ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨ ಮೃತ್ಯುಂಜಯ ಆದರೂ ದೇಶದ ಗಡಿ ರಕ್ಷಣೆಯ ವಿಷಯದಲ್ಲಿ ಅಲಕ್ಷ್ಯ ಮಾಡಿಯೂ ಇಲ್ಲ.”

   “ಸಂತೋಷದ ಸಂಗತಿ. ಸ್ನೇಹಿತರ ಉತ್ಕರ್ಷದಿಂದ ನಮಗೆ ಸಹಜವಾಗಿಯೇ ಆನಂದವಾಗ್ತದೆ.”
   “ಮಹತ್ವದ ಸುದ್ದಿ—ಕಂಚಿಗಿಂತಲೂ ಗಟ್ಟಿಯಾದ ಒಂದು ಲೋಹವನ್ನು ಅವರು ಕಂಡುಹಿಡಿದಿದ್ದಾರೆ.”
   “ಹೌದೆ? ಹೌದೆ? ಎಂಥ ಲೋಹ?”                                                         
   “ಹೆಸರಿಟ್ಟಿಲ್ಲ. ನೋಡೋದಕ್ಕೆ ಕಪ್ಪಗಿದೆ.”                                       
   “ಎರಡು ಲೋಹಗಳ ಮಿಶ್ರಣದಿಂದ ಅದನ್ನು ತಯಾರಿಸ್ತಾರೊ ?”                      
   “ನೇರವಾಗಿ ಕಲ್ಲುಮಣ್ಣಿಂದ್ಲೇ ಪಡೀತಾರಂತೆ.”                                       
   “ವಿಧಾನ ಯಾವುದೊ ?”
   “ಮಹಾ ಗೋಪ್ಯ.  ಅರಮನೆಯ ಕರ್ಮಾಗಾರದಲ್ಲಿ ಅದು ಗುಟ್ಟಾಗಿ ಸಿದ್ಧವಾಗ್ತಿದೆ.”
   “ಖಂಡಿತ ಬಂಗಾರದಷ್ಟು ಬೆಲೆ ಉಳ್ಳದ್ದು ಅಲ್ಲ ಅಲ್ಲವೆ?....”                     
   “ಬೆಲೆ ಅಷ್ಟಿಲ್ಲ.  ಆದರೆ, ಹೇರಳವಾಗಿ ಈ ಲೋಹ ಸಿಕ್ಕಿದ್ರೆ ಶಕ್ತಿಯುತ ಅಸ್ತ್ರಗಳನ್ನು ತಯಾರಿಸ್ಬೌದು. ಆಗ ಬೇರೆಯವರ ಬಂಗಾರವೆಲ್ಲ ಸುಲಭವಾಗಿ ಅವರ ವಶವಾಗ್ತದೆ.”
   ಅಮಾತ್ಯ ಯೋಚನಾಮಗ್ನನಾದ.  ನಿಧಾನವಾಗಿ ಆತನೆಂದ:                    
  “ಅಸ್ಸೀರಿಯ ನಮ್ಮ ಮಿತ್ರದೇಶ. ಆದರೂ ಈ ಹೊಸ ಲೋಹದ ಸುದ್ದಿ ದಿಗಿಲು ಉಂಟು ಮಾಡುವಂಥಾದ್ದು.  ನಿಮ್ಮನ್ನು ನೋಡಿದಾಕ್ಷಣ ಎಲ್ಲ ಅರ ಮನೆಗಳ ಬಾಗಿಲುಗಳೂ ತೆರೆದುಕೊಳ್ತವೆ. ಮುಂದಿನ ಸಲ ನೀವು ಅಸ್ಸೀರಿಯದ ದೊರೆಯ ಆತಿಥ್ಯ ಸ್ವೀಕರಿಸುವಾಗ ಈ ಕಪ್ಪು ಲೋಹದ ವಿಷಯ ವಿವರವಾಗಿ ತಿಳೀಬೇಕು. ಒಬ್ಬಿಬ್ಬರು ಆ ಲೋಹ ಕರಗಿಸೋ ತಜ್ಞರನ್ನೂ ನಮಗೆ ತಂದುಕೊಡ್ಬೇಕು.”
 “ಅರಮನೆ ಬಾಗಿಲುಗಳು ತೆರೆದುಕೊಳ್ತವಾ ನನ್ನ ಎದುರು ? ಇಲ್ಲಿ ಅರಮನೆ ಆವರಣದಲ್ಲಿ, ಒಬ್ಬ ಸಾಮಾನ್ಯ ಮನುಷ್ಯನನ್ನು ನೋಡೋದಕ್ಕೂ ನಾನು ಅಶಕ್ತ !”
  ಆಮೆರಬ್ ಉಗುಳು ನುಂಗಿದ.     ಆತ ಯೋಚಿಸಿದ: ದೀರ್ಘಾವಧಿ