ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

                ಬೇಡಿ, ವಾಪಸಾಗುವಾಗ ತಗೊಳ್ತೇನೆ. ಅಷ್ಟೊಂದು ಬಂಗಾರ ಹೊತ್ಕೊಂಡು ದಕ್ಷಿಣದ ಕಡೆ
           ಯಾಕೆ ಹೋಗ್ಲಿ ? ದಾರೀಲಿ ನೀರಾನೆ ಪ್ರಾಂತದಂಥ ಅಪಾಯದ ಸ್ಥಳಗಳು ಬೇರೆ." 
               “ಅರಮನೆಯ ಪ್ರೀತಿಪಾತ್ರ ವರ್ತಕರಾದ ನಿಮಗೆ ಐಗುಪ್ತದಲ್ಲಿ ಯಾರಿಂದಲೂ ಅಪಾಯ ತಟ್ಟದು, 
          ಸೆಡ್ ಉತ್ಸವ ಆದ್ಮೇಲೆ ನೀರಾನೆ ಪ್ರಾಂತವೂ ಸುರಕ್ಷಿತವಾಗ್ತದೆ. ಅಲ್ಲಿಗೆ ನಮ್ಮ ದಂಡು ಕಳಿಸ್ತೇವೆ.
                ಕೆಫ್ಟು ಗೌರಪೂರ್ವಕವಾಗಿ ವಂದಿಸಿ, ತಲೆಯೆತ್ತಿ ಹೇಳಿದ :
               “ದೃಢವಾದ ಆತ್ಮವಿಶ್ವಾಸವನ್ನೂ ತೋಳ್ಬಲವನ್ನೂ ಸೂಚಿಸುವ ಅಧಿ ಕಾರವಾಣಿ! ನಿಮ್ಮ ದೇಶದಲ್ಲಿ 
             ಹೊಸ ಉಸಿರು ಸಂಚರಿಸ್ತದೆ, ಮಹಾರಾಣಿ.... ಆಭರಣಗಳ ಮೌಲ್ಯವನ್ನು ಈಗಲೇ ಪಡೀಬೇಕು ಅನ್ನೋ
             ಆತುರ ನನಗಿಲ್ಲ. ಮೂರು ಸಹಸ್ರ ದೆಬೆನ್ ಬಂಗಾರ ಆಮೇಲೆ ಕೊಡುವಿರಂತೆ.”
              “ಇವತ್ತಿನಿಂದ ಹತ್ತನೇ ದಿವಸ ಸೆಡ್ ಉತ್ಸವ. ಅದನ್ನು ಮುಗಿಸಿಕೊಂಡು ಇಲ್ಲಿಂದ ಮುಂದಕ್ಕೆ 
             ಹೋಗಿ ಕೆಫ್ಟು "
             “ನನ್ನೂರಿನಿಂದ ಹೊರಡ್ತಾ ನಾನೂ ಹಾಗೆ ಯೋಚಿಸಿದ್ದೆ, ಒಡತಿ. ಆದರೆ ದಾರಿಯಲ್ಲಾದ ವಿಲಂಬದ
          ಕಾರಣ ನಾನು ಬೇಗ ಬೇಗನೆ ಪ್ರವಾಸ ಮುಗಿಸ್ಬೇಕು. ಪ್ರಯತ್ನಿಸ್ತೇನೆ. ಉತ್ಸವದ ಹೊತ್ತಿಗೆ ಇಲ್ಲಿಗೆ
         ವಾಪಸು ಬಂದರೂ ಬಂದೆ.”
            “ವರ್ತಕರು. ನಿಮಗೆ ವ್ಯಾಪಾರ ಮುಖ್ಯ.”
            “ನಾನು ಅರಿಯದೆ ಮಹಾರಾಣಿಯ ಮನಸ್ಸನ್ನು ನೋಯಿಸಿದ್ದರೆ ಕ್ಷಮಿಸ್ಬೇಕು.”
           "ಕ್ಷಮಿಸಿದ್ದೇವೆ ಉತ್ಸವಕ್ಕೇನಾದರೂ ಬರದಿದ್ದರೆ ನೀವು ತಪ್ಪು ಕಾಣಿಕೆ ಕೊಡಬೇಕಾದೀತು.
         ಒಬ್ಬ ಗುಲಾಮನನ್ನು_____”
           “ನಾನೇ ಗುಲಾಮನಾಗಿ ಇಲ್ಲಿರಲಾ ?”
           "ಊಹೂಂ. ನೀವು ಹತ್ತು ದೇಶ ಸುತ್ತುತ್ತಿದ್ದರೇ ನಮಗೆ ಲಾಭ. ನುಬಿಯದಿಂದ ಒಬ್ಬ ಕುಳ್ಳ
          ಮನುಷ್ಯಪ್ರಾಣಿಯನ್ನು ತನ್ನಿ"
          “ತರ್ತೇನೆ ಮಹಾರಾಣಿ!”
                 *                         *                         *                             *