ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೨೫ "ನಾಯಕರಿಗೆ. ಅವರ ಪತ್ನಿ ಬಸುರಿ. ಇನ್ನು ಒಂದೆರಡು ತಿಂಗಳಲ್ಲಿ ಹೆರಿಗೆ. ಅಮನ್ ಕೂಡಾ ಅವರಿಗೆ. ಇಲ್ಲಿ ಒಬ್ಬರೇ ಇರುವಾಗ ರಕ್ಷಣೆ ನೀಡೋದಕ್ಕೆ." "ನಿಮಗೊಂದು?" "ನನ್ನ ದೋಣೀಲಿದೆ.ನಾಳೇ ನಾನು ಊರಿಗೆ ಹೋಗಿ ಎರಡೂ ಮೂರು ವಾರಗಳಲ್ಲಿ ವಾಪಸಾಗ್ತೇನೆ." "ಸೆಡ್ ಉತ್ಸವಕ್ಕೆ ಬಂದ್ಬಿಡಿ. ಹಾಗೇ ಬರ್ತಾ...” "ಏನು?" “ನಮ್ಮ ಮಿತ್ರರ ಹತ್ತಿರ ಎ‌‍‍‍ಷ್ಟು ಮೂತ್ರಿಗಳಿದ್ದರೂ ತಂದ್ಬಿಡಿ. ಕೆಫ್ಟು ನಿಮಗೆ ಕೊಡೋದಕ್ಕಿಂತಲೂ ಸ್ವಲ್ಪ ಜಾಸ್ತಿಯೇ ಕೊಡೋಣ." “ಕೆಫ್ಟು ತಗೊಂಡು ಉಳಿದರೆ ತರಬಹುದು. ನೋಡ್ತೇನೆ. ಈ ಮೂರ್ತಿಗಳ ಮಾರಾಟ ಮೆಂಫಿಸಿನಲ್ಲಿ ಅಂತ ಕೆಫ್ಟು ಹೇಳಿದ್ದ. ನಾನು ತರೋದರಿಂದ ಕೆಪ್ಪಗೆ ತೊಂದರೆಯಾಗಬಾರದು.” “ನೋಡಿ ಸಾಧ್ಯವಾದರೆ___” “ಈ ಮೂರ್ತಿಗಳಿಗೆ ಏನು ಕೊಡಲಿ ?” “ಏನು ತಂದಿದ್ದೀರಿ? ತೋರಿಸಿ. ನಿಮ್ಮೂರಿನ ಮೂರ್ತಿಗಳಿಗಾಗಿ ನಿಮ್ಮಿಂದಲೇ ಮೌಲ್ಯ ಪಡೀಬೇಕಲ್ಲಾ....” “ವ್ಯವಹಾರದಲ್ಲಿ ಹಾಗೆಲ್ಲಾ ಯೋಚಿಸಿದರೆ ಆಗ್ತದಾ?” ಮೌಲ್ಯ ವಿನಿಮಯಕ್ಕೆ ಸೊಂಟಪಟ್ಟಿ ಮತ್ತು ಚೀಲ ಎರಡೂ ಬೇಕಾಗ బಹುದೆಂದು ಬಟಾ ಭಾವಿಸಿದ್ದ. ಈಗಿನ ವಿಶಿಷ್ಟ ಪರಿಸ್ಥಿತಿಯಲ್ಲಿ ಚೀಲವನ್ನು ಉಳಿಸುವುದು ಸಾಧ್ಯ ಎಒದು ತೋರಿದು. ಸೊಂಟಪಟ್ಟಿಯನ್ನು ಅಂಗಡಿಯವನ ಕೈಗಿತ್ತು ಅವನೆಂದ : “ನಮ್ಮೂರಿನ ದೇವನೇಕಾರನ ಹೆಂಡತಿ ತಯಾರಿಸಿದ್ದು, ಉತ್ಕೃಷ್ಟ ವಸ್ತು. ತಗೊಳ್ಳಿ ಈ ಚೀಲ ಮತ್ತು ಮೂರ್ತಿಗಳನ್ನು ತಗೊಂಡು ಹೋಗೋ ದಕ್ಕೆ ಬೇಕು” ಇವತ್ತು ಆಗುವ ಲಾಭ ಕಡಿಮೆ ಎಂಬುದು ಅಂಗಡಿಕಾರನಿಗೆ ಸ್ಪಷ್ಟ ವಾಯಿತು. ಊರಿನಿಂದ ನೂರಾರು ಮೂರ್ತಿಗಳನ್ನು ತಂದು ಪೂರೈಸಲ