ಈ ಪುಟವನ್ನು ಪರಿಶೀಲಿಸಲಾಗಿದೆ

೨೬೬ ಮೃತ್ಯುಂಜಯ

    “ಇವತ್ತು ಊಟ-ಅಲ್ಲ-ಭೋಜನಕ್ಮುಂಚೆ ಶುರುವಾಯ್ತು.”
    ಇನೇನಿ ಪಕ್ಕದಲ್ಲಿದ್ದ ತನ್ನ ವಸತಿಗೆ ಹೋಗಿ, ಹಣತೆಯ ಬೆಳಕಿನಲ್ಲಿ ತಡ ಕಾಡಿ, ಒಂದು ಬೇರಿನ ಚೂರನ್ನು ಹೊರತಂದು ಬಟಾನಿಗಿತ್ತ.
    “ತೇದು,ಗಂಟಲಿನ ಹೊರಗೆ ಲೇಪಿಸು. ನಾಳೆ ಬೆಳಿಗ್ಗೆ ಬರಿಹೊಟ್ಟೀಲಿ ಅವನನ್ನು ಕರಕೊಂಡ್ಬಾ. ಮಂತ್ರ ಹಾಕೋಣ."
    ಬಟಾ ಬೇರನ್ನು ಮೂಸಿ ನೋಡಿದ.
    “ದೇವರ ಔಷಧಿ. ಮೂಸಬಾರ್ದು,” ಎಂದ ಇನೇನಿ, ಛೇಡಿಸುವ ಸ್ವರದಲ್ಲಿ.
    “ತಪ್ಪಾಯ್ತು .”
    “ಊರಿನಿಂದೇನಾದರೂ ಸುದ್ದಿ ಇದೆಯಾ ?”
    “ವರದಿ ಕಳಿಸೋದಕ್ಕೆ ನಾವು ಯಾರಿಗೂ ಹೇಳಿಯೇ ఇల్ల."
    “ಹಾಗೋ? ನಿಮ್ಮೂರಿನ ಅರ್ಚಕ ಆ ಕೆಲಸ ಮಾಡ್ಬಹುದಾಗಿತ್ತು.”
    “ನಿಜ. ನಾವು ನೀರಾನೆ ಪ್ರಾಂತದವರು. ತಲೆ ಸ್ವಲ್ಪ ದಪ್ಪ.ಹೊಳೀಲಿಲ್ಲ. "
    “ಹಹ್ಹ!”
    "ಬೇರು ಲೇಪನದಿಂದ ಗುಣವಾದ್ರೆ-”
    “ಒಂದೆ ಸಲಕ್ಕೆ ಆಗ್ತದಾ? ತಪ್ಪದೆ ಕರಕೊಂಡ್ಬಾ. ಬರೇ ನೆಗಡಿ ಗಂಟಲು ನೋವು ಅಂತ ಉತ್ಪ್ರೇಕ್ಷೆ ಮಾಡಬಾರ್ದು.”
    "ಆಗಲಿ."
         *    *     *      *
    ರಾಜಧಾನಿಯಲ್ಲಿ ಕಳೆದ ಮೊದಲ ರಾತ್ರೆಯ ಬಳಿಕ ಔಟ ಮತ್ತು ಬೆಕ್ ಮಲಗುತ್ತಿದ್ದುದು ಮೊಗಸಾಲೆಯಲ್ಲಿ, ನಾಯಕನ ಕೊಠಡಿಯ ಹೊರಗೆ, ಬಾಗಿಲ ಬಳಿ.
    ಇನೇನಿ ನೀಡಿದ್ದ ಬೇರಿನ ಲೇಪನದಿಂದ ಕೆಲವು ತಾಸುಗಳ ಮಟ್ಟಿಗೆ ಉಸ್ನಿ ರಾಟ ಸರಾಗವಾಗಿ, ಔಟನಿಗೆ ನಿದ್ದೆ ಬಂದಿತ್ತು . ಬೆಳಿಗ್ಗೆ ಎದ್ದಾಗ ಹಿಂದಿನ ದಿನದ್ದೇ ದುಸ್ಥಿತಿ. ಜತೆಗೆ ಬೆಕ್ ಕೂಡಾ ಸುರು ಸುರು ಎನ್ನತೊಡಗಿದ.