ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೦೧ ಎಡಕ್ಕೆ ಔಟ, ಬಲಕ್ಕೆ ಬೆಕ್, ಮುಂದೆಯೂ ಹಿಂದೆಯೂ ಬೋಯಿಗಳು. ದೋಣಿಯ ಹತ್ತಿರವೇ ಇರುವಂತೆ ತನ್ನ ನೌಕರರಿಗೆ ಸೂಚಿಸಿ, ಬಟಾ ಪಲ್ಲಕಿ ಯನ್ನು ಹಿಂಬಾಲಿಸಿದ.

    ಬೀದಿಯಿಂದ ಬೀದಿಗೆ ಹಬ್ಬಿತ್ತು ವಾರ್ತೆ. ದಾರಿಯುದ್ದಕ್ಕೂ ಜನ
ಸಾಲುಗಟ್ಟಿದ್ದರು.
    ದೋಣಿಕಟ್ಟೆಯ ರಸ್ತೆಯಿಂದ ಮೆರವಣಿಗೆ ವಕ್ರನಾಯಿಯ ಬೀದಿಗೆ
ಹೊರಳಿತು.
     ಗೇಬು ವಿವರಿಸಿದ :
     "ಅರಮನೆಯವರೆಗೂ ವಿಶಾಲವಾದ ರಾಜವೀಧಿಯೇ ಇದೆ. ಅದರೆ 

ಅದರಲ್ಲಿ ಪೆರೋ, ಅಮಾತ್ಯರು ಮತ್ತು ಮಹಾ ಅರ್ಚಕರು ಮಾತ್ರ ಮೆರವಣಿಗೆ ಹೋಗ್ಬಹುದು. ಬೇರೆಯವರು ಪಲ್ಲಕೀಲಿ ಕೂತು ಹೋಗೋ ಹಾಗಿಲ್ಲ. ನಡೀಬೇಕು. ಹಿರಿಯ ಅಧಿಕಾರಿಗಳು ಶ್ರೀಮಂತರು ಭೂಮಾಲಿಕರಿಗೆಲ್ಲ ಈ ಅಂಕುಡೊಂಕು ಅಡ್ಡದಾರಿ. ಅಗಲ ಕಿರಿದಾದರೇನಂತೆ ? ನಗರ ಪ್ರದಕ್ಷಿಣೆ ಮಾಡಬೇಕಾಗಿಲ್ಲ. ದೂರವೂ ಕಮ್ಮಿ.”

   ಮೆನೆಪ್ ಟಾ ಹೂಂಗುಟ್ಟಿದ.ಅವನ ಹಸಿದ ದೃಷ್ಟಿಗೆ ಆಹಾರವಾಗಿತ್ತು,

ಇಕ್ಕೆಲಗಳ ಬಾಹ್ಯನೋಟ. ಬಡವರ ವಸತಿ ಪ್ರದೇಶ ಸುಣ್ಣು ಕಲಸಿ ಒಣಗಿಸಿ ಮಾಡಿದ ಇಟ್ಟಿಗೆ ಮನೆಗಳು. ತಾಳೆಯ ತೊಲೆಗಳನ್ನಿರಿಸಿ ಮಣ್ಣು ಮೆತ್ತಿದ ಛಾವಣಿ. ಕುಶಲಕರ್ಮಿಗಳು, ದುಡಿಯುವ ಸ್ತ್ರೀ ಪುರುಷರು, ರೈತರು ಕೂಡಾ.

   ಗೇಬುವೆಂದ:  
   “ಇದು ವಕ್ರನಾಯಿ ಬೀದಿ. ಯಾವಾಗ ಯಾಕೆ ಆ ಹೆಸರಿಟ್ಟರೋ

ತಿಳೀದು. ಬೊಗಳುವ ಒಂದು ಪ್ರಾಣಿಯೂ ಇಲ್ಲಿ ಇಲ್ಲ! ಇದಕ್ಕೆ ಸಮಾ ನಾಂತರವಾಗಿ ಕಟ್ಟಿಯಿಂದ ನೇರವಾಗಿ ಉತ್ತರಕ್ಕೆ ಹೋಗುವ ಒಂದು ರಸ್ತೆ ಇದೆ.ಭಾರೀ ಭಾರೀ ಪಾನ ಮಂದಿರಗಳು, ಉಪಾಹಾರ ಗೃಹಗಳು, ಅಂಗಡಿ ಗಳು ಅಲ್ಲಿವೆ. ಯಾವತ್ತಾದರೂ ಒಂದು ಸಾಯಂಕಾಲ ಕರಕೊಂಡು ಹೋಗ್ತೇನೆ. ನಿಮ್ಮ ಪ್ರಾಂತದ ಭೂಮಾಲಿಕರೆಲ್ಲ ಅಲ್ಲಿಯೇ ಇದ್ದಾರೆ.