ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೨೫

ಅಲ್ಲಲ್ಲಿ ಕೇಳಿಸಿತು. ಜನರಲ್ಲಿ ಕೆಲವರಿಗೆ ದುರ್ಬುದ್ಧಿ ಹುಟ್ಟಿತು. ಅವರು
ರಾನನ್ನು ಜರೆದರು. ಆ ಜನರನ್ನು ರಾ ನಿಗ್ರಹಿಸಿದ.
ತೀರಾ ಮುದುಕನಾದಾಗ ಹಿರಿಯ ಮಗ ಒಸೈರಿಸ್ ಗೆ ಅಧಿಕಾರ ಬಿಟ್ಟು
ಕೊಟ್ಟು ಆಕಾಶಕ್ಕೆ ಅಡ್ಡವಾಗಿ ಹಗಲಿನ ಪಯಣ ಕೈಗೊಳ್ಳುತ್ತ ರಾ
ಕಾಲ ಕಳೆದ.
ಹೀಗೆ, ಪ್ರಥಮ ಪೆರೋ ಹಿರಿಯ ದೇವರಾದ.
ಅವನ ಮಗ ಒಸೈರಿಸ್ ತನ್ನ ಆಳ್ವಿಕೆಯ ಬಳಿಕ ಕೆಳಲೋಕದ ಅಧಿಪತಿ
ಯಾದ; ಸತ್ತವರಿಗೆ ಸ್ಥಾನನೀಡುವ ನ್ಯಾಯಮೂರ್ತಿಯಾದ.
___ಊಟ ಮುಗಿಯತ್ತ ಬಂದಿತ್ತು. ವೃದ್ಧ ಸೃಷ್ಟಿಯ ಕಥೆಗೆ ಮಂಗಳ
ಹಾಡಿದ:
"ರಾ ನಮೋ ಬೆಳಕೆ ನಮೋ
ಬುವಿಯ ಜನಕ ನಮೋ
ಯೋ ಯೋ ಯೋ
ಒಸರಿಸ ದೇವ ನಮೋ
ಪರಲೋಕದ ಒಡೆಯ ನಮೋ
ಯೋ ಯೋ ಯೋ
ಈ ಭಕ್ತರ ನೀ ಸಲಹು
ಹಾಡುವ ಈ ದಾಸನ ಸಲಹು
ಯೋ ಯೋ ಯೋ...."
ಕಟ್ಟೆ ಬಿರಿದಂತೆ ಮಾತು. ಪುನಃ ಖಿವವ ಪಾನ. ಗಾಯಕನಿಗೂ ಅವನ
ಹುಡುಗನಿಗೂ ಹೊಟ್ಟೆತುಂಬ ಊಟ; ಒಬ್ಬನಲ್ಲಿ ಉಳಿದಿದ್ದ ಒಂದೇ
ಒಂದು ನಡುವಸ್ತ್ರದ ಉಡುಗೊರೆ.
ಮೆನೆಪ್ಟಾನ ಮನಸ್ಸನ್ನು ಹಾಡಿನ ಸಾಲುಗಳು ಮತ್ತೆ ಮತ್ತೆ ಮೀಟಿ
ದುವು. ಸೂರ್ಯದೇವ 'ಶು' ಎಂದಾಗ ಗಾಳಿ ಬೀಸಿತಂತೆ. ಎಂಥ ಸುಂದರ ಕಲ್ಪನೆ!
ನಿಜವಾಗಿ ಭೂಮಿಯ ಸೃಷ್ಟಿ ಈ ರೀತಿ ಆಯಿತೋ ಇಲ್ಲವೋ, ಯಾರಿಗೆ
ಗೊತ್ತು ? ಆದರೂ, ಹಾಗೆ ಆಯಿತೆಂಬುದು ಪ್ರಾಚೀನ ನಂಬುಗೆ. ನಿಜವಿರಲೂ
ಬಹುದು. ಮೆನೆಪ್ಟಾ ಇನ್ನೂ ಒಂದು ಬಗೆಯ ಕಥೆ ಕೇಳಿದ್ದ. 'ಈ
ಲೋಕದಲ್ಲಿನ ಸರ್ವಸ್ವವನ್ನೂ ಸೃಷ್ಟಿಸಿದವನು ಕುಶಲ ಕರ್ಮಿಗಳ ದೇವರಾದ