ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

೨೮೩

ಮಾಡಿದ:
"ಒಂದು ಪೀಠ ಪಲ್ಲಕಿಯನ್ನೂ ನಾಲ್ವರು ಬೋಯಿಗಳನ್ನೂ ದಯ
ಪಾಲಿಸ್ಬೇಕು.”
"ನಿಮಗೆ ?”
“ನಾನು ಹಾಗೂ ನನ್ನ ಮಿತ್ರರೆಲ್ಲರ ಅನುಕೂಲಕ್ಕೆ, ತಾತ್ಕಾಲಿಕ
ಉಪಯೋಗಕ್ಕೇಂತ ಎರವಲು ಪಡೆಯುವ ಬದಲು, ನಮ್ಮದೇ ಪಲ್ಲಕಿ
ಇದ್ದರೆ__”
“__ರಾಜಧಾನಿಯಲ್ಲಿ ಓಡಾಟ ಸುಲಭವಾಗ್ತದೆ.”
“ನಮ್ಮ ಅಮಾತ್ಯರು ಕರುಣಾಳು,ಮಹಾಪ್ರಭು ದಯಾಮಯಿ ಅಂತ
ಹೇಳ್ಕೊಂಡು ದಿನ ಕಳೀತೇವೆ.”
ಅಮಾತ್ಯ ಸಿಟ್ಟನ್ನು ಹತ್ತಿಕ್ಕಿದ."
“ಆಗಲಿ, ಪಲ್ಲಕಿ ಸೌಲಭ್ಯ ಒದಗಿಸೋಣ."
ನುಟ್ ಮೋಸ ಕಿರಿಯ ಲಿಪಿಕಾರನತ್ತ ನೋಡಿದ. ಆವರು ಬರೆದ
ಕೊಳ್ಳುತ್ತಿರುವುದನ್ನು ಕಂಡು ಸಂತೋಷಪಟ್ಟ.
ಅಮಾತ್ಯ ನಗೆಯ ಮುಖವಾಡ ದರಿಸಿ ಅಂದ :
"ಉಪಕಾರ ಸ್ಮರಣೆ ಮಾಡಲಿಲ್ಲವಲ್ಲ ನುಟ್ಮೋಸ್ ?”
“ಎಲ್ಲಾದರು ಉಂಟೆ ? ಎಲ್ಲಾದರು ಉಂಟೆ ? ನಾವು ಉಸಿರಾ
ಡ್ತಿರೋದೇ ನಿಮ್ಮ ಕೃಪೆಯಿಂದ,” ಎಂದು ನುಟ್ಮೋಸ್ ನೆಲದವರೆಗೂ
ಬಾಗಿ ಅಮಾತ್ಯನಿಗೆ ನಮಿಸಿದ. ಉಳಿದ ಭೂಮಾಲಿಕರೂ ಅವನನ್ನು ಅನು
ಕರಿಸಿದರು.
ಇಷ್ಟಾದ ಮೇಲೆ ನುಟ್ಮೋಸ್ ನ ಹಿರಿಮೆಯನ್ನು ನೀರಾನೆ ಪ್ರಾಂತದ
ಇತರ ಭೂಮಾಲಿಕರು ಒಪ್ಪಿಕೊಳ್ಳದೆ ಉಂಟೆ?
ಹೀಗಿದ್ದರೂ ಸೆತೆಕ್ ನಖ್ತ್ಗೆ ಒಂದು ಬಗೆಯ ಕರುಬು. ಆತ ಅಂದು
ಕೊಂಡ ; ತಾನು ಇಲ್ಲಿಗೆ ಬಂದುಬಿಡಬೇಕಾಗಿತ್ತು;ಆಗ ಅರಮನೆ
ವರ್ತುಲದಲ್ಲಿ ತಾನೂ ಪ್ರಭಾವಶಾಲಿಯಾಗಬಹುದಿತ್ತು....
ನೀರಾನೆ ಪ್ರಾಂತದ ನಾಯಕ ಅರಮನೆಯ ಅತಿಥಿಯಾಗಿ ರಾಜಧಾನಿಗೆ
ಬರುತ್ತಾನೆ ಎಂದು ತಿಳಿದಾಗ ನುಟ್ಮೋಸ್ಗೆ ಗಂಟಲ್ಲಲ್ಲಿ ಮಿನೆಲುಬು