ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೨ ಮೃತ್ಯುಂಜಯ ಮೆನೆಪ್ ಟಾಗೆ. ಪ್ರಸ್ತುತ ಪರಿಸ್ಥಿತಿಯ ಗಭೀರತೆ ಅದಕ್ಕೆ ಕಾರಣವಿರಬಹುದು -ಎಂಬ ಸಮಾಧಾನ.

      ಬದುಕಿನ ನೇಗಿಲು ಗೆರೆಗಳು  ಮುಖದ  ಮೇಲೆ ಆಳವಾಗಿ ಮೂಡಿದ್ದ ವೃದ್ಧ-ಹೆಖ್ವೆಟ್   ಕತ್ತಿನಲ್ಲಿ ಅಮೂಲ್ಯ ಹರಳುಗಳನ್ನು ಕೂಡಿಸಿದ್ದ ಬಂಗಾರದ ಸರಗಳಿಲ್ಲದೇ ಹೋಗಿದ್ದರೆ, ಯಾವನೋ ಇಳಿವಯಸ್ಸಿನ ಬಡಪಾಯಿ ಈತ ಎನ್ನಬಹುದಿತ್ತು.

ಗೇಬು ಅಂದ:

    'ನಾನು ಹೆಖ್ವೆಟ್ ರ ಪರಿಚಯ  ಮಾಡ್ಕೊಡೋದೆ ?     ಹ್ಹ !.... ಇವರು ಪೆರೋನ ಬೆನ್ನುಪಕ್ಷಿ, ಅವರು ಚಡಪಡಿಸಿದರೆ ಇವರು ರೆಕ್ಕೆ ಬಡೀ ತಾರೆ. ಹೀಗೆ ಹೇಳೋದು ಧರ್ಮದ್ರೋಹವಲ್ಲ ಅಂದ್ಕೊಂಡಿದ್ದೇನೆ. (ಒಳ ಬಾಗಿಲಿನತ್ತ ನೋಡಿ)  ಅಗೋ ! ನನ್ನ ಪ್ರೀತಿಯ ಪತ್ನಿ ಕಾಣಿಸ್ಕೊಂಡ್ಲು.  ನೀವಿಬ್ಬರೂ ಮಾತಾಡ್ತಾ ಇರಿ ಬಂದ್ಬಿಟ್ಟೆ .”

ಹೆಖ್ವೆಟ್ ಗೇಬುವಿನೆಡೆಗೆ ನೋಡಿ ನಿಟ್ಟುಸಿರು ಬಿಟ್ಟ. “ಇವನ ಆಳ್ವಿಕೆಯಿಂದ ನಿಮ್ಮ ಪ್ರಾಂತದ ಜನ ಬೇಸತ್ತಿ ದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ....ನನಗೆ ಬಹಳ ಹೊತ್ತು ನಿಂತಿರೋದಕ್ಕಾಗಲ್ಲ, ಬಾ ಮಗು. ಕೂತ್ಕೊಳ್ಳೋಣ." ಹೆಖ್ವೆಟ್ ಉಷ್ಟ್ರಪಕ್ಷಿಯ ಹಿಂದಕ್ಕೂ ಮುಂದಕ್ಕೂ ತಲೆ ಆಡಿ ಸುತ್ತ ಮೆನೆಪ್ ಟಾನನ್ನು ಹಿಂಬಾಲಿಸಿದ. ಅರವತ್ತು ಮೊಳ ಅಗಲ ನೂರು ಮೊಳ ಉದ್ದದ ಭವನ. ಮಹಾಮನೆಗೆ ಅಂಟಿಕೊಂಡಿದ್ದ ಪಾರ್ಶ್ವದಲ್ಲಿ, ಅಲ್ಲಿಂದ ಬರಲು ಅತ್ತ ಹೋಗಲು ಆರು ಬಾಗಿಲುಗಳು. ಗೋಡೆಗಳಲ್ಲಿ ಪೆರೋನ ಹಿರಿಮೆಯನ್ನು ಬಣ್ಣಿಸುವ ಉಬು ಚಿತ್ರಗಳು, ಛಾವಣಿಗೆ ಅಂಟಿಸಿದ್ದ ಹೊಳಪಿನ ಹಸುರು ಹಂಚು. ಕೆಂಪು ಬಣ್ಣದ ಹೊಳಪು ಸಾರಣೆಯ ನೆಲ, ನಡುವೆ ಅಂಡಾಕಾರದ ಖಾಲಿ ಸ್ಥಳವನ್ನು ಬಿಟ್ಟಿದ್ದರು. ಆದರ ಆ ಬದಿಗೂ ಈ ಬದಿಗೂ ಪೀಠಗಳಿದ್ದವು. -ಇಪ್ಪತ್ತಷ್ಟು. ಪ್ರತಿಯೊಂದು ಪೀಠದ ಎದುರಿಗೂ ಒಂದೂವರೆ ಮೊಳ ಎತ್ತರದ ಒಂದೊಂದು ಮೇಜು. ಭವನದ ಮುಖ್ಯದಾರಕ್ಕೆ ಇದಿರಾಗಿ ಎದುರು ತುದಿಯಲ್ಲಿ ಮಹಾಪ್ರಭುವಿನ ವಿಶೇಷ ಪೀಠ, ತುಸು ದೂರದಲ್ಲಿ