ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೦೯

ತಂತೀ ವಾದ್ಯದ ಗುಂಯಾರವವಿಲ್ಲ) ಉಚ್ಚ ಕಂಠದಲ್ಲಿ ಘೋಷಿಸಿದ:

  "ಓ ಹೋರಸ್ ಸಮಾನ ದೀರ್ಘಾಯು ಪೆರೋ! ಸ್ವರ್ಣ ದೇವತೆ

ಹಾಥೋರ್ ನಿನ್ನ ಮೂಗಿಗೆ బల ಕೊಡಲಿ!"

  ಅರಸ ತನ್ನ ಪೀಠದ ಮೇಲೆ ಕುಳಿತ; ಮಹಾರಾಣಿ, ನೆಹನವೇಯ್ಟ್

ಮತ್ತು ಕಿರಿಯರೆದತ್ತ ಆತ ಆತ್ಮೀಯ ನೋಟ ಬೀರಿದ; ಬಲಗಡೆಯಲ್ಲಿ ಹೆಖ್ವಟ್, ಮೆನೆಪ್ಟಾ, ಗೇಬುರನ್ನು ಗುರುತಿಸಿ ನಸುನಕ್ಕ.

  ಎಲ್ಲರೂ ಕುಳಿತುಕೊಳ್ಳುತ್ತಿದ್ದಂತೆ ತಂತೀವಾದದಿಂದ ಮತ್ತೆ ಅಲೆ

ಗಳೆದ್ದುವು.

   ಬಳಿಯಲ್ಲಿ ಅನುಜ್ಞೆಗಳ ದಾರಿ ನೋಡುತ್ತ ನಿಂತಿದ್ದ ಸೇವಕರಿಗೆ ಅಮಾತ್ಯ

ಅಂದ:

  "ಹಾರ, ಹೂ......."
   ಒಳಬಾಗಿಲಲಿನಿಂದ ಪುಷ್ಪಹಾರವಿದ್ದ ಬಂಗಾರದ ತಟ್ಟೆಗಳನ್ನು ಹೊತ್ತು

ಕೊಂಡು ದಾಸಿಯರು ಸಾಲುಗತಟ್ಟೆ ಬಂದರು. ಮೂವರು ನಾಲ್ವರು ದಾಸಿಯರು ಬಂದಿದ್ದ ಪ್ರತಿಷ್ಠಿ ತರಿಗೆಲ್ಲ ಹಾರ ಹಾಕಿದರು. ಹಿರಿಯ ರಾಜಕುಮಾರಿ ತಂದೆಯ ಕೊರಳಿಗೆ ಹೂಮಾಲೆ ತೊಡಿಸಿದಳು. ಮಹಾರಾಣಿ ಮತ್ತಿತರ ಸ್ತ್ರೀ ಜನರಿಗೆಲ್ಲ ಕೈಗಳಲ್ಲಿ ಹಿಡಿದುಕೊಳ್ಳಲು, ಅರೆಬಿರಿದ ತಾವರೆ ಮೊಗ್ಗುಗಳು ದಾಸಿಯರು ತಂದುಕೊಟ್ಟರು. ಗಂಡಸರ ಹಿಂಗೈಗಳಿಗೆ ಸುಗಂಧದ್ರವ್ಯ ಪೂಸಿದರು. ಮಹಿಳೆ ಯರ ನೆತ್ತಿಗಳಮೇಲೆ ಕ್ರಮೇಣ ಕರಗಿ ಕಂಪು ಬೀರುವ ಸುಗಂಧ ಬಿಲ್ಲೆಗಳನ್ನಿಟ್ಟರು.

  ನಾಲ್ಕಾರು ಸೇವಕರ ಎರಡು ತಂಡಗಳು ಹಾಲ್ಲುಗಲ್ಲಿನ ದೊಡ್ಡ ಜಾಡಿ 

ಗಳನ್ನು ಪ್ರಯಾಸಪಡುತ್ತ ಔತಣ ಭವನಕ್ಕೆ ಹೊತ್ತು ತಂದರು. ಕಪ್ಪುಮಸಿ ಯಲ್ಲಿ ಅವುಗಳ ಮೇಲೇನೋ ಬರೆದಿತ್ತು.

  ಗೇಬು ಮೇನೆಪ್ಟಾಗೆಂದು:
  "ಇದು ಖೋಟಾ ಬದುಕಲ್ಲ ಅನ್ನೋದಕ್ಕೆ ಸಾಕ್ಷ್ಮ ದೇವತೆಗಳ 

ಸೇವನೆಗೆ ಯೋಗ್ಯವಾದ ದ್ರಾಕ್ಶಾಸುರೆ. ಹಿಂಡಿದ ದ್ರಾಕ್ಶೆಯ ಜಾತಿ, ಗುಣ ಮಟ್ಟ, ಸುರೆ ತಯಾರಿಸಿದ ಊರು, ದಿನಾಂಕ_ಎಲ್ಲ ಆ ಜಾಡಿಗಳ ಮೇಲೆ ಬರೆದಿದ್ದಾರೆ. (ಇತರ ಹತ್ತಾರು ಜಾಡಿಗಳು ಬರ ತೊಡಗಿದುದನ್ನು ಕಂಡು) ನೋಡಿ ಭೇರೆ ಮದ್ಯಗಳೂ ಇವೆ."