ಈ ಪುಟವನ್ನು ಪರಿಶೀಲಿಸಲಾಗಿದೆ

೧೭೪

ಮೃತ್ಯುಂಜಯ

ಒಂದು ಲಿಪಿ ಸುರುಳಿಯ ಹೊರಗಿನ ಗುರುತನ್ನು ಇಪ್ಯುವರ್ ಗಮನಿಸಿ,
ಅದನ್ನು ಜಾಗರೂಕತೆಯಿಂದ ಬಿಡಿಸುತ್ತಿದ್ದ:
" ಶಾಶ್ವತ ಕೀರ್ತಿ ಲಭಿಸೋದು ಲಿಪಿಕಾರನಿಗೆ ಮಾತ್ರ ಗೊತ್ತೊ ?
ಓದ್ತೀನೆ ಕೇಳಿ : ಅವರು ನಮ್ಮ ಮುಂದಿಲ್ಲವಾದರೂ ಅವರ ಹೆಸರುಗಳು
ಅಮರವಾಗಿವೆ. ಬಾಗಿಲುಗಳನ್ನೂ ಕಟ್ಟಡಗಳನ್ನೂ ನಿರ್ಮಿಸಿದರೆ ಅವು ನೆಲ
ಸಮವಾನಗುತ್ತನೆ. ಅಂತ್ಯವಿಧಿ ನಡೆಸಿದರೆ ಏನಾಯಿತು? ಗೋರಿಕಲ್ಲುಗಳಿಗೆ
ಕಲ್ಮಷ ಅಂಟಿಕೊಳ್ಳುತ್ತದೆ. ಗೋರಿಗಳನ್ನೇ ಮರೆತುಬಿಡುತ್ತಾರೆ. ಆದರೆ,
ಲಿಪಿಕಾರರು ರಚಿಸಿದ ಪುಸ್ತಕಗಳಿಂದಾಗಿ, ಅವರ ಹೆಸರುಗಳನ್ನು ಈಗಲೂ
ಉಚ್ಚರಿಸುತ್ತಾರೆ. ಅವರ ನೆನಪು ಅನಂತ ಕಾಲ ಉಳಿಯುತ್ತದೆ. ಲಿಪಿಕಾರ
ನಾನು,ನಿನ್ನ ಹೆಸರೂ ಅದೇರೀತಿ ಸ್ಥಿರವಾಗುತ್ತದೆಂಬುದನ್ನು ಮನಸ್ಸಿನಲ್ಲಿ
ಇಟ್ಟೂಕೋ."
ಅಂತ್ಯದಲ್ಲಿ ಯಾವಾಗಲೂ ಇಪ್ಪುವರ್ ಅನ್ನುತ್ತಿದ್ದ:
“ಇವತ್ತಿಗೆ ಸಾಕು. ಇನ್ನು ಮನೆಗೆ ಹೋಗಿ. ನಾಯಕರು ಬರೋ
ಹೊತ್ತಾಯ್ತು."
ರಾಮರಿಯನ್ನು ಹಿಂಬಾಲಿಸಿ ಹುಡುಗರೆಲ್ಲ ಹೊರಬೀಳುತ್ತಿದ್ದರು.
****
ನೆಫಿಸ್ ಗೆ ಬಸಿರು ನಿಂತಿತೆಂದು ಮೆನೆಪ್ ಟಾ ಸುಖಿ.
ಮಹಾಪೂರದ ದೈನಂದಿನ ವರದಿಯಿಂದ ನಾಯಕನಿಗೆ ಹರ್ಷ್.
ನೀರು ಕ್ರಮ ಕ್ರಮವಾಗಿ ಏರುತ್ತಿತ್ತು. ನೀರು ಅತ್ಯಂತ ಎತ್ತರವನ್ನು
ಮುಟ್ಟುತ್ತಿದ್ದುದು ನೊತನ ವರ್ಷದ ಮೂರನೆಯ ತಿಂಗಳಲ್ಲಿ.ಆಗ ನೀಲ
ಭರತದ ಭಾರೀ ಹಬ್ಬ ರಾಜಧಾನಿಯಲ್ಲಿ.
ಆ ಹಬ್ಬದ ದಿನ ಹತ್ತಿರ ಬಂದಂತೆ ಮೆನೆಪ್ ಟಾಗೆ ಆತಂಕ. ಕೆಫ್ಟು
ಪ್ರಸ್ತಾಪಿಸಿದ್ದ ಕರೆಯೋಲೆಯ ನೆನಪಾಗುತ್ತಿತ್ತು ,ಎಂದಾದರೊಮ್ಮೆ. ಆದರೆ
ಅದು ಅವನಿಗೆ ಮುಖ್ಯವಾಗಿರಲಿಲ್ಲ. ಮಹತ್ವದ್ದು,ಹಬ್ಬದ ವೇಳೆಗೆ ನೀಲ
ನದಿ ಮುಟ್ಟುವ ಎತ್ತರ. ಎಂದಿನಿಂತ ನಾಲ್ಕು ಮೊಳ ಹೆಚ್ಚಾದರೆ ಬಹ್ವಂ