ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮ ಮೃತ್ಯುಂಜಯ

          ಮೆನೆಪ್ ಟಾ ನಸುನಕ್ಕ.
          ಬೆಕ್-ಔಟರೂ ಅಂಬಿಗರೂ ತಮ್ಮ ತಮ್ಮ ಜನನ ಫಲ ಕೇಳಬೇಕು     ಎಂದುಕೊಂಡಿದ್ದರು. ಮೆನ್ನನ ಮಾತಿನ ವೈಖರಿ ನೋಡಿ, ಅವರು ತೆಪ್ಪ ಗಾದರು. ನಾಯಕನ ಕನಸಿನ ಬಗೆಗೆ ಹೇಳೋಣವೇ ಎಂದು ಯೋಚಿಸುತ್ತಿದ್ದ ಬಟಾನೂ ಸುಮ್ಮನಾದ.
         ವೃತ್ತಾಕಾರವಾಗಿ ಕುಳಿತಿದ್ದವರನ್ನೆಲ್ಲ ಒಮ್ಮೆ ನೋಡಿ ಮೆನ್ನನೆಂದ:
         “ಜ್ಞಾನ ಅಜ್ಞಾನಗಳಿಗೆ ಯಾವಾಗಲೂ ಜಗಳ, ಅರಿವಿನ ಬೆಳಕನ್ನು ಮನುಷ್ಯ ಕಂಡಾಗಿನಿಂದಲೂ ಇದು ನಡೆದಿರಬೇಕು. ವಿದ್ಯಾದೇವತೆ ಥೊಥ್  ಲಿಪಿಯನ್ನೇನೋ ಕಂಡು ಹಿಡಿದ. ಆದರೆ ಜನ ಸುಲಭವಾಗಿ ಅದನ್ನು ಒಪ್ಪಿಕೊಳ್ಲಿಲ್ಲ."                       
         "ಹೌದೆ?"
         "ಪೆರೋ ಅಹಮೋಸ್ ಒಳ್ಳೆಯವನು. ಆದರೆ ಲಿಪಿ ಅವನಿಗೆ ಇಷ್ಟ ವಿರಲಿಲ್ಲ, 'ಬರವಣಿಗೆ ನಾಗರಿಕತೆಯ ವೈರಿ' ಅಂದ. 'ಇಷ್ಟರವರೆಗೆ ಮಕ್ಕಳೂ ಯುವಕರೂ ಶ್ರದ್ದೆಯಿಟ್ಟು ಕಲೀತಿದ್ರು: ಕಲಿಸಿದ್ದನ್ನು ಕಷ್ಟಪಟ್ಟು ನೆನಪಿಟ್ಟೋತಿದ್ರು, ಬರವಣಿಗೆ ಬಂದ್ಮೇಲೆ ಅವರ ಜ್ಞಾಪಕ ಶಕ್ತಿ ಮೊಂಡಾಯ್ತು'  ಅಂತ ಗೋಗರೆದ."
         “ಹಹ್ಹ !” 
         ನಾಯಕನ ಜತೆ ಬಟಾನೂ ನಕ್ಕು ಅಂದ :
         “ನಮ್ಮಲ್ಲಿ  ಅಕ್ಷರಾಭ್ಯಾಸ  ಈಗ  ತಾನೇ  ಶುರುವಾಗಿದೆ, ಚಿಕ್ಕವರ ಜ್ಞಾಪಕ ಶಕ್ತಿ ಮಾಯವಾಗೋದಕ್ಕೆ ಎಷ್ಟು ಕಾಲ ಬೇಕೋ ನೋದೋಣ!"
         ಮೆನೆಪ್ ಟಾ ಕೇಳಿದ:
         “ನಿಮ್ಮ ಜ್ಞಾಪಕ ಶಕ್ತಿ ಮಂದವಾಗಿದೆಯೆ ಮೆನ್ನ ?“
         "ಹುಂ! ಮಹಾ ಅರ್ಚಕ ಬರೆ ಎಳೆದಮೇಲೆ ಅದು ವಿಪರೇತ ಚುರುಕಾಗಿದೆ! ಬಾಲ್ಯದ ಕಹಿನೆನಪುಗಳನ್ನು ಮರೆಯೋದಕ್ಕೆ ಯತ್ನಿಸ್ತೇನೆ. ಆಗೋದಿಲ್ಲ. ನೆನಪಿನ ಗವಿಯಲ್ಲಿ ಆಳಕ್ಕೆ ಅದುಮಿದಷ್ಟೂ ಧುಮುಧುಮಿಸ್ಕೋಂಡು ಹೊರಗೆ ಬರ್ತವೆ.....ಮನುಷ್ಯ ವಿಚಿತ್ರ ಪ್ರಾಣಿ. ಒಳ್ಳೇದೂ ಮಾಡ