ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೦೯ ನೀರಾನೆ ಕ್ರಿಮಿ ಎಲ್ಲಾದರೊ ತಪ್ಪಿಸಿಕೊಂಡರೆ-” ಅಮಾತ್ಯ ಸಿಟ್ಟು ನುಂಗಿಕೊಂಡು ಅಂದ: “ಆತ ಇವತ್ತಿನಿಂದಲೇ ದಿಗ್ಬಂಧನದಲ್ಲಿತ್ತ್ರಾನೆ. ಮಹಾ ಅರ್ಚಕರು ಚಿಂತಿಸಬೇಕಾಗಿಲ್ಲ." ಹೇಪಾಟ್ಗೆ ಮೆಲ್ಲನೆ ಮತ್ತೇರತೊಡಗಿತ್ತು, ಅದನ್ನು ಆತ ನಿಗ್ರಹಿಸಲು,ಯತ್ನಿಸುತ್ತ, ಪ್ರಯಾಸಪಟ್ಟು ಸುಸ್ಪಷ್ಟ ಪದಗಳನ್ನು ಹೊರಡಿಸಿದ: “ಚಿಂತೆ ? ನನಗೆ ? ನೀವು ಅಮಾತ್ಯರೇ-ಚಿಂತಿಸಬೇಕಾದವರು ನೀವು.” "ಈ ಹೇಪಾಟ್ಗೆ ಇನ್ನಷ್ಟು ಕುಡಿಸಿದರೆ ಒಳಗಿರೊ ಯೋಚನೆ ಗಳನ್ನೆಲ್ಲ ಹೊರಕ್ಕೆ ಎಳೀಬಹುದು'-ಎಂದುಕೊಂಡ ಹೆಖ್ವೆಟೆ. ಆದರೆ ಸ್ವತಃ ಆತನಿಗೇ ಜಡವೆನಿಸಿತು: ಮೈ ಬಾಗಿಸಿಕೊಂಡು ಪೀಠಕ್ಕೆ ಒರಗುವಂತಾಯಿತು. ಈ ದಿನವೂ ನಿತ್ಯದಂತೆ ಪೆರೋ ಕಡಿಮೆ ಆಹಾರ ಸೇವಿಸಿದ್ದ, ಮಹಾ ಅರ್ಚಕ ಮತ್ತೆ ಗದ್ದಲ ಆರಂಭಿಸಲು ಅವಕಾಶ ನೀಡಬಾರದೆಂದು ಆತ ತೇಗಿದ. ತನ್ನ ಹೊಣೆಯನ್ನರಿತಿದ್ದ ಮಹಾರಾಣಿ ಹೆಚ್ಚು ಕುಡಿದಿರಲಿಲ್ಲ.ಪೆರೋ ತೇಗಿ ದಾಗ ಅವಳಿಗೆ ಸಮಾಧಾನವಾಯಿತು. ರಾಜಕುಮಾರನನ್ನು ಎಬ್ಬಿಸಿದಳು ;ತಾನು ಎದ್ದಳು. ಭೋಜನ ಮುಗಿಯಿತು.

  • * * *

ಹೇಪಾಟ್ ಮಹಾಮಂದಿರಕ್ಕೆ ತೆರಳಿದ ಹೆಖ್ವೆಟ್ ತನ್ನ ಮನೆಗೆ ಹೋದ. ಆಮೆರಬ್ ಮಾತ್ರ ಅರಮನೆಯಿಂದ ಕದಲುವಂತಿಲ್ಲ, ಅಮಾತ್ಯ ಭವನದಲ್ಲಿ ಕುಳಿತು ಸಾರಿಗೆ ಅಧಿಕಾರಿ, ಉಗ್ರಾಣದ ಅಧಿಕಾರಿ, ಪಾಕಶಾಲೆಯ ಅಧಿಕಾರಿ, ಬೊಕ್ಕಸದ ಲೆಕ್ಕಿಗ ಮತ್ತಿತರರನ್ನೆಲ್ಲ ಕರೆಸಿ ಆತ ಸಮಾಲೋಚನೆ ನಡೆಸಿದ. ಸಹಸ್ರ ಸಹಸ್ರ ಜನರ ದುಡಿಮೆಯ ಅಗತ್ಯವಿತ್ತು, ಸೆಡ್ ಉತ್ಸವದ ಸಿದ್ಧತೆಗೆ. ಕಾರಾಗೃಹದ ಅಧಿಕಾರಿಯನ್ನು ಕರೆದು ಅಮಾತ್ಯ ಹೇಳಿದ: “ಸೆಡ್ ಉತ್ಸವದ ಮುನಾ ದಿನ ರಾತ್ರೆ ಕೈದಿಗಳನ್ನೆಲ್ಲ ಬಿಡುಗಡೆ ಮಾಡ್ಬೇಕು.”