ಈ ಪುಟವನ್ನು ಪರಿಶೀಲಿಸಲಾಗಿದೆ

೨೧೮

ಮೃತ್ಯುಂಜಯ



ನಿಂತಲ್ಲೇ ನಿಂತಿದ್ದ ಮೆನೆಪ್ಟಾ ಪರಿವಾರಕ್ಕೆ ಆ ನೀರವತೆ ದುಸ್ಸಹವಾಗಿ
ಕಂಡಿತು.ನಾಯಕ ತಾನೊಬ್ಬನೆ ಆ ಶಿಲಾಪೀಠದೆಡೆಗೆ ಸಾಗಿದ.
ಹೆಜ್ಜೆ ಸದ್ದು ಕೇಳಿಸಿದರೂ ತಿರುಗಿ ನೋಡದೆ ఆ ಮನುಷ್ಯನೆಂದ:
" ಪೆರೋ ಬರ್ತಾರಾ ? ನಾನು ಏಳ್ಬೇಕಾ ?”
ಮೆನೆಷ್ ಟಾ ನುಡಿದ :
"ನಾನು ಅಪರಿಚಿತ.ಇಲ್ಲಿಯವನಲ್ಲ...ನಿಮ್ಮ ಹಾಡು ಕೇಳಿ ಸಂಕಟ
ವಾಯ್ತು. ಮಾತನಾಡಿಸಲು ನಾನು ಅರ್ಹನೋ ತಿಳೀದು.ಆದರೂಧೈರ್ಯ ಮಾಡಿದ್ದೇನೆ.”
"ಮಹಾತ್ಮರಿಗೆ ಉಚಿತವಾದ ವಿನಯ."
-ಧ್ವನಿ ಉತ್ಸಾಹ ತೋರಿತು.
" ನಾನು ಮೆನೆಪ್ಟಾ."
"ನೀರಾನೆ ಪ್ರಾಂತದ ನಾಯಕ ! ಯಾವಾಗ ಬಂದಿರಿ ? "
ಆತ ಗಡಬಡಿಸಿ ಎದ್ದ.
“ ನೀವು ದೇವಸೇವಕ ಅಲ್ಲವಾ ?”
“ ದೇವಸೇವಕ ಮೆನ್ನ. ಹುಚ್ಚ. ದೀಪಸ್ತಂಭದ ಹತ್ತಿರಕ್ಕೆ
ಹೋಗೋಣ.ನಿಮ್ಮ ಮುಖ ನೋಡ್ಬೇಕು.”
ಇಬ್ಬರೂ ಸಮಿಪದ ಪ್ರಾಕಾರ ದೀಪದೆಡೆಗೆ ನಡೆದರು.
ದೀಪದ ನಾಲಿಗೆ ಹೊಯ್ದಾಡುತ್ತಿತ್ತು. ಕಣ್ಣು ಕಿವಿ ಇಲ್ಲದವನಂತೆ
ಕಾವಲು ಭಟ ನಿ೦ತಿದ್ದ.
ಮೆನಪ್ಟಾ ಕಂಡುದು ರೂಪವಂತ ತರುಣನನ್ನು, ಹಣೆಯ ಅಗಲಕ್ಕೆ
ಆಳ ಗೆರೆಗಳು, ಸೊರಗಿದ ಮೈ. ಧರಿಸಿದ್ದುದು ಕೌಪೀನವನ್ನು ಮಾತ್ರ.
ತನ್ನ ఎದುರು ನಿಂತವನನ್ನು ನೋಡುತ್ತ ಮೆನ್ನನ ಕಣ್ಣಗಳು ಅಗಲ
ಗೊಂಡುವು ಭಾವೋದ್ವೇಗದಿಂದ ಮೂಗಿನ ಹೊಳ್ಳೆಗಳು ಅದುರಿದುವು.
ಬಿಸಿಯುಸಿರು ಒಳಕ್ಕೂ ಹೊರಕ್ಕೂ ಹೊಯ್ದಾಡಿತು.
ಏನಾಗುತ್ತಿದೆ ಎಂಬುದನ್ನು ಗಮನಿಸುವುದಕ್ಕೆ ಮುಂಚೆಯೇ ಮೆನ್ನ
ಮೆನೆಪ್ಟಾನ ಕೆರಳಿಗೆ ಆತು ಬಿದ್ದ. ಬಟಾ, ಔಟ,ಬೆಕ್ ಓಡಿ ಬಂದರು.