ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೩೫೦ ಮೃತ್ಯುಂಜಯ లిల్ల. ಹಾಕಿಸಿದ. ಎಣ್ಣೆಯ ದಾಸ್ತಾನೂ ಇದೆ ಎಂಬುದನ್ನು ಖಚಿತಪಡಿಸಿ ಕೊಂಡ.

  ಲಿಪಿಕಾರ ಬಂದು, ಬರೆದುಕೊಳ್ಳಲು ಸಿದ್ಧನಾಗಿ ಹೆಖ್ವೆಟ್ನ ಪೀಠದ 

ಬುಡದಲ್ಲಿ ಕುಳಿತ.

  ಕಣ್ಣು ಮುಚ್ಚಿ, ಯೋಚಿಸುವವನಂತೆ ಲಯಬದ್ಧವಾಗಿ ಗೋಣು ಆಡಿಸಿ, 

ನಡುನಡುವೆ ತಡೆದು,ಹೆಖ್ವೆಟ್ ಹೇಳತೊಡಗಿದ:

  " ರಾನ ಸಾಮ್ರಾಜ್ಯವಾದ ಐಗುಪ್ತದ ಸರುಸಭೆಯ ಹಿರಿಯ ಸಲಹೆಗಾರ ಹೆಖ್ವೆಟ್ನ ವಿಚಾರಗಳು. ಏನೆಂದರೆ, ಪ್ರತಿಯೊಬ್ಬನೂ ತನ್ನ ತನ್ನ ಕರ್ತವ್ಯ ಮಾಡುತ್ತಾ ಇದ್ದರೆ, ಪ್ರಭುತ್ವನಾವೆ ಎಲ್ಲಿಯೂ ಮಡುವಿನಲ್ಲಿ ತತ್ತರಿಸುವುದಿಲ್ಲ,

ನೀರಿನಡಿಯ ಮರಳು ದಿಬ್ಬಕ್ಕೆ ಬಡೆಯುವುದಿಲ್ಲ.

  “....ಏಕತಾನದಲ್ಲಿ ಹುಟ್ಟು ಹಾಕಿದರೆ, ನಾವೆ ನೇರಹಾದಿಯಲ್ಲಿ ಚಲಿಸುತ್ತದೆ.
  “..ಅಂತಃಕಲಹದಿಂದ ಶಕ್ತಿ ಹ್ರಾಸ, ನಿದ್ರಾನಾಶ.....”
  ಅಷ್ಟಕ್ಕೆ ನಿಲ್ಲಿಸಿ, “ಬರಕೊಂಡೆಯಾ? ಹ್ಯಾಗಿದೆ?” ಎಂದು ಹೆಖ್ವೆಟ್ ಲಿಪಿಕಾರರನ್ನು ಕೇಳಿದ.
  "ಚೆನ್ನಾಗಿದೆ, ಬಲು ಚೆನ್ನಾಗಿದೆ ಅಯ್ಯ.”
  " ಹುಂ. ಇನ್ನಷ್ಟು ಹೇಳ್ತೇನೆ. ಬರಕೋ....ಓ ದೇವರೇ! ನೀನು ಚಿರಂಜೀವತ್ವವನ್ನು ಹಾದು ಹೋಗುತ್ತಿರುವೆ; ನಿನ್ನ ಆಕಾರಗಳು ಅಸಂಖ್ಯ.... ಬರಕೊಂಡೆಯಾ ? ಇದು ಧಾರ್ಮಿಕ ಜಿಜ್ಞಾಸೆ....ಭೂಮಿಯ ಮೇಲೆ ಅವನ ಎಲ್ಲೆಗಳು ಬಲಿಷ್ಟವಾಗಿವೆ; ಇಡೀ ಭೂಮಿಯಷ್ಟೇ ವಿಶಾಲವಾಗಿವೆ; ಸ್ವರ್ಗದಷ್ಟೇ ಎತ್ತರವಾಗಿವೆ....ಮುಂಗೈ ಜೋರಿನಿಂದ ಯಾರೂ ಏನನ್ನೂ ಸಾಧಿಸಲಾರರು.... ಯಾರು ದೇವರನ್ನು ಬಾ ಎಂದು ಕರೆಯುವನೋ ಆತನ ನೆರವಿಗೆ ಅವನು ತಕ್ಷಣವೇ.... ಬರುತ್ತಾನೆ...ಎಲ್ಲಿ ಒಮ್ಮೆ ಓದಿ ಹೇಳು. ಸರಿಯಾಗಿ ಬರೆದಿದೀಯೊ ನೋಡೋಣ."
    ಅಷ್ಟರಲ್ಲಿ ರಾ ಮಂದಿರದಿಂದ ನಗಾರಿಯ ಸದ್ದು ಕೇಳಿತು. ಅಸ್ತಂಗತ ನಾಗುತ್ತಿದ್ದ ರಾನಿಗೆ ಅದು ಮುಚ್ಚಂಜೆಯ ಪೂಜೆ, ಪಾರ್ಥನೆ. ನಗಾರಿಯ ಮೊರೆತವಿದ್ದಷ್ಟೂ ಹೊತ್ತು ಹೆಖ್ವೆಟ್ ಕಣ್ಣುಮುಚ್ಚಿ ಕುಳಿತ.