ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೮೯

ನಮಗೆ ಯಾವಾಗಲೂ ಆತುರ. ನಿಜವಾಗಿ ಎಲ್ಲವನ್ನೂ ಪರಾಂಬರಿಸಿ ಕೊನೇ
ಮಾತು ಹೇಳೋನು ಬೇರೆಯೇ ಇದ್ದಾನೆ.... ಯೋಚ್ನೆ ಮಾಡಿ ನೋಡಿ.
ದೇವರನ್ನ ಉಪವಾಸ ಕೆಡವಿ ನಾವು ಉಣ್ಣೋದಕ್ಕಾಗ್ತದಾ? ಪೆರೋಗೆ
ಕಂದಾಯ ತೆರದೆ ನಾವು ಬದುಕೋಕಾಗ್ತದಾ?...."
ಅಪೆಟ್ ನ ಮಾತು ಕೇಳಿದಂತೆ ಸ್ನೊಫ್ರುವಿನ ಹಣೆ ನೆರಿಗೆ ಕಟ್ಟಿತು.
ಇದು ತುದಿ ಬುಡವಿಲ್ಲದ ಮಾತು ಎಂದು ಸಿಟ್ಟು ಬಂತು. "ಇವರ ಮಾತು
ಕೇಳುತ್ತ ಹೋದರೆ ನಿದ್ದೆಯೇ ಬಂದೀತು," ಎಂದು ಆತ ಸೆಬೆಕ್ಖುನೊಡನೆ
ಗೊಣಗಿದ. ಒಮ್ಮೆಲೇ ಗಟ್ಟಿಯಾಗಿ ಆತನೆಂದ:
"ಸಾಷ್ಟಾಂಗ ಪ್ರಣಾಮ ಮಾಡಿದವರಿಗೆ ಒದೆಯೋದು ಯಾವ
ನ್ಯಾಯ ?"
ಬೇರೆಯೂ ಕೆಲವರೆಂದರು:
"ಯಾವ ನ್ಯಾಯ?"
ಉತ್ತೇಜಿತನಾಗಿ ಸ್ನೊಫ್ರು ಮಾತನಾಡಿದ:
"ಮೆನೆಪ್‍ಟಾನನ್ನು ಬಿಡಿಸ್ಕೊಡಿ. ಆಮೇಲೆ ಕಂದಾಯ ಸಂದಾಯ
ಮಾಡ್ತೇವೆ!"
ಧ್ವನಿಗಳು ಕೇಳಿಸಿದುವು:
"ಹೌದು! ಹೌದು!"
ತಾನು ಸೋಲುತ್ತಿದ್ದೇನೆ ಎನಿಸಿತು ಅಪೆಟ್ ಗೆ. ಆದರೂ ಎದೆಗುಂದದೆ
ಅವನು ಮುಂದುವರಿಸಿದ;
"ಭಕ್ತ ಜನರೇ, ಮಾಟ್ ನಾಣೆಯಾಗಿ ನನ್ನ ಹೃದಯದಲ್ಲಿರುವುದನ್ನೇ
ನಿಮ್ಮೆದುರು ಇಡ್ತಿದ್ದೇನೆ. ನಾವು ಮಾಟ್ ಅನ್ನೋದು ಯಾವ ಅರ್ಥದಲ್ಲಿ?
ಸುವ್ಯವಸ್ಥೆ, ಸತ್ಯ, ನ್ಯಾಯ, ಧರ್ಮ___ಇದೆಲ್ಲವೂ ಮಾಟ್. ಐಗುಪ್ತ
ದೇಶ, ಐಗುಪ್ತ ಸಮಾಜ ನಿಂತಿರುವುದೇ ಆ ಅಡಿಪಾಯದ ಮೇಲೆ. ರೈತನ
ಮಾಟ್ ಯಾವುದು? ಪರಿಶ್ರಮದ ದುಡಿಮೆ. ಪ್ರಾಮಾಣಿಕ ದುಡಿಮೆ.
ಅಧಿಕಾರಿಗಳ ಮಾಟ್ ಅಂದರೆ ನ್ಯಾಯವಾದ ವರ್ತನೆ. ಹೌದಾ ?"
ಸ್ನೊಫ್ರು, ಬಾಯಿ ಹಾಕಿ ನುಡಿದ: