ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಮೃತ್ಯುಂಜಯ ಪಡಿಸಿದ್ದೀನೆ. ಒಳ,ಹೊರ ನಕಾಶೆ ಎರಡೂ ಇವೆ." ಚಿತ್ರಕಾರ :

    " ಚಿತ್ರದ ಅಂತಿಮ ಮಾದರಿಗಳೆಲ್ಲ ಇಲ್ಲಿವೆ ಅಮಾತ್ಯವರ್ಯ. ಒಪ್ಪಿಗೆ ನೀಡಿದ ಕೂಡಲೇ ಕೆಲಸ ಆರಂಭಿಸ್ತೇವೆ.”

ಅಕ್ಕಸಾಲಿಗ:

   " ತೀರಾ ಹೊಸ ಬಗೆಯ ಆಭರಣಗಳ ಮಾದರಿ ಚಿತ್ರಗಳು, ಸಮ್ಮತ ವಾದರೆ ಬಂಗಾರ ಅಳೆದು ಕೊಡಬಹುದು."

ಚಿತ್ರಕಾರ ಯುವಕ. ಶಿಲ್ಪಿಯೂ ಅಕ್ಕಸಾಲಿಗನೂ ನಡುವಯಸ್ಸಿನ ಹತ್ತಿರದವರು. ಆ ಮೂವರನ್ನೂ దిಟ್ಟಿಸಿ ಅಮಾತ್ಯ ಹೇಳಿದ. "ನಿಮ್ಮ ನಿಮ್ಮ ಕ್ಷೇತ್ರಗಳ ಪರಮ ಶ್ರೇಷ್ಠರು ನೀವು . ಹೋದ ಸಲವೇ ನಾನು ಹೇಳಿದ ಹಾಗೆ ನೀವು ನಡೆಸಿರುವ ಪೂರ್ವ ತಯಾರಿಯ ವಿಷಯದಲ್ಲಿ ಮಹಾಪ್ರಭು ಅತ್ಯಂತ ಸಂತುಷ್ಟರಾಗಿದ್ದಾರೆ. ಹೋರಸ್ ಸಮಾನರಾದ ನಮ್ಮ ಪೆರೋನ ಗೋರಿ ಅಭೂತಪೂರ್ವವಾಗಿ ರಚನೆ ಯಾಗ್ರದೆ ಅನ್ನೋ ವಿಷಯದಲ್ಲಿ ನನಗೇನೂ ಸಂದೇಹವಿಲ್ಲ. ಈ ನಕಾಶೆ, ಮಾದರಿ ಚಿತ್ರಗಳನ್ನೆಲ್ಲ ಮಹಾಪ್ರಭುವಿನ ಚಿತ್ತಕ್ಕೆ ತಂದು, ಅನುಮತಿ ದೊರಕಿಸಿ, ನಿಮಗೆ ಕರೆಕಳಿಸ್ತೇವೆ. ನಿಮಗೂ ಈಗ ನಿಮ್ಮ ಸಹಾಯಕರಿಗೂ ಮೂರು ತಿಂಗಳಿಗಾಗುವಷ್ಟು ಧಾನ್ಯ ತೈಲಗಳನ್ನು ಪೂರೈಕೆ ಮಾಡಬೇಕೂಂತ ಕಣಜದ ಅಧಿಕಾರಿಗಳಿಗೂ ಉಗ್ರಾಣದ ಅಧಿಕಾರಿಗೂ ಆದೇಶ ನೀಡ್ತೇವೆ.ನೀವು ಹೋಗಬಹುದು.” ಆ ಮೂವರೂ ನಮಿಸಿ, ಸಂತೃಪ್ತರಾಗಿ, ಹೊರಬಿದ್ದರು. ಎಳೆಯ ಲಿಲಿಪರಕಾರನತ್ತ ನೋಡಿ ಅಮಾತ್ಯನೆಂದ: " ಈ ಸುರುಳಿಗಳನ್ನೆಲ್ಲ ಜೋಪಾನವಾಗಿ ಪೆಟಾರಿಲ್ಲಿಟ್ಟು ಕಳುಹಿಸಿ ಕೊಡಿ. ಸೆನೆಬ್, ನೀನೆ ಹೋಗಿ ತಲುಪಿಸಿ ಬಾ. ಮಹಾಸನ್ನಿಧಿಗೆ, ಸಂದರ್ಶಕರು ಇನ್ನೂ ಯಾರಾದರೂ ಇದ್ದಾರೋ?" ಸೆನೆಬ್ ಅಂದ: