ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೧೫ ಅರಮನೆಯ ದೇವಮಂದಿರ ಸ್ವಚ್ಛ ಮಾಡೋದಕ್ಕೆ ನೇಮಿಸಿದ್ದಾರೆ. ರಾತ್ರೆ ಯಾದರೆ ಸಾಕು. 'ಒಸೈರಿಸ್ ಕರೀತಾನೆ. ಹೊರಗೆ ಹೋಗ್ಬೇಕು' ಅಂತ ಗೋಗರೀತಾನೆ. ಬಿಡದೇ ಇದ್ದರೆ ದೇವಮಂದಿರದ ಮುಂದೆ ಎದೆಗೆ ಹೊಡ ಕೊಂಡು ಕೂಗಾಡ್ತಾನೆ. ಅರಮನೆಯ ಮುಖ್ಯ ದೇವಸೇವಕರು ಇನೇನಿ 'ಹೊರಗೆ ಬೇಕಾದರೆ ಹೋಗಲಿ. ಆದರೆ ನಿಗಾ ಇರಲಿ,'ಆಂದಿದ್ದಾರೆ. ಅವ ನನ್ನು ಮಾತನಾಡಿಸಿ ಪ್ರಯೋಜನವಿಲ್ಲ. ಆತ ಉತ್ತರ ಕೊಡೋದಿಲ್ಲ. ತನ್ನಷ್ಟಕ್ಕೇ ಗೊಣಗಿಕೊಂಡೋ ಹಾಡ್ಕೊಂಡೋ ಇರ್ತಾನೆ.”

 "ಆಗಲಿ. ನೀವು ವಿಷಯ ತಿಳಿಸಿದ್ದು ಒಳ್ಳೇದಾಯ್ತು."
 "ಹೋಗಿ ಬನ್ನಿ."
 ಒಬ್ಬ ಭಟ ಬಾಗಿಲು ತೆರೆದ. ಅರ್ಧ ಮಾತ್ರ. ಮೆನೆಪ್ಟಾನ್ ಪರಿ 

ವಾರವನ್ನು ಹಿಂಬಾಲಿಸಿ ನಾಲ್ವರು ಅರಮನೆ ಯೋಧರೂ ಹೊರಬಿದ್ದರು. ಮತ್ತೆ ಬಾಗಿಲು ಮುಚ್ಚಿಕೊಂಡಿತು.

 ನದಿಯ ಮೇಲಿನಿಂದ ಬೀಸಿ ಬರುತ್ತಿತ್ತು ಹಿತಕರವಾದ ತಂಗಾಳಿ. ಮಹಾ 

ಪೂರದಲ್ಲೂ ಒದ್ದೆಯಾಗದ ಎತ್ತರದ ಕೃತಕ ದಂಡೆ. ಹತ್ತಾಳು ಭುಜಕ್ಕೆ ಭುಜ ತಗಲಿಸಿ ನಡೆಯಬಹುದಾದಷ್ಟು ಅಗಲ. ನುಣುಪಾದ ಮರುಳು ಸುರಿದು ನೆಲವನ್ನು ಮೆದುಗೊಳಿಸಿದ್ದರು. ನೀರಿನ ಬದಿಯುದ್ದಕ್ಕೂ ಹೂಬಳ್ಳಿಯ ಬೇಲಿ. ಈ ಕಡೆಗೆ ಅರಮನೆಯ ಪ್ರಾಕಾರ. ನೂರು ಮಾರುಗಳಿಗೊಂದು ದೀಪಸ್ತಂಭ ; ಅಲ್ಲಿ ಸಶಸ್ತ್ರ ಕಾವಲುಗಾರ. ನದಿಯ ನೀರನ್ನು ನೋಡುತ್ತ ಇಬ್ಬಿಬ್ಬರು ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಪೀಠಗಳು. ಮಾತಿಗಿಂತ ಮೌನ ಮೇಲು ಎನ್ನಿಸುವ ಪರಿಸರ.

 ಮೆನೆಪ್ಟಾನ ಮನಸ್ಸು ಉಲ್ಲಸಿತವಾಯಿತು. ಬಲಗಡೆಗೆ ದೂರದ 

ದೋಣಿಕಟ್ಟೆಯನ್ನು ದಾಟಿ, ಅದಕ್ಕೂ ಮುಂದೆ ಉದ್ದಕ್ಕೂ ದೀಪಗಳ ಅಲಂಕಾರ_ಪಾನ ಮಂದಿರಗಳಲ್ಲಿ, ಭೋಜನ ಗೃಹಗಳಲ್ಲಿ, ಉಳ್ಳವರ ಮನೆ ಗಳಲ್ಲಿ. ಎಡಗಡೆಗೆ ಪ್ರಾಕಾರ ದಾಟಿದ ಮೇಲೆ ಬಡ ಗುಡಿಸಲುಗಳ ಮಿಣುಕು ದೀಪಗಳು. ದೀಪಗಳೊ ? ನಕ್ಷತ್ರಗಳೊ ? ಅಲ್ಲಿ ಇರುಳಿನ ಮೇಲುಗೄ. ನದಿಯ ಮೇಲಂತೂ ತಂಗಿದ್ದ ಚಲಿಸುತ್ತಿದ್ದ ನಾವೆಗಳ ಸಹಸ್ರಾರು ಸೊಡರುಗಳು.