ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೩೩ ಖ್ನೆಮುಗೆ ಹೇಳ್ಬೇಕು.” "ತಬಬುವಾ ತುಂಬಾ ಖುಷೀಲಿದ್ದಾಳೆ." "ಪ್ರೀತಿಯ ಮಗಳು ಬಸುರಿ ಖುಷಿ ಸಹಜವೇ." ಬಟಾನ ಕಿರಿಯ ಕುವರಿ ಅಂದಳು : "ಮನೆಗೆ ಹೋಗೋಣ ಅಪ್ಪ." "ನಡೀರಿ," ಎನ್ನುತ್ತ ಬಟಾ ಎದ್ದ. "ಹೋಗಿ ಬಾ ಅಣ್ಣ," ಎಂದಳು ನೆಫಿಸ್.

               *                               *                                 *                                  *

ಗಂಡ ಊರಿಗೆ ಬಂದದು ತಿಳಿದೊಡನೆ ಬಟಾನ ಹೆಂಡತಿ ತಬಬುವಾಳಲ್ಲಿಗೆ ಹೋಗಿ ಒಂದು ಹೂಜಿ ಖಿವವ ಎರವಲು ತಂದಳು. ಮಾಂಸದ ತುಣುಕುಗಳ ಉಪ್ಪೇರಿ ಮಾಡಿದಳು. ಮಕ್ಕಳೊಡನೆ ಗಂಡ ಮನೆಯೊಳಕ್ಕೆ ಕಾಲಿರಿಸುತ್ತಲೇ "ಬಿಸಿ ರೊಟ್ಟಿ ತಟ್ತೇನೆ. ಏಳು ಊಟಕ್ಕೆ,” ಎಂದಳು. ಪಡಸಾಲೆಯ ಮಧ್ಯದಲ್ಲಿರಿಸಿದ್ದ ಹೂಜೆ ನೋಡಿ ಬಟಾ, “ನಿಮ್ಮಮ್ಮ ಒಳ್ಳೇವಳು !" ಎಂದು ಮಕ್ಕಳಿಗೆ. ಬೇರೆ ಊರುಗಳಿಂದ ಬರುತ್ತ ಎಂದೂ ಏನೂ ತಂದವನಲ್ಲ ಬಟಾ. ಉಡುಗೊರೆ ನಿರೀಕ್ಷಿಸುವ ಅಭ್ಯಾಸವು ಮಡದಿ ಮಕ್ಕಳಿಗೆ ಇರಲಿಲ್ಲ. ಆತ ಆಗಾಗ್ಗೆ ಮನೆಗೆ ಬರುವುದೇ ಅವರಿಗೆ ಮುಖ್ಯವಾಗಿತ್ತು. “ಏನೇನ್ಕಂಡೆ?" ಎಂದೂ ಅವರು ಕೇಳುತ್ತಿರಲಿಲ್ಲ. ಆಗ ಚೂರು ಈಗ ಚೂರು ಅವನೇ ಹೇಳುತ್ತಿದ್ದ. ಈ ದಿನ ಊಟ ಮುಗಿಯುವುದಕ್ಕೆ ಮೊದಲೇ ಮತ್ತೆ ಜನ ಬರತೊಡ ಗಿದರು. ಬೇರೆಯವರು-ತಡವಾಗಿ ಸುದ್ದಿ ಸಿಕ್ಕಿದವರು. “ಬನ್ನಿ ಬನ್ನಿ ನೀವೂ ಊಟಕ್ಕೆ,” ಎಂದ ಬಟಾ. “ಬೇಡ, ನೀನು ಉಣ್ಣು,” ಎಂದರು ಅವರು. “ನೀರಾನೆ ಪ್ರಾಂತದವರು ಎಂದರೆ ಸಾಕು. ಎಲ್ಲರೂ ಕಣ್ಣರಳಿಸಿ ನೋಡ್ತಾರೆ," ಎಂದ. ಕೇಳುವವರಿಗೆ ಹೆಮ್ಮೆ. ಇಲ್ಲಿ ಆ ಎರಡು ತಿಂಗಳಲ್ಲಿ ಏನಾಯಿತೆಂಬುದನ್ನು ಆತ ಕೇಳಿ ತಿಳಿದ.

     ೨೮