ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ೩೬೪                              ಮೃತ್ಯುಂಜಯ

ನಾನು ಮಾಡ್ತೇನೆ. ಬಕಿಲ ಅಧಿಪತಿಯಾಗಿ ಬರ್ತಾನೆ. ವಿರಸವೇ ಮುಂದು ವರಿಯೋದಾದರೆ ಆಮೆನೊಮೆಪೆಟ್ ಕಾರ್ಯೋನ್ಮುಖನಾಗ್ತಾನೆ...." "ಅಮೆನೊಮೆಪೆಟ್ ಮೇಲೆ ಬಹಳ ವಿಶ್ವಾಸವಿಟ್ಟಿದ್ದೀರಿ.” "ಹ್ಞ. ಅವನನ್ನು ಹತ್ತು ಸಹಸ್ರ ಐಗುಪ್ತ ಯೋಧರ ಸೇನಾನಿ ಮಾಡ್ತೇನೆ.” "ರಾಜಿಯಾದರೆ ಟೆಹುಟಿ ಮೇಲೆ ಆಮೆರಬ್ ದ್ವೇಷ ಸಾಧಿಸಬಹುದೇನೋ." “ನನಗೆ ಅಷ್ಟೂ ತಿಳೀದು ಅಂದ್ಕೊಂಡಿದಿಯಾ? ನಿನ್ನ ರಕ್ಷಣೆ ನನ್ನ ಹೊಣೆ." "ಮೊನ್ನೆ ನಡೆದ ಔತಣದ ವಿಷಯ ನೀವು ಬಲ್ಲಿರಿ.” "ಬಲ್ಲೆ. ನಿನ್ನ ಗೌರವಾರ್ಥವೂ ಒಂದು ಔತಣ ಏರ್ಪಡಿಸೋಣ.ಕುಡಿತ,ಕುಣಿತ,ಲೆಕ್ಕವಿಲ್ಲದ ಭಕ್ಷ್ಯ ಭೋಜ್ಯಗಳು.ಇಷ್ಟೇ ತಾನೆ ಔತಣ ಎಂದರೆ?" ಟೆಹುಟಿ ಸುಮ್ಮನಾದ. ಯಾವ ಅಳುಕೂ ಬೇಡ ಅನ್ನುವಂತೆ,ಹೇಪಾಟ್ ತನ್ನ ಸೊರಗಿದ ಟಿತುಗಳ ಮೇಲೆ ಕಿರುನಗೆ ಮೂಡಿಸಿದ.ಟೆಹುಟಿಯ ಮುಖ ತುಸು ಅರಳಿದು ವನ್ನು ಕಂಡು ಅವನೆಂದ : "ನೀವು ಮಂದಿರದಲ್ಲೇ ಇದ್ಬಿಡಿ. ಕೆಳಗೆ ಹೋಗಿ ಆ ಹೆಖ್ವೆಟ್ ನ ಬಾಯಿಗೆ ಬೀಳ್ಬೇಡಿ. ನೀರಾನೆ ಪ್ರಾಂತದ ಭೂಮಾಲಿಕರು ಹೊರಟು ಹೋದರೊ?" ಮಹಾ ಅರ್ಚಕ ತನ್ನ ಕಡೆ ನೋಡಿದುದನ್ನು ಗಮನಿಸಿ ಬಕಿಲ ಅಂದ : “ ಇಲ್ಲ. ಇನ್ನೂ ಇಲ್ಲೇ ಇದ್ದಾರೆ.” ತನ್ನ ಆಪ್ತ ಸಹಾಯಕ ದೇವಸೇವಕನತ್ತ ನೋಡಿ ಹೇಪಾಟ್ ನುಡಿದ: “ ನೀನು ಹೋಗಿ ಆ ಭೂಮಾಲಿಕರಿಗೆ ಹೇಳು. ದೋಣಿಕಟ್ಟೆ ಹತ್ತಿರ ಬಚ್ಚಿಟ್ಕೊಂಡಿರ್ಲಿ ಯಾವುದಾದರೂ ದೋಣಿ ಹತ್ಕೊಂಡು ಇಲ್ಲಿಂದ ಹೊರಟು ಹೋಗ್ಲಿ. ಹೆಖ್ವೆಟ್ ನ ಕೈಗೆ ಅವರು ಸಿಗಬಾರ್ದು.” ದೇವಸೇವಕನೆಂದ: