ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                 ಮೃತ್ಯುಂಜಯ                  ೨೯೧
    " ಹ್ಞು. ಅದೂ ಒಳ್ಳೇದೇ. ಅಗ ವಿಶೇಷ ಪೂಜೆ ಏಪಾ೯ಟು ಮಾಡೋಣ. ಅಲ್ಲಿಯ ಅರ್ಚಕರಿಗೆ ಹೇಳ್ತೇನೆ.”
            “ ಮಹಾ ಅರ್ಚಕರ ದರ್ಶನವೂ ಆಗ ನಮಗೆ ಲಭಿಸ್ತದೆ.”
            "ಹೌದು.”
            “ ನಾನು ಬರಲಾ, ಅಯ್ಯ?"
            “ ನಿಮಗೆಲ್ಲ ನನ್ನ ಅಶೀವಾ೯ದ."
 *                     *                     *                         *

ಮೆಂಫಿಸಿನಿಂದ ಆನ್ ನಗರಕ್ಕೆ ವೇಗದ ದೋಣಿಯಲ್ಲಿ ಒಂದು ಹಗಲಿನ ಪಯಣ.

                ಆನ್ ದೇವನಗರಿ. ಪುಟ್ಟ ಊರು . ಅಳಿವೆಯ ಹಲವು ಪ್ರಾಂತಗಳಲ್ಲಿ ಒಂದಕ್ಕೆ ಸೇರಿದ್ದು. ಪ್ರಾಂತದ ಮುಖ್ಯ ಪಟ್ಟಣವೂ ಅಲ್ಲ. ರಾನ ದೇವ ಮಂದಿರ ಅಲ್ಲಿ ಇತ್ತೆಂದು ಅದಕ್ಕೆ ಪ್ರಾಧಾನ್ಯ. ಅಲ್ಲಿಯ ಮುಖ್ಯ ಅರ್ಚಕನೂ ಐಗುಪ್ತದ ಮಹಾ ಅರ್ಚಕನೂ ಮಿತ್ರರು. ಮಂದಿರ, ಅದರ ಎದುರು ಅಂಗಡಿ ಸಾಲುಗಳು. ದೇವಸೇವಕಗಣ. ರಾ ಐಗುಪ್ತದ ಹಿರಿಯ ದೇವರಾದರೂ ರಾಜ ಧಾನಿ ಮೆಂಫಿಸಿನಲ್ಲಿ ಪ್ ಟಾನಿಗೆ  ಅಗ್ರಪೂಜೆ. ರಾನಷ್ಟೇ ಪ್ರಾಚೀನ ಪ್ ಟಾಕೂಡಾ. ರಾನ ದಶ೯ನಕ್ಕೆಂದು ಬರುತ್ತಿದ್ದ ಕೆಲ ಯಾತ್ರಿಕರನ್ನೂ ಹೇರು ದೋಣಿಗಳ ಅಂಬಿಗರನ್ನೂ ಬಿಟ್ಟರೆ, ಆನ್ ನಗರಕ್ಕೆ ಬಂದು ಹೋಗುತ್ತಿದ್ದವರು ಬೇರೆ ಯಾರೂ ಇರಲಿಲ್ಲ.ಯಾತ್ರಿಕರ ಆರೈಕೆಯೇ ಕಸುಬಾಗಿದ್ದ ಹತ್ತಾರು ಕುಟುಂಬಗಳು ಆಲ್ಲಿ ವಾಸವಾಗಿದ್ದುವು. ನಗರಾಧಿಕಾರಿ ಪ್ರಭುತ್ವದ ಪ್ರತಿನಿಧಿ. ಪೆರೋ ರಾ ದರ್ಶನಕ್ಕೆ ಬಂದಾಗ ಅಲ್ಲಿ ಒಂದೆರಡು ತಾಸು ತಂಗುತ್ತಿದ್ದ.ಅವನ ಅನುಕೂಲಕ್ಕಾಗಿ ಕಟ್ಟಿದ ಒಂದು ಸಣ್ಣ ಕಟ್ಟಡವಿತ್ತು. ಅದೇ ರಾಜಗೃಹ. ಸ್ವಲ್ಪ ದೂರದಲ್ಲಿ, ಆ ಪ್ರಾಂತದ ಶ್ರೀಮಂತ ಭೂಮಾಲಿಕರು ಆತ್ತ ಬಂದಾಗ ತಮ್ಮ ವಸತಿ ಸೌಕರ್ಯಕ್ಕೆಂದು ಕಟ್ಟಿಸಿದ್ದ ಎರಡು ಭವನಗಳಿದ್ದುವು.
               ಆನ್ ತಲಸಿದ ರಾಜದೂತ ಮಾರನೆಯ ಸಂಜೆಯೇ ಮಹಾ ಅರ್ಚಕನ ಉತ್ತರದೊಡನೆ ಮರಳಿ ಬರುವುದು ಸಾಧ್ಯವಿತ್ತು.
       ಆದರೆ ಮಹಾ ಅರ್ಚಕರು ಗರ್ಭಗುಡಿಯಲ್ಲಿ ಮೂರು ದಿನಗಳ ಅಖಂಡ ಅರ್ಚನೆಯಲ್ಲಿ ನಿರತರಾಗಿದ್ದರು. ರಾಜದೂತ ಬರುವ ವೇಳೆಗೆ ಸರಿಯಾಗಿ