ಈ ಪುಟವನ್ನು ಪರಿಶೀಲಿಸಲಾಗಿದೆ

ಗಾರನಿಗೆ ರಾಜಾತಿಥ್ಯವೆ? ಛೆ!" 'ಬೇರೇನೋ ಇರಬೇಕು' 'ಏನೂ ಇಲ್ಲ ನಾಳೆ ಅವನನ್ನೇ ಪ್ರಾಂತಪಾಲ ಮಾಡ್ತಾರೆ'. 'ಹಾಗಾದರೆ ఇಲ್ಲಿಗೇ ಬರಲಿ, ಈಗಲೇ ಬರಲಿ.')

   ಸೆಡ್ ಉತ್ಸವಕ್ಕೆ ಇನ್ನೂ ದಿನ ಗೊತ್ತಾಗಿಲ್ಲ ಎಂದು ಪ್ರಾಂತಪಾಲರಿಗೆ ವಿಸ್ಮಯ.
   "ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ರಾಜಧಾನಿಯಲ್ಲೇ ಇರಬೇಕಾಗುತ್ತದೆ." ಎಂದು ಯಾರೋ ಒಬ್ಬರು ಗುಟ್ಟಿನ ಸುದ್ದಿ ಹಂಚಿದರು.
   "ಸಪತ್ನೀಕರಾಗಿ ಬನ್ನಿ ಅಂತ ಪೆರೋ ತಿಳಿಸಿದ್ದರೆ ಚೆನ್ನಾಗಿತ್ತು," ಎಂದು ಅಸಮಾಧಾನ ವ್ಯಕ್ತಪಡಿಸಿದವರು ಕೆಲವರೇ. ಉಳಿದವರಿಗೆಲ್ಲ ಅದು ಸ್ವಾಗ ತಾರ್ಹ ಬದಲಾವಣೆ. ಇಲ್ಲಿ ಇತಿಮಿತಿ ಇಲ್ಲದ ಆಮೋದ ಪ್ರಮೋದಗಳು. ಆಡಳಿತದ ಸಮಸ್ಯೆಗಳ ತಲೆನೋವೂ ಇಲ್ಲ. ಲಂಗುಲಗಾಮಿಲ್ಲದ ಹರಟೆ ('ಅವರು ಹಾಗಂತೆ' 'ಇವರು ಹೀಗಂತೆ' 'ನನಗೆ ಗೊತ್ತಪ್ಪ, ಸ್ವತಃ ಅವರೇ ನನಗೆ ಹೇಳಿದ್ದು' 'ಮಹಾರಾಣಿ ತಲೆಗೂದಲು ಕತ್ತರಿಸಿ, ಕೃತಕ ಕೇಶಕವಚ ಇಟ್ಟು, ಅದರ ಮೇಲೆ ಕಿರೀಟ ಧರಿಸ್ತಾರಂತೆ.' 'ಯಾವಾಗ?' 'ಮಹಾಪ್ರಭು ಕೇಶಮುಂಡನ ಮಾಡಿಸ್ಕೊಂಡ್ಮೇಲೆ' 'ಪಾಪ !  ಯಾಕೆ ಈ ಬುದ್ಧಿ ?' 'ಷೋಕಿ. ಗಂಡಸು ಕೃತಕ ಕೇಶ ಧರಿಸಿದರೆ, ತುಂಬಾ ಕೂದಲಿದೆ ಅಂತ ತೋರಿಸ್ಕೋಬೌದು. ನರೆತ ಕೂದಲಿಗೆ ಕಪ್ಪು ಹಚ್ಚಬೇಕಾದ ಪ್ರಮೇಯವೂ ಇಲ್ಲ.' 'ಹೆಂಗಸರು?' 'ಐಗುಪ್ತದ ದೇಶದಲ್ಲಿ ಗಂಡಸರಿಗಿಂತ ಯಾವುದರಲ್ಲಿ ಕಮ್ಮಿ ಹೆಂಗಸರು?' 'ಹೆಚ್ಚು ತೂಕದ ದೊಡ್ಡ ಸ್ವರ್ಣ ಕಿರೀಟ' 'ಸರಿ, ಸರಿ!')
   ವಯಸ್ಸು ಬೇರೆ ಬೇರೆ. ಅಭಿರುಚಿಗಳು ಕೂಡಾ.ಅವರ ನಡುವೆ ಅಸೂಯೆಯೂ ಸುಳಿಯುತ್ತಿತ್ತು. ರಾಜಧನಿಯಲ್ಲಿ ಮಿತ್ರರಿದ್ದರು.ಎಲ್ಲರೂ ಇಲ್ಲಿ ನೇಮಕಗೊಂಡೇ ಪ್ರಾಂತಗಳಿಗೆ ಹೋದವರು. ಮಿತ್ರರ ಒಡನಾಟದಲ್ಲಿ ಕಾಲಹರಣ.
   ಒಮ್ಮೊಮ್ಮೆ ಗಭೀರ ಹರಟೆ. ('ಮಹಾ ಅರ್ಚಕರ ಧೋರಣೆ ಹ್ಯಾಗೆ ಸರಿ? ಪ್ರಾಚೀನ ನಡವಳಿಕೆಗೆ ಇದು ವಿರುದ್ಧ ಅಲ್ವಾ?' 'ದೇಶದಲ್ಲಿ ಬಿಗಿ