ಈ ಪುಟವನ್ನು ಪ್ರಕಟಿಸಲಾಗಿದೆ

ಕಾರಣನಾದ ಜಯದ್ರತನನ್ನು ಕೊಲ್ಲದಿದ್ದರೆ ತಾನು ಅಗ್ನಿಪ್ರವೇಶ ಮಾಡಿ ಪ್ರಾಣಬಿಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ.

ತಂದೆ ದಕ್ಷಬ್ರಹ್ಮ ಮಾಡಿದ ಅವಮಾನವನ್ನು ಸಹಿಸಲಾಗದೆ, ದಾಕ್ಷಾಯಿಣಿ ಯಜ್ಞಕುಂಡಕ್ಕೆ ಬಿದ್ದು ಆತ್ಮಾರ್ಪಣೆ ಮಾಡಿದರೆ, ಆಕೆಯ ಈ ದುರಂತ ಸಾವಿನಿಂದ ವಿಚಲಿತನಾದ ಶಿವ ಬುದ್ಧಿಭ್ರಮಣೆಗೆ ಒಳಗಾಗುತ್ತಾನೆ.

ಪ್ರೀತಿಯ ಪತಿ ಸಾವನ್ನಪ್ಪಿದಾಗ, ಆ ದುಃಖವನ್ನು ಸಹಿಸಲಾಗದ ಪತ್ನಿಯರು ಚಿತೆ ಏರಿ ಸಹಗಮನ ಮಾಡುತ್ತಿದ್ದರು.

ಖಿನ್ನತೆ-Depressionನ ಲಕ್ಷಣಗಳಿವು:

D - Dullness: ಮಂಕುತನ, ಲವಲವಿಕೆ ಇರದು. ಮಂಕಾಗಿ ವ್ಯಕ್ತಿ ನಿಷ್ಕ್ರಿಯನಾಗಿ ಒಂದೆಡೆ ಕೂರುತ್ತಾನೆ ಅಥವಾ ಹಾಸಿಗೆ ಹಿಡಿಯುತ್ತಾನೆ.

E - Energyless, No Enthusiasm: ಶಕ್ತಿ-ಉಲ್ಲಾಸ-ಉತ್ಸಾಹಗಳಿಲ್ಲ. ಕೆಲಸ ಕರ್ತವ್ಯ ನಿರ್ವಹಣೆ ಮಾಡಲು ಮನಸ್ಸಿಲ್ಲ.

P - Pain: ನೋವು, ತಲೆ-ಎದೆ-ಕತ್ತು, ಬೆನ್ನು-ಸೊಂಟ-ಕೈಕಾಲು ಹೀಗೆ ದೇಹದ ಅನೇಕ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿಗೆ ಯಾವುದೇ ದೈಹಿಕ ಕಾರಣವಿರುವುದಿಲ್ಲ. ಎಲ್ಲ ಪರೀಕ್ಷೆಗಳು 'ನಾರ್ಮಲ್' ಎಂದೇ ಇರುತ್ತವೆ.

R - Remorceful-Regretful: ಪಶ್ಚಾತ್ತಾಪ, ತಪ್ಪಿತಸ್ಥ ಭಾವನೆ, ಪಾಪಪ್ರಜ್ಞೆ ವ್ಯಕ್ತಿಯನ್ನು ಕಾಡತೊಡಗುತ್ತದೆ. ಮಾಡಿದ ತಪ್ಪುಗಳು, ಅನ್ಯಾಯ, ಅಕ್ರಮಗಳ ಕಹಿನೆನಪು ಮನಸ್ಸಿಗೆ ಹಿಂಸೆ ನೀಡಬಹುದು.

E - Eating Less: ಹಸಿವು ಕಡಿಮೆ. ಊಟ ರುಚಿಸುವುದಿಲ್ಲ. ಊಟ ಕಡಿಮೆಯಾಗಿ ಶರೀರದ ತೂಕವೂ ಇಳಿಯುತ್ತದೆ.


8 / ಖಿನ್ನತೆ: ಬನ್ನಿ ನಿವಾರಿಸೋಣ