ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡುತ್ತಾನೆ. ಆತನಿಗೆ ಗೊತ್ತು “ಬ್ರಹ್ಮನಿಂದಲೂ ದಿಗಿಲಿಲ್ಲ ಆದರೆ, ಆ ಮಹಾವಿಷ್ಣು ಆತನು ಏನು ಉಪಾಯಮಾಡುವನೋ ? ಆತನು ಏನುಮಾಡಿ ಈ ವೃತ್ರನನ್ನು ಉರುಳಿಸುವನೋ? ಆತನ ದಿಗಿಲು ತಪ್ಪಿದರೆ, ಈ ಕಲ್ಪದ ಕೊನೆಯವರೆಗೂ ಇವನೇ ಇಂದ್ರನಾಗಿರುವ ಹಾಗೆ ಮಾಡಿಬಿಡಬಹುದು.’ ಎಂದು ಯೋಚಿಸುತ್ತಾನೆ ಹಾಗೆಯೇ “ಮೊದಲು ಇಂದ್ರಪದವಿಯನ್ನು ಪಡೆದು ಆಮೇಲೆ ಕಾಪಾಡಿಕೊಳ್ಳುವ ಯೋಚನೆ ಮಾಡೋಣ. ಮೊದಲು ಯೋಗ, ಆಮೇಲೆ ಕ್ಷೇಮ” ಎಂದು ಸುಮ್ಮನಾಗುತ್ತಾನೆ. ಆ ಪಾತಾಳದಲ್ಲಿರುವ ನಿವಾಸಿಗಳಿಗೆಲ್ಲ ವೃತ್ರಾಸುರನನ್ನು ದೇವತೆಗಳ ಮೇಲೆ ಯುದ್ಧಕ್ಕೆ ತ್ವರೆಗೊಳಿಸುತ್ತಾರೆ. ಆದರೆ ಶುಕ್ರಾಚಾರ್ಯನು ಮಾತ್ರ “ತಡೆಯಬೇಕು. ವೃತ್ರೇಂದ್ರನು ಹೇಳುವುದು ಸರಿ, ಇನ್ನೂ ಕಾಲಬಂದಿಲ್ಲ” ಎಂದು ತಡೆಯುತ್ತಿದ್ದಾನೆ.

* * * *