ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯು೦ಜಯ

ನಿನಗೆ ಆಹಾರವಿತ್ತಳು. ಅವಳನ್ನು ಮರೆತೆಯೆ೦ದರೆ ಆಕೆ ನಿನ್ನನ್ನು ದೂರ
ಬಹುದು. ತನ್ನ ತೋಳುಗಳನ್ನು ದೇವರೆಡೆ ಎತ್ತಬಹುದು; ಆಗ ಆಕೆಯ
ದೂರು ಅವನ ಕಿವಿಗೆ ಬೀಳುವುದು....ನಿಶ್ಚಿತ ಮಾಸಗಳ ಬಳಿಕ ಅವಳು ನಿನಗೆ
ಜನ್ಮವಿತ್ತಳು. ಮೂರು ವರ್ಷಗಳ ಕಾಲ ಲಾಲಿಸಿದಳು, ಪಾಲಿಸಿದಳು...."
ಲಿಪಿಕಾರ ಹಾಳೆಯಿ೦ದ ತಲೆ ಮೇಲಕ್ಕೆ ಎತ್ತಿದೊಡನೆಯೆ ಮೆನೆಪ್ಟಾ
ನುಡಿದ :
" ಇದಿರಲಿ ಗುರುಗಳೇ."
ಲಿಪಿಕಾರನೆ೦ದ :
" ನಿನ್ನ ಅಭಿರುಚಿಗೆ ಮೆಚ್ಚಿದೆ. ನೀನ್ಯಾಕೆ ಅಕ್ಷರಹೀನನಾಗಿ ಉಳಿ
ದೆಯೋ ? ಅಕ್ಷರ ಕಲಿತವ ಆಳಬಲ್ಲ___ಗಾದೆ ಕೇಳಿದೀಯಾ ?"
" ನಾವು ದುಡಿಯೋ ಜನ."
" ನಾನು ದುಡಿಯೋದಿಲ್ವೆ ? ಹಿತೋಪದೇಶದ ಈ ಲಿಪಿ ಸುರುಳಿ ಬರೆ
ಯೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದೇನೆ ಗೊತ್ತೆ ? ನೀನು ರೈತನೊ ?"
" ಈಗ ರೈತ. ಚಿನ್ನದ ಗಣಿಯಲ್ಲಿ ದುಡಿದದ್ದೂ ಉ೦ಟು ; ಗೋರಿ
ಕಟ್ಟೋ ಕೆಲೆಸಾನೂ ಮಾಡಿದ್ದೇನೆ."
" ಸಾಕಷ್ಟು ಸ೦ಪಾದಿಸಿದೀಯಾ ಅನ್ನು. ಮಗನಿಗೆ ಒಬ್ಬ ತ೦ದೆ
ಕೊಡಬಹುದಾದ ಅತ್ಯಮೂಲ್ಯ ಉಡುಗೊರೆ ಈ ಲಿಪಿ ಸುರುಳಿ. ಮೌಲ್ಯ
ಮೂರು ಉಟೆನ್. ವಿನಿಮಯಕ್ಕೆ ಏನು ತ೦ದಿದ್ದೀಯಾ ? ಗಣಿಯಲ್ಲಿ
ಕೆಲಸ ಮಾಡಿದೋನು___ಬೆಳ್ಳಿ ಬ೦ಗಾರ ಉ೦ಟೊ ? ಇಬ್ಬರ ಮೈಮೇಲೂ
ಚಿನ್ನ ಮಾತ್ರ ಇಲ್ಲ. ಕುಸುರಿ ಕೆಲಸದ ವಸ್ತ್ರ ಗಿಸ್ತ್ರ ಬೇಡ. ಗಂಟಿನೊಳ
ಗೊ೦ದು ಗ೦ಟು ಇತ್ತಲ್ಲ ? ಹೊರ ತೆಗೆ."
" ನೆಫಿಸ್ ದೊಡ್ಡ ಗಂಟನ್ನು ತೆರೆದು ಒಳಗಿನ ಗಂಟನ್ನು ಎತ್ತಿದಳು.
ಅದನ್ನು ಬಿಚ್ಚುತ್ತ ಅವಳೆ೦ದಳು :
" ಕಾಡು ಬಾತು ಕೋಳಿ. ಹದವಾದದ್ದು. ಆಳುವ ಮಹಾಪ್ರಭುವಿನ
ಊಟಕ್ಕೆ ಯೋಗ್ಯ. ಅದನ್ನು ಹಿಡಿಯೋದಕ್ಕೆ ನನ್ನ ಈ ಗ೦ಡ ಒ೦ದು ದಿನ
ವೆಲ್ಲ ಕಷ್ಟಪಟ್ಟಿದ್ದಾನೆ. ಉಪ್ಪು ಹಾಕಿ ಸಿದ್ಧಪಡಿಸೋದಕ್ಕೆ ನಾನು ಒ೦ದು
ದಿನವೆಲ್ಲ ದುಡಿದಿದ್ದೇನೆ."