ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಮೃತ್ಯುಂಜಯ జನರೆಡೆಗೆ ಸಿ೦ಹ ನೆಗೆಯತೀತೊಡಗಿತು. ಖೈಮ್ ಹೆದೆಯೇರಿಸಿದ್ದ ಬಾಣ ದಿಬ್ಬದ ಮೇಲಿನಿಂದ ಹೊರಟು, ಸುಂಯಾಗುಟ್ಟುತ್ತ ಸಾಗಿ, ಸಿಂಹದ ಕಿವಿಯನ್ನು ಹೊಕ್ಕು ಮೆದುಳನ್ನು ತಾಕಿತು. ಪ್ರಾಣಾಂತಿಕ ವೇದನೆಯಿಂದ ಗರ್ಜಿಸುತ್ತ ಸಿಂಹ ಮೇಲಕ್ಕೆ ಹಾರಿ, ಧೋಪ್ಪನೆ ಕೆಳಕ್ಕೆ బిತ್ತು. ದಿಬ್ಬದ ಮೇಲಿದ್ದವರು ಕೊಳದ ಕಡೆಗೆ ಇಳಿದರು. ఎದುರುಗಡೆಯల్లి ಹುಯಿಲೆಬ್ಬಿಸುತ್ತಿದ್ದವರೂ ಸಿಂಹದ ಹತ್ತಿರಕ್ಕೆ ಬರತೊಡಗಿದರು. ಖ್ನೆಮ್ ಕೂಗಿ ನುಡಿದ; ಇತರ ಕೆಲವರೂ ಅಂದರು : “ಅಪಾಯ! ತೀರಾ ಹತ್ತಿರ ಹೋಗ್ಭೇಡಿ !” ಮೂಗು ಕಿವಿಗಳಿಂದ ರಕ್ತ ಸೋರುತ್ತಿತ್ತು, ಉಸಿರಿಗಾಗಿ ಚಡಪಡಿಸು ತ್ತಿತ್ತು ಸಿ೦ಹ. “ಈ ಲೋಕದ್ದಾಯಿತು; ಪರಲೋಕಕ್ಕೆ ಹೋದರೆ ಒಸೈರಿಸ್ ಇವ ನನ್ನು ಮೊಸಳೆ ಬಾಯಿಗೆ ಕೊಡ್ತಾನೆ.” ಎಂದನೊಬ್ಬ. ಸ೦ಗಡಿಗರು ನಕ್ಕರು. ಖೈಮ್ బలಪ್ರಯೋగిಸಿ, ನೆಟ್ಟಿದ್ದ ಬಾಣವನ್ನು ಎಳೆದು ತೆಗೆದ. ಜನ ಹೋ ಹೋ.ಎ೦ದು ಸ೦ತಸ ವ್ಯಕತ್ತಪಡಿಸುತ್ತಿದ್ದ೦ತೆ, ಖೈಮ್ ಸಿಂಹದ ಬೆన్నిಗೆ ఒದೆದ. సింಹ ఒంದು ತಲೆಯನ್ನು ಪಕ್ಕಕ್ಕೆ ಚೆಲ್ಲಿತು. ಅದರ ನಿರ್ಜಿವ ಕಣ್ಣುಗಳು ಕೋರೈಸುವ ಬೆಳಕಿಗೆ ಅಂಜದೆ ಸೂರ್ಯನನ್ನು ನೋಡಿದುವು.

   జನ ಸ೦ತೋಫ. ಗ್ರಾಮ ಸಮಿತಿಯವರೂ ఆ ಗುಂಪಿನಲ್ಲಿದ್ದರು. ಅವರು ಮತ್ತು. ಖೈಮ್ ಹೊಟೆಪ್ ಖರ್ಜೂರ, ಸೌತೆ, ಈರುಳ್ಳಿಗಳನ್ನು ಕೊಳದಲ್ಲಿ ಇಳಿಬಿಟ್ಟರು. ಎಲ್ಲರೂ ತೋಪಿನ ದೇವತೆಗೆ ನಮಿ ಸಿದರು.

ಸೀಳು ತೊಲೆಯನ್ನು ಸಿಂಹದ ಕೈಕಾಲುಗಳ ನಡುವೆ ತೂರಿದರು. ತಲೆ, ಮುಂಡ ಅತ್ತಿತ್ತ ಜೋಲದಂತೆ, ತೊಲೆಗೆ ಅವನ್ನು ರಜ್ಜುವಿನಿಂದ ಕಟ್ಟಿದರು. ಹಳ್ಳಿಗೆ ನಡೆದರು.... అಲ್ಲಿಯೇ ಉಳಿದಿದ್ದ ಗ್ರಮಸರು-ಕಿರಿಯರು, ವ್ರದ್ದರು, ಸ್ತ್ರೀಯರು-ಸಿಂಹವನ್ನೂ ಬೇಟೆಗಾರರನ್ನೂ ಸಂಭ್ರಮದಿಂದ ಇದಿರ್ಗೊಂಡರು. అಹೂರಾಳಿಗೆ ಆನಂದೋದ್ವೇಗ. ತನ್ನ ಮಗುವನ್ನು ತಬ್ಬಿಕೊಂಡು ಬಾರಿ