ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೩೭ “ಕಸಾಯಿ ಮನೆಯಿಂದ ಒಂದು ಬಾತುಕೋಳಿ ಹೊರಗೆ ದಾಟ್ಸು. ಅಂಗಡಿಯವನು ಮೂರ್ತಿ ಕೊಡ್ತಾನೆ.” అವಳೆದ್ದು, "బರ್ತೀని ಅಯ್ಯ,” ಎಂದಳು. ಬೆಕ್ ನ ಕಡೆ ತಿರುಗಿ, “ ಬರ್ತೀನಿ ಅಣ್ಣ,”ಎಂದು ಹೇಳಿ ಮಗುವನ್ನು ಎದೆಗವಚಿಕೊಂಡು ಹೊರಟಳು.

     ಬೆಕ್—ఔಟరತ್ತ ನೋಡಿ, “ವಿಷಮ ಜ್ವರ ,” ఎంద ఇನೇని, ತಾను ಮಂತ್ರ ಹಾಕಿದ್ದು ಅಂಥಿಂಥ ಕಾಹಿಲೆಗಲ್ಲ ಎಂಬುದನ್ನು ಸ್ವಷ್ಟಪಡಿಸಲು.
     ತನ್ನ ಸಹಾಯಕ ದೇವಸೇವಕನನ್ನು ಕರೆದು, “ಒಂದು ಚಾಪೆ ತಂದು ಹಾಸು,” ఎంದ, “ ನಿಮ್ಮನ್ನು ಬಹಳ ಹೊತ್ತು ಕಾಯಿಸಿದೆ,” ಎಂದು ರಾಗವೆಳೆದ.
      ಬಿಡಿಸಿದ ಚಾಪೆಯ ಮೇಲೆ ಔಟ ಮತ್ತು ಬೆಕ್ ಕುಳಿತರು. ಇನೇನಿ ಚಿರತೆ ಚರ್ಮವನ್ನು అವರೆದುರಿಗೆ  ಸರಸಿ, ಅದರ  ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತ.
     “ನೀವಿಬ್ಬರೂ ತಲೆ ತಗ್ಗಿಸಿ ಪ್ ಟಾ  ದೇವರ ಹೆಸರನ್ನು ಹತ್ತು ಸಲ ಉಚ್ಚರಿಸಿ.”
      ಔಟ ಮತ್ತು ಬೆಕ್ ಆ ಸೂಚನೆಯಂತೆ ಮಾಡಿದರು.
      ಇನೇನಿ  ಪ್ ಟಾ ಪ್ರಾರ್ಥನಾ ಸ್ತೋತ್ರ ಪಠಿಸಿದ.
     ಪಠಣ ಮುಗಿಸಿ ಅವನೆಂದ: “ನಿಮ್ಮ ಬಾಧಿಸ್ತಿರೋ ಪೀಡೇನ ಇನ್ನು ಉಚ್ಚಾಟನೆ ಮಾಡ್ತೇನೆ. ಕಣ್ಣು ಮುಚ್ಚಿಕೊಳ್ಳಿ. (ಅವರು ಕಣ್ಣೆವೆಗಳನ್ನು ಮುಚ್ಚಿదరు.).... ತೊలగు, ತೊలగు ! ಶೈತ್ಯದ ಮಗನೆ, ಮುಂಜಾವದಲ್ಲಿ ಮೂಳೆಗಳನ್ನು ಮುರಿದು ಮುಕ್ಕುವವನೆ, ತಲೆಬುರುಡೆಯನ್ನು ನಾಶಮಾಡು ವವನೆ,  ಶಿರಸ್ಸಿನ  ಸಪ್ತದ್ವಾರಗಳನ್ನು ಅಸ್ವಸ್ಥಗೊಳಿಸುವವನೆ, ತೊలగు ! ತೊలగు ! ನೆಲಕ್ಕೆ  ಬೀళు ಹೊಲಸೆ, ಹೊಲಸೆ, ಹೊಲಸೆ !....ಹುಂ.... ಮುಗೀತು. ಇನ್ನು,ಮೇಲೆ ನೋಡಿ.”
     ಬೆಕ್ ತಲೆ ಎತ್ತಿದ ಮೇಲೆ, ಸಹಾಯಕ ತಂದುಹಿಡಿದ ಪವಿತ್ರೋದಕ ದಿಂದ ನಾಲ್ಕು ಹನಿಗಳನ್ನು ಅವರ ಮೇಲೆ ಅರ್ಚಕ ಚುಮುಕಿಸಿ, “ ಹೊರಗೆ ಹೋಗಿ ನೆಗಡಿ ತೆಗೀರಿ,” ಎಂದ.
       ೧೮