ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಮೃತ್ಯುಂಜಯ

"ಓ ಒಸೈರಿಸ್, ಓ ಒಸೈರಿಸ್...."
ಜಾರು ಬಂಡಿ ಗೋರಿಯನ್ನು ತಲಪಿದಾಗ, ದಡ ಮುಟ್ಟಿದ ನಾವೆ
ಯಾಯಿತು, ಮೆರವಣಿಗೆ. ಹೊಯ್ದಾಡಿತು.
ಗೋರಿಯ ಬಾಗಿಲಿಗೆ ಹಾಕಿದ ಆವೆ ಮಣ್ಣಿನ ಮುದ್ರೆಯನ್ನು ಮಹಾ
ಅರ್ಚಕ ಹೊಡೆದ. ತೆರೆದ ಬಾಗಿಲು ಒಳಹೋಗಲು ದಾರಿ ಮಾಡಿಕೊಟ್ಟಿತು.
ಮಹಾ ಅರ್ಚಕ ಮತ್ತು ಅವನನ್ನು ಹಿಂಬಾಲಿಸಿ ಪೆರೋ ಒಳಕ್ಕೆ ಹೆಜ್ಜೆ
ಇಟ್ಟರು. ಜನರ ಒತ್ತಡವನ್ನು ತಡೆಯಲು ಗೋರಿಯ ಸುತ್ತಲೂ ರಾಜ
ಭಟರು ವ್ಯೂಹ ರಚಿಸಿದರು.
ಜನರಿಗೆ ಅಂತ್ಯಕ್ರಿಯೆಗಳು ಕಾಣಿಸದಂತಹ ಪರಿಸ್ಥಿತಿ.

****

ದಿಬ್ಬದ ಮೇಲಿನ ಅನುಭವಿ ಯಾತ್ರಿಕ ಆ ಬಗೆಗೂ ಅರಿತಿದ್ದ :
"ಅಲ್ಲಿ ಏನಾಗ್ತದೇಂತ ನನಗೆ ಗೊತ್ತಪ್ಪ. ಹೋದ ಸಲ ಒಬ್ಬ ದೇವ
ಸೇವಕನನ್ನು ಕೇಳಿ ಎಲ್ಲಾ ತಿಳ್ಕೊಂಡೆ. ಗೋರಿಯ ಒಳಗೆ ಭಾರಿ ನೆಲ
ಮಾಳಿಗೆ. ಮೂರು ಅಂಕಣ. ಕಲ್ಲಿನ ಕಟ್ಟಡ. ಒಂದು ಅಂಕಣವನ್ನು
ಗಾರೆ ಹಾಕಿ ಪೂರ್ತಿ ಮುಚ್ಚಿಬಿಟ್ಟಿದ್ದಾರೆ. ಒಸೈರಿಸನ ನಿಜವಾದ ರಕ್ಷಿತ ಶವ
ಇರೋ ಪೆಟ್ಟಿಗೆ ಅದರಲ್ಲಿದೆ. ನಿಜವಾದ್ದು ಅಂದರೆ ತಲೆ ಮಾತ್ರ ಅನ್ನಿ.
ಮೆದುಳು ಶ್ವಾಸಕೋಶ ಕರುಳೂ ಅಲ್ಲಿವೆಯಂತೆ. ಹಾಗಾದರೆ ಮೆರವಣಿಗೆ
ಯಲ್ಲಿ ತಗೊಂಡು ಹೋದ್ದು ಯಾವ ಮೆದುಳು__ಶ್ವಾಸಕೋಶ ? ಅಲ್ದೆ, ದೇಹ
ಹೋಳು ಹೋಳಾಗಿತ್ತು ಅಂದ್ಮೇಲೆ ಶ್ವಾಸಕೋಶ___ಕರುಳು ಸಿಗ್ತೋ
ಇಲ್ವೋ ? ಏನೇ ಇರಲಿ___ಶವಪೆಟ್ಟಿಗೇಲಿ ಬಂಗಾರ ಗಿಂಗಾರ ಇರೋ
ಹಾಗೆ ಕಾಣೆ. ಇದ್ದಿದ್ರೆ ಗೊತ್ತಲ್ಲ....ಸಿಂಹಾಸನದ ಪ್ರತಿರೂಪ ಇತ್ಯಾದಿ
ಮಾಡಿ ಇನ್ನೊಂದು ಅಂಕಣದಲ್ಲಿ ಇಟ್ಟಿದ್ದಾರೆ. ಎಲ್ಲಾ ಮರದ್ದೇ ಅಂತೆ.
ಹೊರದ್ವಾರದ ಹತ್ತಿರದ ಅಂಕಣ ಖಾಲಿ. ಅದರಲ್ಲೇ ಧೂಪಗೀಪ ಹಚ್ಚಿ,
ಮೆರವಣಿಗೆಯಲ್ಲಿ ತಗೊಂಡು ಹೋದ ಮಂಚ___ಶವಪೆಟ್ಟಿಗೆ___ಪೆಟಾರಿಗಳನ್ನು
ಇಟ್ಟು ಪ್ರಾರ್ಥಿಸ್ತಾರೆ. ಐಸಿಸ್ ಕಟ್ಟ ಕಡೇದಾಗಿ ಅಳ್ತಾಳೆ___ಗಂಡನನ್ನು
ಮಣ್ಣು ಮಾಡೋದಕ್ಕೆ ಮುಂಚೆ ಹೆಂಡತಿ ಅಳೋದಿಲ್ವಾ ?___ಹಾಗೆ. ಶವ
ಪೆಟ್ಟಿಗೇನ ಅಂಕಣದೊಳಕ್ಕೆ ಇಳಿಸುವಾಗ ಮಹಾಅರ್ಚಕ "ಶಾಂತಿ ! ಶಾಂತಿ !
ಮಹಾದೇವನೆಡೆಗೆ !" ಅನ್ತಾರೆ. ಎಲ್ಲರೂ ಹೊರಗೆ ಬರ್ತಾರೆ. ಬಾಗಿಲೆಳೆದು