ಈ ಪುಟವನ್ನು ಪ್ರಕಟಿಸಲಾಗಿದೆ
- ಹವ್ಯಾಸಗಳು-ಆಟೋಟಗಳಲ್ಲಿ ಭಾಗವಹಿಸದಿರುವುದು.
- ಅಲ್ಪ ಕಾರಣಕ್ಕೆ ಹೆಚ್ಚು ಅತ್ತು ರಂಪಾಟ ಮಾಡುವುದು, ಹಠ ಮಾಡುವುದು.
- ಅವಿಧೇಯತನ-ತಂದೆ/ತಾಯಿ/ಶಿಕ್ಷಕರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದು ಕೊಳ್ಳುವುದು, ಮಾಡು ಎಂದರೆ ಮಾಡದೇ, ಮಾಡಬೇಡ ಎನ್ನುವುದನ್ನು ಮಾಡುವುದು.
- ಸಿಟ್ಟು, ಕೋಪ, ಆಕ್ರಮಣಶೀಲತೆಯನ್ನು ಪ್ರದರ್ಶಿಸುವುದು, ಜಗಳ ಕಾಯುವುದು.
- ಸುಳ್ಳು, ಕಳ್ಳತನ, ಇತರರಿಗೆ ತೊಂದರೆ ಹಿಂಸೆ ನೀಡಿ ಸಂತೋಷಪಡುವುದು, ವಸ್ತು ವಿಶೇಷಗಳನ್ನು ಹಾಳು ಮಾಡುವುದು. ನೀತಿ ನಿಯಮಗಳ ಭಂಗ ಮಾಡುವುದು, ಅಪರಾಧ ಮಾಡುವುದು.
- ಶಾಲೆಗೆ ಚಕ್ಕರ್ ಹಾಕುವುದು/ ಮನೆಬಿಟ್ಟುಹೋಗುವುದು.
- ಸಾಯುತ್ತೇನೆ ಎಂದು ಹೆದರಿಸುವುದು.
- ಆತ್ಮಹತ್ಯೆಗೆ ಪ್ರಯತ್ನಿಸುವುದು.
- ಅಸ್ಪಷ್ಟ ಮಾತು, ವಿಚಿತ್ರವಾದ ಮತ್ತು ತೀವ್ರವಾದ ದೈಹಿಕ ತೊಂದರೆಗಳಿವೆ ಎಂದು ಹೇಳುವುದು, ಅನಾರೋಗ್ಯದಿಂದ ಬಳಲುವುದು, ಹುಸಿ ತುರ್ತು ಸ್ಥಿತಿಯನ್ನು ಪ್ರಕಟಿಸುವುದು, ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬರುವುದು. ಆದರೆ ಚಿಕಿತ್ಸೆ ತೆಗೆದುಕೊಳ್ಳಲು ನಿರಾಕರಿಸುವುದು. ವೈದ್ಯರೊಂದಿಗೆ ಸಹಕರಿಸದಿರುವುದು.
- ಧೂಮಪಾನ, ಮದ್ಯಪಾನ, ಮಾದಕವಸ್ತು (ಗಾಂಜಾ, ಅಫೀಮು) ಸೇವಿಸುವುದು, ಪೋಲಿ ಹುಡುಗ, ಹುಡುಗಿಯರ ಗುಂಪಿಗೆ ಸೇರುವುದು.
- ಮನೆಯೊಳಗೇ ಇರುವುದು, ಹೊರಬರಲು ನಿರಾಕರಿಸುವುದು.
ಮಕ್ಕಳಲ್ಲಿ ಖಿನ್ನತೆಯನ್ನು ಗುರುತಿಸಿ ವೈದ್ಯರಲ್ಲಿಗೆ ಕರೆದೊಯ್ದಿರಿ.
ಖಿನ್ನತೆ: ಬನ್ನಿ ನಿವಾರಿಸೋಣ / 15