ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತುಂಜಯ . “ಗೋತ್ತಿಲ್ಲ . ನಾನಂತೂ ಅಲ್ಲ ! (ನಾನಾಗಿದ್ದಿದ್ರೆ ನೀವು ಯಾರೂ ಹುಟಾನೇ ಇದ್ದಿಲ್ಲ.)” “ಹುಚ್ಚ ! ಹುಚ್ಚ! ಬಿಗೀರೋ ಅವನ ಮುಸುಡಿಗೆ!” ಇನ್ನೊಬ್ಬ ದೇವಸೇವಕ ಚಂಗನೆ ಹಾರಿಬಂದು ಮೆನ್ನನ ಬಾಯಿಗೂ ಮೂಗಿಗೂ ಗುದ್ದಿದ.. (ಹಲ್ಲುಗಳು ಅಲುಗಿ ಭೂಮಿ ನಡುಗಿದಂತೆ ಭಾಸ ವಾಯಿತು ಮೆನ್ನನಿಗೆ.) ಕಿವಿಗಳಿಗೆ ಬಾರಿಸಿದ. (ಮೆನ್ನನ ನಾಲಗೆ ಉಪ್ಪುಪ್ಪಾ ಯಿತು. ಮೂಗಿನಿಂದ ರಕ್ತ ಸೋರಿತು.) “ಅಯ್ಯೋ ! ನನ್ನ ಹೃದಯ ಅಳ್ತಿದೆ !” ಎಂದು ಮೆನ್ನ ಅರಚಿದ. ಹೇಪಾಟನ್ ಕೂಗಿ ನುಡಿದ : “ಅಳು ! ಅಳು ! ಪಾಪಿ! ಈಗ ಉತ್ತರ ಕೊಡು. ಈ ಪ್ರಪಂಚ ದಲ್ಲಿ ದೇವರ ಪ್ರತಿನಿಧಿ ಯಾರು ?” “ನಾನಲ್ಲ, ನಾನಲ್ಲ!” (ದೇವಸೇವಿಕೆಯರ ಗುಂಪಿನಲ್ಲಿ ಕಿಸಿಕಿಸಿ ನಗು.) 'ಒದೀರಿ ಅವನಿಗೆ !" ಯಾರೋ(ಇನೇನಿ) ಒದೆದರು, ತೊಡೆಗೆ.. ನಡು ಮುರಿದವನಂತೆ ಮೆನ್ನ ಅಂಗಾತ ಬಿದ್ದ. ಹೇಪಾಟ್ ಆಜ್ಞಾಪಿಸಿದ ;

  'ಬೆನ್ನಿಗೆ ಬರೆ !'

ವಿಚಾರಣೆ ಆರಂಭವಾದುದಕ್ಕೆ ಮೊದಲೇ ತಾಮ್ರದ ಸಲಾಕೆಯನ್ನು ಗರ್ಭಗುಡಿಯ ಮಗ್ಗುಲಲ್ಲಿ ಕೆಂಡಗಳ ಮೇಲೆ ಇರಿಸಿದ್ದರು, ಕಿರಿಯ ದೇವ ಸೇವಕನೊಬ್ಬ ಸಲಾಕೆಯನ್ನು ತಂದು ಮರದ ಹಿಡಿಯನ್ನು ಮಹಾ ಅರ್ಚಕನ ಕೈಗಿತ್ತ, ಇನೇನಿ ಮೆನ್ನನ ಕೈಗಳನ್ನು ತಲೆಯ ಮೇಲ್ಗಡೆಗೆ ಒತ್ತಿ ಹಿಡಿದ. ಇನ್ನೊಬ್ಬ ಪಾದಗಳನ್ನು ನೆಲಕ್ಕೆ ಅಮುಕಿದ. ಹೇಪಾಟ್ ಪೀಠದಿಂದೆದು, “ಸೆತ್ ! ತೊಲಗು!” ಎಂದು ಆರ್ಭಟಿಸಿ, “ರಾ!” ಎನ್ನುತ್ತ ಸಲಾಕೆಯನ್ನು ಮೆನ್ನನ ಬೆನ್ನಿಗೆ ಅಡ್ಡವಾಗಿ ಇಳಿಸಿದ ಮೆನ್ನ' ಅಯ್ಯೋ ಅಯ್ಯ !” ಎಂದು ರೋದಿಸುತ್ತಿದ್ದಂತೆ ಹೇಪಾಟ್ “ಪ್ಟ್!” ಎಂದು ಇನ್ನೊಮ್ಮೆ ಸಲಾಕೆ ಪ್ರಯೋಗಿಸಿದ. “ಅಮನ್ !”