ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೮

                                         ಮೃತ್ಯುಂಜಯ
                                                                   
        “ನಾನು ಅಲ್ಲಿರ್ತೇನೆ." 
        "ಹೂಂ   ಮೆನ್ನಯ್ಯ .   ನನಗೆ   ಬುದ್ಧಿ    ಇಲ್ಲ ,   ನೀವು   ಬೇರೆನಾ  ?   ನಾವು   ಬೇರನಾ  ? ”
         “ಹತ್ತಿರದಲ್ಲೇ     ನೀವು   ಬಚ್ಚಿಟ್ಟೊಂಡಿರಬೇಕು   ನೀವು     ಕತ್ತಲಾದ     ತಕ್ಷಣ     ಏನಾದರೂ ಸಾಧ್ಯವಾದರೆ-”
        "ಸರಿ."
       ...ಆ   ರಾತ್ರಿ    ಇನ್ನುಳಿದ     ಅಬ್ಛು     ಯಾತ್ರಿಕರು    ಅರಮನೆಯ    ದೀಪಾ    ಲಂಕಾರ         ನೋಡಿದರು.  ( ಸಹಸ್ರಾರು   ಪಂಜುಗಳು ,   ಹಲವು   ಸಹಸ್ರ   ಹಣತೆ  ಗಳು . )    ಅರಮನೆಯ   ಬಯಲಲ್ಲಿ  ನಡೆದ ಹಾಡು ,    ಕುಣಿತ ,   ಕುಸ್ತಿಗಳಿಗೆ   ಅವರು    ಪ್ರೇಕ್ಷಕರಾದರು .     ಮಹಾಪ್ರಭು ,   ಮಹಾರಾಣಿ   ಮತ್ತು    ಅರಸು ಸಂತತಿಯನ್ನು    ಹೊತ್ತ     ರಾಜನಾವೆಗಳು      ಬೆಳಕಿನ      ಹಂಸಗಳಾಗಿ     ಸಂಗೀತದ    ಅಲೆ ಗಳ    ಮೇಲೆ ತೇಲಿದುದನ್ನು ,       ದಂಡೆಯ    ಮೇಲೆ     ನಿಂತು     ಕಂಡರು .  ಇವರು     ಸಣ್ಣ     ಸಣ್ಣ     ಗುಂಪುಗಳಾಗಿ, ಹರ್ಷವಿಲ್ಲದೆ ,   ನಗೆ      ಮಾತಿಲ್ಲದೆ ,   ಪಿಳಿಪಿಳಿ    ಕಣ್ಣು    ಬಿಡುತ್ತಿದ್ದ   ಮೂವತ್ತ    ಮೂರು     ಬಡಜನರು.
       ಅರಮನೆಯ    ಮಹಾದ್ವಾರದ      ಹೊರಗೆ      ಬಡವರಿಗೆ     ಭಕ್ಷ್ಯಗಳ    ವಿತರಣೆ    ಯಾಯಿತು .    ಈ ಜನ    ಅತ್ತ    ಹೋಗಲಿಲ್ಲ . 
       ಮಾನಸಿಕ   ಸಂಕಟದ    ಭಾರದಿಂದ    ಕುಗ್ಗಿ ,  ಬಳಲಿದ   ಪಾದಗಳನ್ನು    ಎಳೆದು   ನಡೆಯುತ್ತ ,  ಗೊತ್ತಾಗಿದ್ದ    ವೇಳೆಗಿಂತಲೂ    ಮೊದಲೇ    ದೋಣಿಯ    ಬಳಿಗೆ   ಬಂದು   ತಲಸಿದರು.....
        “ನಾಳೆ    ವಿಚಾರಣೆ ”  ಎಂಬ    ಪದಗಳು     ಅವರ    ಯೋಚನೆಗಳನ್ನು     ಒಂದಾಗಿ

ಬೆಸೆದುವು.

        ಅಹೂರಾ     ಊಟದ     ಉಸ್ತುವಾರಿ     ನೋಡಿದಳು .  ಮೆನ್ನನೂ  ಪ್ರಯಾಸ ಪಟ್ಟು     ಒಂದೆರಡು ತುತ್ತು    ನುಂಗಿದ.
       ಆ  ಇರುಳನ್ನು   ಅಲ್ಲಿ   ಕಳೆಯಬೇಕು.
       'ನಾಳೆ   ವಿಚಾರಣೆ.'
       ಬಟಾ ಅಂದ : 
      “ನಮ್ಮೂರಿಗೆ  ಇವತ್ತು   ಪ್ರಯಾಣವಿಲ್ಲ .  ನಾಳೆ .  ನಾಳೆ  ರಾತ್ರೆ. ”