ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಮೃತ್ಯುಂಜಯ

"ಪರಿಹಾಸ್ಯ ಸಾಕು."
"ಎ‌‌‍‍ಷ್ಟೋ ಜನ ಬರ್ತಾರೆ. ನೀವೂ ಬನ್ನಿ."
ನೆಜಮುಟ್ ಅಂದಳು :
"ಎಲ್ಲರ ಹಾಗೆ? ಅಷ್ಟೇನೆ ? ನಮ್ಮ ಗಂಡಂದಿರ ಮಗ್ಗುಲಲ್ಲಿ
ನಾವು ಕೂತ್ಕೋಬಾರ್ದೊ?"
ನೆಫಿಸಳ ಮನಸ್ಸಿನಲ್ಲೂ ಅದೇ ಬಯಕೆ ಇತ್ತು.
ಸ್ನೊಫ್ರು ಸಿಟ್ಟಾಗಿ ಅಂದ :
"ಅದೇನು ಪೆರೋನ ಆಸ್ಥಾನ ಅಂದ್ಕೊಂಡ್ರಾ ?"
ನೆಜಮುಟ್ ಕೆಂಗಣ್ಣಿನಿಂದ ಗಂಡನನ್ನು ನೋಡಿದಳು :
"ಅದಕ್ಯಾಕೆ ಇಷ್ಟೊಂದು ಕೋಪ ? ನಿಮಗೆ ಬೇಡವಾದರೆ ನಾವು
ಬೇರೇನೇ ಬರ್ತೇವೆ."
"ನಮ್ಮ ಒಟ್ಟಿಗೆ ಬರೋದು ಬೇಡ." ಎಂದ ಸ್ನೊಫ್ರು.
"ನೀವು ಮೊದಲೇ ಹೋಗಿ."
___ಮೆನೆಪ್ಟಾನೆಂದ.

****

ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದವರು ಸೆಬೆಕ್ಖುವಿನ ವಸತಿಯಿಂದ
ತಮ್ಮ ತಮ್ಮ ಮನೆಗಳಿಗೆ ಹೋದರು. (ಸಣ್ಣ ಪುಟ್ಟ ಗಾಯಗಳ ಇಬ್ಬರು
ಸಭೆಗೆ ಹೋಗುವ ಯೋಚನೆಯನ್ನೂ ಮಾಡಿದರು.)
ನೆಫಿಸ್ ಮತ್ತು ನೆಜಮುಟ್ ತಕ್ಕಮಟ್ಟಿಗೆ ಅಲಂಕೃತರಾಗಿ ರಾಮೆರಿಪ್
ಟಾನನ್ನು ಕರೆದುಕೊಂಡು ಸೆಬೆಕ್ಖುವಿನ ಮನೆಗೆ ಬಂದಾಗ, ಸೆಬೆಕ್ಖುವಿನ ಪತ್ನಿ
ತಬಬುವಾ ನಡುಮನೆಯನ್ನು ತೊಳೆಯುವ ಬಳೆಯುವ ಕೆಲಸದಲ್ಲಿ ನಿರತ
ಳಾಗಿದ್ದಳು.
"ನೀವು ಹೋಗಿ. ನಾನು ಬರೋದಿಲ್ಲ." ಎಂದಳು.
ನೆಫಿಸ್ ನೆಜಮುಟ್ರ ಅಲಂಕೃತ ಹೆರಳು ಕೊರಳುಗಳತ್ತ ನೋಡಿ,
ತಬಬುವಾ ಮಾತು ಸೇರಿಸಿದಳು :