಮತ್ತಮದಲ್ಲದೆ || ಪಾಟಾದ ನಂದಿಗಾವೆಯ ಕೋಟೆಯನುರೆ ಕೊಂಡು ತರಾತನ ಘಜಂ | ಊಟಿಸಿ ಬಸವನ್ನಪಂ ಈ ರ್ಪಾಟಾಧಿಪನತಿಪರಾಕ್ರಮವನುರೆ ಮೆರೆದಂ || ೧೫ ಇಂತು ಹೊದಿಗೆರೆ ನಂದಿಗಾವೆ ಮೊರವಂಜೆಯೆಂಬ ಕೊಂಬೆಗಳಂ ಸ್ವಾಧೀನಂಗೆಯ್ಯಲೀವರ್ತಮಾನಮಂ ಕೇಳ್ಳು ಪತ್ತೆಸಿಂಗನೊಡನನುಸಂ ಧಾನಮಂ ರಚಿಸಿ ರಘೋಭೌಸಲ್ಯಾ ಮುಂತಾದ ಪಟುಪರಾಕ್ರಮ ಶಾಲಿಗಳಿಂ ಯುಕ್ತವಾದಸಂಖ್ಯಾತಸೇನಾಸಮೂಹಂವೆರಸಂತಗ