ಈ ಪುಟವನ್ನು ಪರಿಶೀಲಿಸಲಾಗಿದೆ

ಮತ್ಯುಂಜಯ ಬಿಟ್ಟಂತಿತ್ತು. ತಣ್ಣನೆ ಗಾಳಿ ಬೀಸುತ್ತಿತ್ತು, ಹದವಾಗಿ, ಅಂಬಿಗರ ಎಚ್ಚರಿಸುವ ಶಪಿಸುವ ಬಿರುನುಡಿಗಳು ಅಲೆಗಳಾಗಿ ಹರಡುತ್ತಿದುವು ಚುಕ್ಕಾಣಿಯ ಬಳಿ బటా ಬುಡ್ಡಿ ದೀಪವಿರಿಸಿ, ತಾನು అವರೆದುರು ನೆಟ್ಟಗೆ నింತಿದ್ದ, ಪೆರೋ ಭಂಗಿಯಲೀ.

  ಸಮೀಪಿಸುತ್ತಿದ್ದಂತೆ ಮೆನೆಫ್ ಟಾ ಅವನ ಗುರುತು ಹಿಡಿದ.
"ನಮ್ಮ ದೋಣಿ ಇಲ್ಲಿದೆ!” ಎಂದು ಗುಂಪಿನವರಿಗೆ ಕೂಗಿ ನುಡಿದ.

ಬಟಾ ಕಣ್ಣಿಗೆ ಬಿದ್ದನೆಂದು ಎಲ್ಲರಿಗೂ ಸಂಭ್ರಮ. ಮೆನೆಫ್ ಟಾ ಹೇಳಿದ:

"ತುತ್ತು ಊಟ ಇಲ್ಲೇ ಮುಗಿಸಿ ದೋಣಿ ಹತ್ತೊದು ಮೇಲು.”

"ಹೌದು,ಹೌದು,"ಎಂದರು ಹಲವರು. ಒಬ್ಬ ಕರೆದ: "ಬಟಾ ನೀವೆల్ల ದಂಡೆಗೆ ಬಂದ್ಬಿಡಿ. ನಮ್ಮ ಜತೆ ಉಣ್ಭೇಕು. ಇವತ್ತು ನಾವೆಲ್ರೂ ಬೂತ್ತಿ ಹಂಚ್ಕೊಂಡ್ಬಿಟ್ವಾ" ಇನ್ನೊಬ್ಬನೆಂದ : " ಚೀಲದಲ್ಲಿ ಸ್ವಲ್ಪ ಖಿವವ ಇನ್ನೂ ಇದೆ. ಬಟಾ ಅಣ್ಣ ನೀನು ರುಚಿ ನೋಡೇ ಇಲ್ವಲ್ಲ....” ಬಟಾನನೂ ಅವನ ಸಹಾಯಕರೂ ದಂಡೆಗೆ ಜಿಗಿದರು. "ಮೆರವಣಿಗೆ ದೂಳು ತಿಂದು ತಿಂದು ಗಂಟಲು ಮುಚ್ಕೊಂಡಿದೆ.ಮೊದಲು ಖಿವವ ಕೊಡಿ," ಎಂದ ಬಟಾ. "ಮೆರವಣಿಗೇಲಿ? ನೀನು?" ಎಂದ ಒಬ್ಬ. "ನನ್ನವರೆಲ್ಲ ಮಧಾಹ್ನ ಸಂತೆ ಸುತ್ಕೋಂಡು ಬಂದ್ರು. ನಾನು ಮೆರವಣಿಗೆ ನೋಡಿ ಅದು ಗೋರಿ ತಲಪಿದ್ಕೂಡ್ಲೆ ಹೊರಟ್ಟಂದೆ...” "ಭಪ್ಪರೆ ! ನಮ್ಮನ್ನು ನೋಡ್ಡಾ ?" “ ನನಗೇ ನಾನೇ ಕಾಣಿಸ್ತಿರ್ರಿಲ್ಲ ! ನಿಮ್ಮನ್ನು ಹ್ಯಾಗೆ ಹುಡುಕ್ಲಿ ?" ಸಣ್ಣಗೆ ನಕ್ಕು ಮೆನೆಫ್ ಟಾ ಆಂದ : "ಏನೇ ಇರ್ಲಿ. ಆಂತಿಮ ಯಾತ್ರೆ ನೋಡಿದ್ಯಲ್ಲ. ನಮಗದೇ ಸಮಾಧಾನ....”