ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಮೃತ್ಯುಂಜಯ ಅ ಮಹಾಪೂರವನ್ನು ಇದಿರು ನೋಡುತ್ತ ಹೊಲಗಳು ಒಣಗಿದುವು. ಆದರೆ ಒಳಕಾಲುವೆಗಳಲ್ಲಿ ನೀರು ಹರಿಯುತ್ತಿದ್ದುದರಿಂದ ಹಸುರಿಗೆ ಅಭಾವ ವಿರಲಿಲ್ಲ. ಮಹಾದ್ವಾರದ ಹೊರಗೆ ಮಗ್ಗುಲಲ್ಲಿ ನೆಟ್ಟಿದ್ದ ತಾಳೆಯ ದಿಮ್ಮಿ ಯನ್ನು ದಿನವೂ ಯಾರಾದರೂ ಬಂದು ಹೂಗಳಿಂದ ಸಿಂಗರಿಸುತ್ತಿದ್ದರು. ಇದರಲ್ಲಿ ಆಸಕ್ತಿ ತೋರಿದ ಮೂವತ್ತು ಜನರ ಹೆಸರುಗಳ ಪಟ್ಟಿಯನ್ನು ಇಪ್ಪುವರ್ ಸಿದ್ದ ಪಡಿಸಿದ. ಅವರೆಲ್ಲ ಸರದಿಯಂತೆ ಅಲಂಕರಿಸುವ ಯೋಜನೆ ಯನ್ನು ಟ್ರೈ ಮಹೊಟೆಪ್ ರೂಪಿಸಿದ.

  • ರಾಜ್ಯಪಾಲ ಮರಳಬಹುದು, ದಂಡಿನೊಂದಿಗೆ ಕಂದಾಯ ಅಧಿಕಾರಿ

ಹಿಂದಿರುಗಬಹುದು ಎಂಬ ಆತಂಕ ಹಲವರನ್ನು ಮೊದ ಮೊದಲು ಬಾಧಿಸಿತು. ಆದರೆ ದಿನಕಳೆದಂತೆ ಆ ಭೀತಿ ದೂರವಾಯಿತು. ಕಂದಾಯ ಅರ್ಧದಷ್ಟು ಕಡಿಮೆಯಾದುದರಿಂದ ಎಷ್ಟೋ ಸಂಸಾರಗಳಲ್ಲಿ ಒಂದಷ್ಟು ಹೆಚ್ಚುವರಿ ಧಾನ್ಯವಿತ್ತು. ಅದನ್ನು ಬಳಸಿ ಅಗತ್ಯವಿದ್ದ ಬೇರೆ ಸಾಮಗ್ರಿಗಳನ್ನು ಅವರು ಕೊಂಡರು. ಆ ಊರಿನ ಮೋಚಿ ಆ ಮೂರು-ನಾಲ್ಕು ತಿಂಗಳಲ್ಲಿ ನೂರಾರು ಜೊತೆ ಜೊಂಡಿನ ಪಾದರಕ್ಷೆಗಳನ್ನು ಮಾಡಿದ, ಬಡಗಿ ಸೆಕ್ಸಾ . ಬಿಡುವಿಲ್ಲದ ಕೆಲಸ, ನೂರಕ್ಕೂ ಹೆಚ್ಚು ಮೂರು ಕಾಲುಗಳ ಪೀಠಗಳನ್ನು ಅವನೂ ಅವನ ಶಿಷ್ಯರೂ ತಯಾರಿಸಿದರು. ಸಂದೂಕಪೆಟಾರಿಗಳಿಗೂ ಬೇಡಿಕೆ ಇತ್ತು.

  • ನೇಕಾರರು ಬಟ್ಟೆಗಳನ್ನು ನೇಯ್ದು ಮಾರಿದರು ( ಅನ್ನುವಿನ

ವಿಧವೆಯ ಹಿರಿಯ ಮಗನೂ ತಮ್ಮ ಮಗ್ಗವನ್ನು ನಡೆಸಿದರು. ನೇಯ್ದ ಬಟ್ಟೆಗೆ ಪ್ರತಿಯಾಗಿ ಸಾಕಷ್ಟು ಧಾನ್ಯ ಬಂದುದರಿಂದ, ಅವರು ಬೇಗನೆ ಸ್ವಾವ ಲಂಬಿಗಳಾದರು.) ಸೈಫುವಿನ ಬಳಿಗೆ ಶಿಷ್ಯವೃತ್ತಿಗೆ ಎಳೆಯರು ಹೆಚ್ಚು ಹೆಚ್ಚಾಗಿ ಬಂದರು. ಮರದ ಮೂರ್ತಿಗಳೂ ಆಟಿಕೆಗಳೂ ಅಧಿಕ ಸಂಖ್ಯೆಯಲ್ಲಿ ಸಿದ್ಧವಾದುವು.

  • ಪೆಪೈರಸಿನಿಂದ ಪುಟ್ಟ ದೋಣಿಗಳನ್ನು ನಿರ್ಮಿಸುವವರ ಒಂದು ತಂಡ

ಊರಲ್ಲಿತ್ತು. ನದಿಯಲ್ಲಿ ಬೇಟಿಗೋ ವಿಹಾರಕ್ಕೋ ಬಳಸುವ ದೋಣಿ