ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೧೯೭

ಗಳು_ಎಂದುಕೊಂಡ.  ಅಲ್ಲಿಯೇ ಇದ್ದ ಒಬ್ಬ ಕಾವಲು ಭಟನತ್ತ ತಿರುಗಿ,
"ಬೇರೆ ದೋಣಿಗಳು ಈ ಕಡೆಗೆ ಬರದ ಹಾಗೆ ಜನ ಗುಂಪು ಕಟ್ಟದ ಹಾಗೆ 
 ನೋಡ್ಕೊ,"  ಎಂದ .ಇನ್ನೊಬ್ಬ ಭಟನತ್ತ ಹೊರಳಿ ,  “ಓಡೋ ಕತ್ತೆ.
 ಅರಮನೆಗೆ ಹೋಗಿ ಅಮಾತ್ಯ ಭವನಕ್ಕೆ ಸುದ್ದಿ ಮುಟ್ಟಿಸು. ನೀರಾನೆ ಪ್ರಾಂತದ
 ನಾಯಕರು ಬಂದಿದ್ದಾರೆ, ವಿಶ್ರಾಂತಿ ತಗೋತಿದ್ದಾರೆ-ಅಂತ ಹೇಳು,” 
 ಎಂದು ನುಡಿದ.
       ಭಟ ಹೋದೊಡನೆ ಮೆನೆಪ್ ಟಾನನ್ನು ಉದ್ದೇಶಿಸಿ, " ಪ್ರಯಾಣ 
 ಸುಖಕರವಾಗಿತ್ತಾ?”_ಎಂದು ಕೇಳಿದ.
     ಬಟಾನ ಮೂಗಿನ ತುದಿ ಕೆಂಪಾಯಿತು. ಆತನೇ ಉತ್ತರವಿತ್ತ :
     “ ಹೌದು, ಸುಖಕರವಾಗಿತ್ತು. ಆ ವರ್ತಕ ಕಾಯ್ತಿದ್ದಾನೆ. ಕಳಿಸ್ಬಿಟ್ಟು
 ಬನ್ನಿ."
     ಬಟಾನನ್ನು ಅಧಿಕಾರಿ ದುರದುರನೆ ನೋಡುತ್ತ,  “ ಆಗಲಿ, ಆಗಲಿ,”
 ಎಂದು ಹೇಳಿ, ಮೆನೆಪ್ ಟಾಗೆ ಮತ್ತೊಮ್ಮೆ ನಮಿಸಿ, ಹಿಮ್ಮುಖವಾಗಿ ನಾಲ್ಕು
 ಹೆಜ್ಮೆ ಸರಿದು, ಸರಕ್ಕನೆ ತಿರುಗಿ ಹೊರಟು ಹೋದ.
    “ ಏನು ಬಟಾ ? ಅಪರೂಪಕ್ಕೆ ಸಿಟ್ಟು ಬಂತಾ?” ಎಂದ ಮೆನೆಪ್ ಟಾ.
    " ಸಿಟ್ಟು ಬರದೆ ಏನು ಮಾಡೀತು ? ರಾಜಧಾನಿಯ ದೋಣಿಕಟ್ಟೆ ಅಧಿ
 ಕಾರಿಯಂತೆ ! ವಿದೂಷಕ ನನ್ಮಗ !” 
   " ಸೈರಣೆ ಬೇಕು. ಇನ್ನೂ ಎಂಥೆಂಥವರು ಸಿಗ್ತಾರೊ?”
       ವಾತ್ಸಲ್ಯದ ಟೀಕೆ, ಬಟಾ ಕುಗ್ಗಿದ ಧ್ವನಿಯಲ್ಲಿ, "ನಿಜ ಮೆನೆಪ್ ಟಾ
 ಅಣ್ಣ" ಎಂದ
      ನಾಯಕನ ಆ ಮಾತು ಅವರ ಇರುವಿಕೆಯ ಗಭೀರತೆಯನ್ನು ಎತ್ತಿ 
 ತೋರಿಸಿತ್ತು....
            ರಾಜಧಾನಿಯ ಅಧಿಕಾರದ ವಿರುದ್ಧ ನೀರಾನೆ ಪ್ರಾಂತ ಬಂಡಾಯವೆದ್ದಿದ್ದ
 ಸಂಗತಿಯನ್ನು ಬಹ್ವಂಶ ಜನ ಅರಿತಿದ್ದರು.ಆ ಬಂಡಾಯದ ನಾಯಕ ಬಂದಿ
 ರುವ ಸುದ್ದಿ ವಿಳಂಬವಿಲ್ಲದೆ  ಹಬ್ಬಿತು. ಜನ ನೆರೆದರು.ಎಲ್ಲರೂ ಈಶಾನ್ಯ 
 ಮೂಲೆಯ ದೋಣಿಯತ್ತ ಬೊಟ್ಟು ಮಾಡುವವರೇ.