ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

                                                         ೩೫೫
     “ಸೃಷ್ಟಿಕರ್ತ   ರಾನ    ಮಂದಿರದ     ಚೌಕಟ್ಟಿಗಿನ್ನೂ     ಬಂಗಾರದ     ಲೇಪನವಿಲ್ಲ!   ಛೆ! ಛೆ!   ಹೀಗೂ  ಉಂಟೆ?   ಕಳೆದ  ಸಲವೇ  ನಾನು_"
     “ಹೌದು.   ಸ್ವರ್ಣಲೇಪನ   ಬೇಕು    ಅಂದಿದ್ದಿರಿ,       ಆದರೆ        ಸೃಷ್ಟಿಕರ್ತ       ರಾ  ಅಷ್ಟು  ಶ್ರೀಮಂತನಲ್ಲ."
    "ಗೋತ್ತು,  ಗೋತ್ತು,"  ಎಂಬ   ಹೆಖ್ವೆಟ್   ಗೋಣು  ಆಡಿಸಿದ.
    "ಒಳಗೆ   ಬರೋಣವಾಗಲಿ."
    “ಅಲ್ಲಿ   ಕುಳಿತಿರೋದು   ಮಹಾ  ಆರ್ಚಕರಲ್ಲವಾ?”
    “ಹೌದು.  ಧಾನ   ಭಂಗ   ಉಂಟಾಗಬಾರದು   ಅಂದಿದ್ದಾರೆ.”
    “ಒಳ್ಳೆದು,  ಭಕ್ತನ    ಕಣ್ಣಿಗೆ    ದೇವರು    ಎಲ್ಲಿದ್ದರೂ         ಕಾಣಿಸಿಕೊಳ್ತಾನೆ. ಇಲ್ಲಿಂದಲೇ   ಪ್ರಾರ್ಥನೆ  ಸಲ್ಲಿಸ್ತೇವೆ.”
    ಮುಖ್ಯ     ಅರ್ಚಕ    ಒಂದು     ಕ್ಷಣ         ವಿವಂಚನೆಗೊಳಗಾದ. (ಇವರ ಜಗಳದಲ್ಲಿ   ನನಗೇನು   ಆಪತ್ತು     ಉಂಟಾಗ್ರದೋ?')
     ಹೆಖ್ವೆಟ್   ಅಂಗಳದ    ಹಾಸುಗಲ್ಲುಗಳ     ಮೇಲೆ     ಮಂಡಿಯೂರಿ,    ಅಂಗೈ ಗಳನ್ನು    ಮುಂದಕ್ಕೆ    ಚಾಚಿದ.    ಪರಿವಾರದವರೂ    ಹಾಗೆಯೇ    ಮಾಡಿದರು.        ಸೆರ್ಕೆಟನಾ  ಅವರನ್ನು  ಅನುಸರಿಸಿದ.
     ಗಟ್ಟಿಯಾಗಿ   ಹೆಖ್ವೆಟ್   ಆಂದ:
     "ಓ   ಸೃಷ್ಟಿಕರ್ತ  ರಾ,   ಜಗತ್ತಿನ   ಮೇಲೆ   ನಿನ್ನೆ   ಆಳ್ವಿಕೆ     ಶಾಶ್ವತವಾಗಲಿ. ಐಗುಪ್ತದ  ಸುಖ  ಸಂಪತ್ತು  ಹೆಚ್ಚಲಿ!   ನೀಲನದ   ಎಂದೂ    ಬತ್ತದಿರಲಿ !   ರಾ        ಪುತ್ರ   ಪೆರೋ    ನಿತ್ಯಯೌವನದಿಂದ   ಮರೆಯಲಿ!   ಈ  ದೇಶದ  ಎರಡು   ಸಹಸ್ರ ದೇವತೆಗಳು  ನಿನ್ನ  ಪ್ರಜೆಗಳ  ಕಲ್ಯಾಣ  ಸಾಧಿಸಲಿ !”
    ಪ್ರತಿಯೊಂದು    ಪದವೂ    ಸ್ಪಷ್ಟವಾಗಿ    ಹೇಪಾಟ್ಗೆ     ಕೇಳಿಸಿತು.       ಆದರೆ ಅವನ    ಶರೀರ   ಒಂದಿನಿತೂ     ಮಿಸುಕಲಿಲ್ಲ.     ಮಂಡಿಯೂರಿದವರೆದು      ಅಂಗೈ ಗಳನ್ನು   ಜೋಡಿಸಿ   ನಿಂತರು.  ಆಗಲೇ    ಒಳಹೋಗಿದ್ದ    ಮುಖ್ಯ      ಆರ್ಚಕ  ಜೊಂಡಿನಿಂದ   ಹೆಣೆದ   ತಟ್ಟೆಯಲ್ಲಿ   ಬೆಳಿಗ್ಗೆ   ದೇವರಿಗೆ   ಅರ್ಪಿಸಿದ್ದ    ಅಂಜೂರ,       ಖರ್ಜೂರ  ಹಣ್ಣುಗಳೊಡನೆ  ಮರಳಿದ. ಹೆಖ್ವೆಟ್     ಆದಿಯಾಗಿ      ಎಲ್ಲರಿಗೂ

ಪ್ರಸಾದ ವಿತರಣೆ ಮಾಡಿದ.