ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೬೩ ತಪ್ಪೊ? ಸರಿಯಿರಲೇಬೇಕು. ಮುಂದುವರಿಸುತ್ತ ಅವನೆಂದು : "ನನ್ನ, ಜನ ಕೆಫ್ಟಿಯು ದ್ವೀಪವಾಸಿಗಳು. ಐಗುಪ್ತದ ಜನರ ಹಾಗೆ ಮುಂದುವರಿದವರಲ್ಲ. ವೈದ್ಯಿಕೆ, ಜಾದುಗಾರಿಕೆ, ಓದು ಬರಹ ಯಾವುದೂ ತಿಳೀದು. ಆದರೆ ಮಹಾ ಹಸುರು ಸಮುದ್ರ ಅವರ ಮಟ್ಟಗೆ ಒಂದು ಕೊಳ ಇದ್ದಹಾಗೆ ಬಾಲ್ಯದಲ್ಲಿ ನಾನು ನೀರಿಗಿಳಿದೆ; ಇನ್ನೂ ನೀರಲ್ಲೇ ಇದ್ದೇನೆ. ಮೀನಿಗೆ ನೀರು ಕುಡಿಯೋದು ಎಷ್ಟು ಸುಲಭವೋ ನನಗೆ ಅಷ್ಟು ಸಲೀಸು ಮುಖಸ್ತುತಿ ಮಾಡೋದು ಏನೋ ಸ್ವಾರ್ಥಕ್ಕಾಗಿ ಹೊಗಳ್ತಿದಾನೆ ಅಂತ ನೀವು ಭಾವಿಸಬೌದು. ಸ್ವಾಥರ್ ಇಲ್ಲದ ಜೀವ ಎಲ್ಲಿಯಾದರೂ ಇದ್ದರೆ ನನಗೆ ಹೇಳಿ. ನಾನು ನೋಡ್ಬೇಕು. ನೀರಾನೆ ಪ್ರಂತದ ಜನರ ಹಿತಸಾಧನೆನಿಮ್ಮ ಸ್ವಾರ್ಥ, ಐಗುಪ್ತದ ಶ್ರೇಯೋಭಿವೃದ್ಧಿ ಪೆರೋನ ಸ್ವಾರ್ಥ. ಸ್ವಂತ ವ್ಯಾಪಾರದ ಉತ್ಕರ್ಷ-ನನ್ನ ಸ್ವಾರ್ಥ. ನಿಜ ಹೇಳ್ತೇನೆ. ಅಲ್ಪ ಕಾಣಿಕೆ ಅಂತ ಸಾಂಪ್ರದಾಯಿಕವಾಗಿ ಹೇಳೋದು ಧೂರ್ತತನ. ಆದರೆ ಎಲ್ಲಿಗೆ ನಾನು ನಾನು ತಂದಿರೋದು ಮಾತ್ರ ನಿಜವಾಗಿಯೂ ಅಲ್ಪಕಾಣಿಕೆಯೇ. ಇದು ಸಾಂಕೇತಿಕ ಗೌರವ ಸೂಚಕ. ಅನ್ಯಥಾ ಭಾವಿಸಬಾರದು. ಸ್ವೀಕರಿಸ ಬೇಕು." ನಸುನಕ್ಕು ಮೆನೆಪ್ಟಾನೆಂದ: “ ಆಗಲಿ. ಇದು ವರ್ತಕ ಮಿತ್ರರಾದ ನಿಮ್ಮಿಂದ ನೀರಾನೆ ಪ್ರಾಂತಕ್ಕೆ ಸಂದಿರುವ ಕಾಣಿಕೆ. (ಲಿಪಿಕಾರನತ್ತ ನೋಡಿ) ಇಪ್ಯುರ್ವ, ಕೆಫ್ಟು ಅವರ ಕಾಣಿಕೆಗಳ ವಿವರ ಬರೆದಿಟ್ಟು ಬೊಕ್ಕಸಕ್ಕೆ ಅದನ್ನು ಜಮೆ ಮಾಡಿ. (ಮತ್ತೆ ಕೆಫ್ಟುವಿನತ್ತ ಹೊರಳಿ) ಶಿಷ್ಟಾಚಾರಕ್ಕೆ ಇಷ್ಟು ಸಾಕು. ಇನ್ನು ವಾಣಿಜ್ಯದ ವಿಷಯ ಮಾತನಾಡೋಣ." ಕಾಣಿಕೆಗಳನ್ನು ಇಪ್ಯುವರ್ ಮತ್ತು ಬಟಾ ಮಹಡಿಗೆ ಒಯ್ಯುತ್ತಿದ್ದಂತೆ ಕೆಫ್ಟು ಹಸನ್ಮುಖಿಯಾದ. "ದುಡಿಮೆಯಿಂದ ವಸ್ತುಗಳು ಸೃಷ್ಟಿಯಾಗ್ತವೆ; ಅವುಗಳ ವಿಕ್ರಯ